More

    ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕ ಬೇಟೆ: ಶೂಟಿಂಗ್​ನಲ್ಲಿ ಮನೀಶ್​ಗೆ ಚಿನ್ನ, ಸಿಂಗರಾಜ್​ಗೆ ಬೆಳ್ಳಿ

    ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಪದಕ ಬೇಟೆಯನ್ನು ಮುಂದುವರಿದಿದ್ದು, ಮಿಶ್ರ 50 ಮೀಟರ್​ ಪಿಸ್ತೂಲ್​ (ಎಸ್​ಎಚ್​1) ವಿಭಾಗದಲ್ಲಿ ಪ್ಯಾರಾ ಶೂಟರ್​ ಮನೀಶ್​ ನರ್ವಾಲ್​ ಚಿನ್ನದ ಪದಕ ಗೆದ್ದರೆ, ಸಿಂಗರಾಜ್ ಅಧನಾ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

    ಶನಿವಾರ ನಡೆದ ಮಿಶ್ರ 50 ಮೀಟರ್​ ಪಿಸ್ತೂಲ್​ ಎಸ್​ಎಚ್​ 1 ಈವೆಂಟ್​ನಲ್ಲಿ ಮನೀಶ್​ ಮತ್ತು ಸಿಂಗರಾಜ್​ ಚಿನ್ನ ಮತ್ತು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆ 15ಕ್ಕೇರಿದೆ.

    ಇದೇ ಸಂದರ್ಭದಲ್ಲಿ ಮನೀಶ್​ ನರ್ವಾಲ್ ಅವರು ಮಿಶ್ರ 50 ಮೀಟರ್​ ಪಿಸ್ತೂಲ್​ ಎಸ್​ಎಚ್​ 1 ಫೈನಲ್​ ಈವೆಂಟ್​ನಲ್ಲಿ 218.2 ಅಂಕಗಳೊಂದಿಗೆ ಪ್ಯಾರಾಲಿಂಪಿಕ್ಸ್​ ಹೊಸ ದಾಖಲೆಯನ್ನು ಬರೆದಿದ್ದಾರೆ. ಸಿಂಗರಾಜ್​ 216.7 ಅಂಕಗಳನ್ನು ಗಳಿಸಿದರು.

    14 ಶೂಟ್ಸ್​ ನಂತರ ಭಾರತೀಯರು ನಾಲ್ಕನೇ ಮತ್ತು ಐದನೇ ಸ್ಥಾನಕ್ಕೆ ಕುಸಿದರು ಮತ್ತು ಎಲಿಮಿನೇಶನ್ ಅಂಚಿಗೆ ತಲುಪಿದ್ದರು. ಆದರೆ, ನಂತರದಲ್ಲಿ ಮನೀಶ್​ ಮತ್ತು ಸಿಂಗರಾಜ್​ ಅದ್ಭುತ ಪ್ರದರ್ಶನ ನೀಡಿದರು. ಪದಕ ಬೇಟೆಯ ಗುರಿ ಬೆನ್ನತ್ತಿದೆ ಇಬ್ಬರು ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ.

    ಆಗಸ್ಟ್​ 31ರ ಮಂಗಳವಾರವಷ್ಟೇ ಸಿಂಗರಾಜ್ ಅಧನಾ ಟೋಕಿಯೊ ಪ್ಯಾರಾಲಿಂಪಿಕ್ಸ್ ಪುರುಷರ 10 ಮೀ ಏರ್ ಪಿಸ್ತೂಲ್ ಎಸ್‌ಎಚ್ 1 ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದರು. ಇದೀಗ ಬೆಳ್ಳಿ ಗೆದ್ದಿದ್ದು, ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಈ ಆವೃತ್ತಿಯಲ್ಲಿ ಸಿಂಗರಾಜ್​ ಅವರ ಎರಡನೇ ಪದಕವಾಗಿದೆ. (ಏಜೆನ್ಸೀಸ್​)

    ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಬೆಳ್ಳಿ ಗೆದ್ದ ಪ್ಯಾರಾ ಪ್ರವೀಣ್​ಗೆ ಪ್ರಧಾನಿ ಅಭಿನಂದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts