More

    ಪುಟ್ಟಪರ್ತಿ ಸಾಯಿಬಾಬಾ ಬಯೋಪಿಕ್; ಓಂಸಾಯಿಪ್ರಕಾಶ್ ನಿರ್ದೇಶನದ 100ನೇ ಚಿತ್ರ

    ಬೆಂಗಳೂರು: ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಅವರು ಶಿರಡಿ ಸಾಯಿಬಾಬಾ ಹಾಗೂ ಪುಟ್ಟಪರ್ತಿ ಸಾಯಿಬಾಬಾ, ಇಬ್ಬರ ಅನುಯಾಯಿ. 1993ರಲ್ಲಿ ಶಿರಡಿ ಸಾಯಿಬಾಬಾ ಜೀವನಾಧಾರಿತ ‘ಭಗವಾನ್ ಶ್ರೀ ಸಾಯಿಬಾಬಾ’ ಚಿತ್ರವನ್ನು ನಿರ್ದೇಶಿಸಿ, ತಾವೇ ಬಾಬಾ ಪಾತ್ರದಲ್ಲಿ ನಟಿಸಿದ್ದರು. ಇದೀಗ ‘ಶ್ರೀ ಸತ್ಯ ಸಾಯಿ ಅವತಾರ’ ಎಂಬ ಚಿತ್ರವನ್ನು ಸಾಯಿಪ್ರಕಾಶ್ ಇತ್ತೀಚೆಗಷ್ಟೇ ಅದ್ಧೂರಿ ಕಾರ್ಯಕ್ರಮದ ಮೂಲಕ ಘೋಷಣೆ ಮಾಡಿದರು. ವಿಶೇಷ ಅಂದರೆ, ಇದು ಅವರ 100ನೇ ನಿರ್ದೇಶನದ ಚಿತ್ರವೂ ಹೌದು.

    ಸಾಯಿಪ್ರಕಾಶ್ ಮಾತನಾಡಿ, ‘ಐದಾರು ಶೆಡ್ಯುಲ್​ನಲ್ಲಿ ಬೆಂಗಳೂರು, ಪುಟ್ಟಪರ್ತಿಯಲ್ಲಿ ಹೆಚ್ಚು ಚಿತ್ರೀಕರಣ ಮಾಡಲಿದ್ದೇವೆ. ಸತ್ಯಸಾಯಿಬಾಬಾ ಪಾತ್ರಕ್ಕೆ ಅವರನ್ನು ಹೋಲುವ ಹೊಸ ಪ್ರತಿಭೆಯ ಹುಡುಕಾಟದಲ್ಲಿದ್ದೇವೆ’ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

    ಕಾರ್ಯಕ್ರಮಕ್ಕೆ ಮಾಜಿ ಸಿಎಂ ಎಸ್. ಎಂ. ಕೃಷ್ಣ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ‘ಹಲವು ಬಾರಿ ಪುಟ್ಟಪರ್ತಿಗೆ ಹೋಗಿ ಸತ್ಯ ಸಾಯಿಯವರ ದರ್ಶನವನ್ನು ಪಡೆದಿದ್ದೇನೆ. ಅವರ ವ್ಯಕ್ತಿತ್ವ ಎಂಥವರನ್ನೇ ಆಗಲಿ ಮಂತ್ರಮುಗ್ಧರನ್ನಾಗಿಸುತ್ತಿತ್ತು. ಯಾವ ಮುಖ್ಯಮಂತ್ರಿಗೂ ಬಾರದ ಕಷ್ಟಕಾರ್ಪಣ್ಯಗಳು ನನಗೆ ಎದುರಾಗಿದ್ದವು. ಡಾ. ರಾಜಕುಮಾರ್ ಅವರ ಅಪಹರಣ, ಕಾವೇರಿ ನದಿ ನೀರಿನ ವಿವಾದ ನನಗೆ ಅಂತಲೇ ಇದ್ದವು ಅನ್ನಿಸುತ್ತದೆ. ಆ ಸಮಯದಲ್ಲಿ ನನಗೆ ಹೆದರಬೇಡ, ಮುಂದೆ ಹೋಗು ಎಂದು ದಾರಿ ತೋರಿಸಿದರು. ಅವರ ಆಶೀರ್ವಾದ ನನ್ನನ್ನ ಧೃತಿಗೆಡದಂತೆ ಮುಂದೆ ನಡೆಸಿತು’ ಎಂದು ಸಾಯಿಬಾಬಾರನ್ನು ನೆನಪಿಸಿಕೊಂಡರು.

    ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇಗೌಡ, ಆನಂದ್ ಗುರೂಜಿ, ವಿಧಾನ ಪರಿಷತ್ ಸದಸ್ಯ ಸರವಣ, ಫಿಲಂ ಚೇಂಬರ್ ಅಧ್ಯಕ್ಷರಾದ ಬಾಮಾ ಹರೀಶ್ ಮುಂತಾದವರು ಚಿತ್ರತಂಡಕ್ಕೆ ಶುಭಹಾರೈಸಿದರು. ‘ಶ್ರೀ ಸತ್ಯಸಾಯಿ ಅವತಾರ’ ಕನ್ನಡ ಮಾತ್ರವಲ್ಲದೇ ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಸಾಯಿ ಭಕ್ತರೇ ಸೇರಿ ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ.

    ನಿಮ್ಮೂರಿಗಿನ್ನು ಇವರೇ ಇನ್​ಸ್ಪೆಕ್ಟರ್; ಇಲ್ಲಿದೆ ಪೂರ್ತಿ ಮಾಹಿತಿ: 12 ಡಿವೈಎಸ್‌ಪಿ, 92 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

    ಮಗಳನ್ನು ಅಮೆರಿಕಕ್ಕೆ ಕಳಿಸಿ ಮರಳುತ್ತಿದ್ದ ದಂಪತಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts