More

    ಆಮೀರ್​ ಆನಂದಬಾಷ್ಪ … ಲಾಲ್​ ಸಿಂಗ್​ ಛಡ್ಡಾ ನೋಡಿ ಮೆಚ್ಚಿದ ಟಾಲಿವುಡ್​ ಮಂದಿ

    ಹೈದರಾಬಾದ್​: ಆಮೀರ್​ ಖಾನ್​ ಅಭಿನಯದ “ಲಾಲ್​ ಸಿಂಗ್​ ಛಡ್ಡಾ’ ಚಿತ್ರದ ಬಿಡುಗಡೆಗೆ ಇನ್ನೊಂದು ತಿಂಗಳು ಸಹ ಇಲ್ಲ. ಆಗಸ್ಟ್​ 11ಕ್ಕೆ ಚಿತ್ರವು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಸದ್ಯದಲ್ಲೇ ಚಿತ್ರದ ಪ್ರಚಾರ ಪ್ರಾರಂಭಿಸುವುದಕ್ಕೆ ಆಮೀರ್​ ಖಾನ್​ ತಯಾರಿ ನಡೆಸಿದ್ದು, ಮೊದಲ ಹಂತವಾಗಿ ಚಿತ್ರವನ್ನು ಟಾಲಿವುಡ್​ನ ಜನಪ್ರಿಯ ನಟರು ಮತ್ತು ತಂತ್ರಜ್ಞರಿಗೆ ತೋರಿಸಿದ್ದಾರೆ. ಅಷ್ಟೇ ಅಲ್ಲ, ಅವರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ.

    ಇದನ್ನೂ ಓದಿ: ಪುಟ್ಟಪರ್ತಿ ಸಾಯಿಬಾಬಾ ಬಯೋಪಿಕ್; ಓಂಸಾಯಿಪ್ರಕಾಶ್ ನಿರ್ದೇಶನದ 100ನೇ ಚಿತ್ರ

    ಕೆಲವು ವರ್ಷಗಳ ಹಿಂದೆ ಕ್ಯೋಟೋ ಏರ್​ಪೋರ್ಟ್​ನಲ್ಲಿ ಚಿರಂಜೀವಿ ಮತ್ತು ಆಮೀರ್​ ಖಾನ್​ ಭೇಟಿಯಾಗಿದ್ದರಂತೆ. ಹೀಗೆ ಶುರುವಾದ ಅವರಿಬ್ಬರ ಸ್ನೇಹ, ಈಗ “ಲಾಲ್​ ಸಿಂಗ್​ ಛಡ್ಡಾ’ದ ತೆಲುಗು ಅವತರಣಿಕೆಯನ್ನು ಚಿರಂಜೀವಿ ಅರ್ಪಿಸುವವರೆಗೂ ಮುಂದುವರೆದಿದೆ. ಚಿರಂಜೀವಿ ತೆಲುಗು ಅವತರಣಿಕೆಯನ್ನು ಅರ್ಪಿಸುತ್ತಿರುವುದರಿಂದ ಇತ್ತೀಚೆಗೆ ಹೈದರಾಬಾದ್​ನ ಅವರ ಮನೆಯಲ್ಲೇ ಚಿತ್ರದ ವಿಶೇಷ ಪ್ರದರ್ಶನ ಇಟ್ಟುಕೊಂಡಿದ್ದರು ಆಮೀರ್​.

    ಇದನ್ನೂ ಓದಿ: ವಸಿಷ್ಠಗೆ ಲವ್…ಲಿ ಸ್ಟೆಫಿ ನಾಯಕಿ; ಜಾರ್ಖಂಡ್​ನಿಂದ ಕನ್ನಡಕ್ಕೆ ಬಂದ ಚೆಲುವೆ

    ಈ ಪ್ರದರ್ಶನದಲ್ಲಿ ಚಿರಂಜೀವಿ ಜತೆಗೆ ನಾಗಾರ್ಜುನ, ನಾಗ ಚೈತನ್ಯ, ರಾಮ್​ಚರಣ್​ ತೇಜ, ನಿರ್ದೇಶಕರಾದ ಎಸ್​.ಎಸ್​. ರಾಜಮೌಳಿ ಮತ್ತು ಸುಕುಮಾರ್​ ಹಾಜರಿದ್ದರು. ಚಿತ್ರವನ್ನು ಚಿರಂಜೀವಿ ಮೆಚ್ಚಿಕೊಂಡಿದ್ದಷ್ಟೇ ಅಲ್ಲ, ಆಮೀರ್​ ಅವರನ್ನು ತಬ್ಬಿಕೊಂಡು ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ. ಚಿರಂಜೀವಿ ಅವರ ಮೆಚ್ಚುಗೆಯಿಂದ ಖುಷಿಯಾಗಿ ಆಮೀರ್​ ಆನಂದಭಾಷ್ಪ ಸುರಿಸಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೋವೊಂದನ್ನು ಚಿರಂಜೀವಿ ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದು, ಒಂದೊಳ್ಳೆಯ ಚಿತ್ರ ಮಾಡಿದ್ದಕ್ಕೆ ಆಮೀರ್​ಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

    1 ಪೈಸೆ ಖರ್ಚು ಮಾಡದೇ ಅದ್ಧೂರಿ ಮದ್ವೆಯಾದ ನಯನತಾರಾ-ವಿಘ್ನೇಶ್​ಗೆ ತಿಂಗಳ ಬಳಿಕ ಬಿಗ್​ ಶಾಕ್​! ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts