More

    ತುಗೂಯ್ಯಾಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್​ ಭವಿಷ್ಯ

    ಟೋಕಿಯೊ: ಕೋವಿಡ್​ –19 ಮಹಾಮಾರಿಯ ಅಬ್ಬರದ ನಡುವೆಯೂ ಟೋಕಿಯೊ ಒಲಿಂಪಿಕ್ಸ್​ಗೆ ಅಂತಿಮ ಸಿದ್ಧತೆಗಳು ನಡೆಯುತ್ತಿವೆ. ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಕೇವಲ 10 ವಾರಗಳಷ್ಟೇ ಬಾಕಿ ಉಳಿದಿವೆ. ಆದರೆ, ಕ್ರೀಡಾಕೂಟ ರದ್ದುಗೊಳಿಸಬೇಕು ಎಂದು ದಿನದಿಂದ ದಿನಕ್ಕೆ ಸ್ಥಳಿಯ ನಾಗರೀಕರ ಕೂಗು ಹೆಚ್ಚಾಗುತ್ತಿದೆ. ಮಹಾಮಾರಿಯಿಂದಾಗಿ ಜಪಾನ್​ ಸರ್ಕಾರ ವೈರಸ್​ ತುರ್ತುಪರಿಸ್ಥಿತಿ ವಿಸ್ತರಿಸಲು ಮುಂದಾದರೆ, ಕ್ರೀಡಾಕೂಟ ರದ್ದುಗೊಳಿಸಬೇಕೆಂದು 3.5 ಲಕ್ಷಕ್ಕೂ ಹೆಚ್ಚು ಮಂದಿ ಸಹಿಯುಳ್ಳ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಟೋಕಿಯೊದಲ್ಲಿ ಮೇ ಅಂತ್ಯದವರೆಗೂ ವೈರಸ್​ ತುರ್ತು ಪರಿಸ್ಥಿತಿ ಎಂದು ಘೋಷಿಸಲಾಗಿದೆ.

    ಇದನ್ನೂ ಓದಿ: ನಾನಿನ್ನು ಕ್ವಾರಂಟೈನ್​ನಲ್ಲಿರುವೆ, ದಯವಿಟ್ಟು ಯಾರು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಸಾಹ ಅಭಿಮಾನಿಗಳಲ್ಲಿ ಮನವಿ ಮಾಡಿದ್ಯಾಕೆ?

    ಜಪಾನ್​ನ ಮೂರು ಪ್ರಾಂತ್ಯದಲ್ಲಿ ಕೋವಿಡ್​-19 ಅಬ್ಬರ ಹೆಚ್ಚಾಗಿದೆ. ಒಲಿಂಪಿಕ್​ ಆಯೋಜನೆಗೆ ಸಿದ್ಧವಾಗಿರುವ ಉತ್ತರ ಪ್ರಾಂತ್ಯದ ಹೊಕೈಡೊ ಪ್ರದೇಶ ಕೂಡ ಒಳಗೊಂಡಿದೆ. ಜಪಾನ್​ನಲ್ಲಿ ಕೋವಿಡ್​ ನಾಲ್ಕನೇ ಅಲೆ ತಡೆಗಟ್ಟುವ ಸಲುವಾಗಿ ವೈರಸ್​ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದರಿಂದ ಕೆಲಮಂದಿ ಒಲಿಂಪಿಕ್ಸ್​ ರದ್ದುಗೊಳಿಸುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಒಲಿಂಪಿಕ್ಸ್​ ಆಯೋಜಿಸುವುದು ಸೂಕ್ತವಲ್ಲ. ಕ್ರೀಡಾಕೂಟ ರದ್ದುಗೊಳಿಸಿ 3.51 ಲಕ್ಷ ಮಂದಿ ಸಹಿಯುಳ್ಳ ಅಜಿರ್ ಸಲ್ಲಿಸಿರುವುದಾಗಿ ಟೋಕಿಯೊ ಗವರ್ನರ್​ನ ಮಾಜಿ ಅಭ್ಯಥಿರ್ಯೂ ಆಗಿದ್ದ ಕೆಂಜಿ ಉತ್ಸುನೊಮಿಯಾ ತಿಳಿಸಿದ್ದಾರೆ. ಈ ಅಜಿರ್ಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್​ ಸಮಿತಿ (ಐಒಸಿ) ಹಾಗೂ ಪ್ಯಾರಾಲಂಪಿಕ್​ ಸಮಿತಿ (ಐಪಿಸಿ), ಸ್ಥಳೀಯ ಆಯೋಜಕರು ಹಾಗೂ ಸರ್ಕಾರಕ್ಕೂ ನೀಡಲಾಗಿದೆ ಎಂದರು.

    ಇದನ್ನೂ ಓದಿ: ಶಸ್ತ್ರಚಿಕಿತ್ಸೆಗೆ ಒಳಗಾದ ಕೆಎಲ್ ರಾಹುಲ್, ಫಿಟ್ನೆಸ್ ಸ್ಥಿತಿ ಹೇಗಿದೆ ಗೊತ್ತಾ

    ಇಂಥ ಕಠಿಣ ಸ್ಥಿತಿಯಲ್ಲಿ ಒಲಿಂಪಿಕ್ಸ್​ ಆಯೋಜಿಸುವುದು ಕಷ್ಟಕರ ಎಂದು ಸ್ಥಳಿಯ ವೈದ್ಯರ ಸಂಘ ಕೂಡ ಅಭಿಪ್ರಾಯ ವ್ಯಕ್ತಪಡಿಸಿತ್ತು. ಜಪಾನ್​ನಲ್ಲಿ ಈಗಾಗಲೇ ಕೆಲವೊಂದು ಅಂತಾರಾಷ್ಟ್ರೀಯ ಕೂಟಗಳು ಆಯೋಜನೆಗೊಂಡಿವೆ. ಸೂಕ್ತ ಮಾರ್ಗಸೂಚಿ ಸಿದ್ಧಪಡಿಸಿ ಕಠಿಣ ನಿಲುವುಗಳನ್ನು ಅನುಸರಿಸಿ, ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ನಡೆಸಬೇಕು ಎಂದು ವಿಶ್ವ ಅಥ್ಲೆಟಿಕ್ಸ್​ ಮುಖ್ಯಸ್ಥ ಸೆಬಾಸ್ಟಿಯನ್​ ಕೊ ತಿಳಿಸಿದ್ದಾರೆ. ಜಪಾನ್​ನ ಪ್ರತಿಷ್ಠಿತ ಬ್ಯಾಂಕ್​ವೊಂದರ ಸಿಇಒ ಮಸಾಯೊಶಿ ಸನ್​ ಕೂಡ ಗೇಮ್ಸ್​ ನಡೆಸುವುದು ಅಷ್ಟು ಸೂಕ್ತವಲ್ಲ ಎಂದಿದ್ದಾರೆ.

    ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ರಮೇಶ್ ಪವಾರ್ ಹೊಸ ಕೋಚ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts