More

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಇಂದು ಯಾರ ಮೇಲೆ ಪದಕ ನಿರೀಕ್ಷೆಗಳಿವೆ?

    ಟೋಕಿಯೊ: ಒಲಿಂಪಿಕ್ಸ್‌ನಲ್ಲಿ 2 ಪದಕ ಖಚಿತಪಡಿಸಿಕೊಂಡು ಬೀಗಿರುವ ಭಾರತ ಕ್ರೀಡಾಸ್ಪರ್ಧೆಯ 8ನೇ ದಿನವಾದ ಮತ್ತಷ್ಟು ಪದಕಗಳನ್ನು ಬಾಚಿಕೊಳ್ಳಲು ಪ್ರಯತ್ನಿಸಲಿದೆ. ಪಿವಿ ಸಿಂಧು ನಾಲ್ಕರ ಘಟ್ಟದಲ್ಲಿ ಸೆಣಸಲಿದ್ದು, ಗೆದ್ದರೆ ಕನಿಷ್ಠ ಬೆಳ್ಳಿ ಪದಕ ಖಚಿತವಾಗಲಿದ್ದು, 2016ರ ರಿಯೋ ಒಲಿಂಪಿಕ್ಸ್ ಸಾಧನೆಯೂ ಖಚಿತವಾಗಲಿದೆ. ಇನ್ನು ಶೂಟಿಂಗ್‌ನಲ್ಲಿ ತೇಜಸ್ವಿನಿ ಸಾವಂತ್ ಮತ್ತು ಅಂಜುಂ ಮೌಡ್ಗಿಲ್ ಮೇಲೆ ಪದಕ ನಿರೀಕ್ಷೆಗಳಿದ್ದು, ಶೂಟರ್‌ಗಳು ಈ ಸಲವಾದರೂ ಪದಕದ ಮೇಲೆ ಗುರಿ ಇಡುವರೇ ಎಂದು ಕಾದುನೋಡಬೇಕಿದೆ. ಬಾಕ್ಸಿಂಗ್‌ನಲ್ಲಿ ಪೂಜಾ ರಾಣಿ ಎಂಟರ ಘಟ್ಟದಲ್ಲಿ ಸೆಣಸಲಿದ್ದು, ಗೆದ್ದರೆ ಲವ್ಲಿನಾರಂತೆ ಪದಕವೊಂದು ಖಚಿತವಾಗಲಿದೆ. ಆರ್ಚರಿಯಲ್ಲಿ ಕೊನೇ ಆಶಾಕಿರಣವಾಗಿರುವ ಅತನು ದಾಸ್ ಮೇಲೆ ಪದಕ ನಿರೀಕ್ಷೆಗಳಿವೆ. ಇದರಿಂದ ಭಾರತ 2012ರ ಲಂಡನ್ ಒಲಿಂಪಿಕ್ಸ್ ಬಳಿಕ ಮತ್ತೊಮ್ಮೆ ಒಂದೇ ಕೂಟದಲ್ಲಿ ಎರಡಕ್ಕಿಂತ ಹೆಚ್ಚಿನ ಪದಕ ಗೆಲುವಿನ ಸಾಧನೆ ತೋರುವ ಸನಿಹದಲ್ಲಿರುವಂತೆ ಗೋಚರಿಸುತ್ತಿದೆ.

    ಭಾರತಕ್ಕೆ ಇಂದು ಕ್ರೀಡಾಸ್ಪರ್ಧೆಗಳು:

    *ಶೂಟಿಂಗ್: ಬೆಳಗ್ಗೆ 8.30: ಮಹಿಳೆಯರ 50 ಮೀ. ರೈಫಲ್ ತ್ರಿ ಪೊಸಿಷನ್ ಅರ್ಹತಾ ಸುತ್ತು: ತೇಜಸ್ವಿನಿ ಸಾವಂತ್, ಅಂಜುಂ ಮೌಡ್ಗಿಲ್ ಸ್ಪರ್ಧೆ; ಮಧ್ಯಾಹ್ನ 12.30: ಫೈನಲ್.

    ಬಾಕ್ಸಿಂಗ್: ಬೆಳಗ್ಗೆ 7.30: ಪುರುಷರ ಫ್ಲೈವೇಟ್ ವಿಭಾಗ: ಅಮಿತ್‌ಗೆ 16ರ ಘಟ್ಟದಲ್ಲಿ ಕೊಲಂಬಿಯಾದ ಯುಬೆರ್ಜೆನ್ ಮಾರ್ಟಿನೇಜ್ ಎದುರಾಳಿ; *ಮಧ್ಯಾಹ್ನ 3.35: ಮಹಿಳೆಯರ ಮಿಡಲ್‌ವೇಟ್ ವಿಭಾಗ: ಪೂಜಾ ರಾಣಿಗೆ ಕ್ವಾರ್ಟರ್​ಫೈನಲ್‌ನಲ್ಲಿ ಚೀನಾದ ಲಿ ಕ್ವಿಯನ್ ಎದುರಾಳಿ.

    *ಬ್ಯಾಡ್ಮಿಂಟನ್: ಮಧ್ಯಾಹ್ನ 3.20: ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಪಿವಿ ಸಿಂಧುಗೆ ಚೀನಾ ತೈಪೆಯ ತೈ ಜು ಯಿಂಗ್ ಎದುರಾಳಿ.

    *ಆರ್ಚರಿ: ಬೆಳಗ್ಗೆ 7.18: ಪುರುಷರ ವೈಯಕ್ತಿಕ ವಿಭಾಗ: ಅತನು ದಾಸ್‌ಗೆ ಪ್ರಿ ಕ್ವಾರ್ಟರ್​ಫೈನಲ್‌ನಲ್ಲಿ ಜಪಾನ್‌ನ ತಕಹರು ಫುರುಕವಾ ಎದುರಾಳಿ, ಬೆಳಗ್ಗೆ 11.15ರ ನಂತರ ಕ್ವಾರ್ಟರ್​ಫೈನಲ್, 12.15ರ ನಂತರ ಸೆಮಿಫೈನಲ್, ಮಧ್ಯಾಹ್ನ 1ರ ನಂತರ ಕಂಚು, ಚಿನ್ನದ ಹೋರಾಟ.

    ಅಥ್ಲೆಟಿಕ್ಸ್: ಬೆಳಗ್ಗೆ 6: ಮಹಿಳೆಯರ ಡಿಸ್ಕಸ್ ಥ್ರೋ ಅರ್ಹತಾ ಸುತ್ತು ಗ್ರೂಪ್-ಎ: ಸೀಮಾ ಪೂನಿಯಾ, ಬೆಳಗ್ಗೆ 7.25: ಗ್ರೂಪ್-ಬಿ: ಕಮಲ್‌ಪ್ರೀತ್ ಕೌರ್ ಸ್ಪರ್ಧೆ; ಮಧ್ಯಾಹ್ನ 3.40: ಪುರುಷರ ಲಾಂಗ್ ಜಂಪ್ ಅರ್ಹತಾ ಸುತ್ತು: ಶ್ರೀಶಂಕರ್ ಸ್ಪರ್ಧೆ.

    ಹಾಕಿ: ಬೆಳಗ್ಗೆ 8.45: ಮಹಿಳಾ ತಂಡಕ್ಕೆ ಅಂತಿಮ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರಾಳಿ.

    ಸೈಲಿಂಗ್: ಬೆಳಗ್ಗೆ 8.35: 49ಇಆರ್: 10-11-12ನೇ ರೇಸ್: ಕೆಸಿ ಗಣಪತಿ-ವರುಣ್ ಠಕ್ಕರ್ ಸ್ಪರ್ಧೆ.

    ಗಾಲ್ಫ್: ಬೆಳಗ್ಗೆ 4.15: ಪುರುಷರ ವಿಭಾಗ ರೌಂಡ್-2: ಉದಯನ್ ಮಾನೆ, ಅನಿರ್ಬನ್ ಲಹಿರಿ ಕಣಕ್ಕೆ.

    *ಪದಕ ನಿರ್ಧಾರವಾಗುವ ಸ್ಪರ್ಧೆ.
    ನೇರಪ್ರಸಾರ: ಸೋನಿ ನೆಟ್‌ವರ್ಕ್, ಡಿಡಿ ಸ್ಪೋರ್ಟ್ಸ್.

    *21: ಕ್ರೀಡಾಸ್ಪರ್ಧೆಯ 8ನೇ ದಿನವಾದ ಶನಿವಾರ ಒಟ್ಟು 21 ಸ್ವರ್ಣ ಪದಕಗಳು ಪಣಕ್ಕಿವೆ. ಈಜಿನಲ್ಲಿ 4, ಅಥ್ಲೆಟಿಕ್ಸ್‌ನಲ್ಲಿ 3, ಶೂಟಿಂಗ್, ಸೈಲಿಂಗ್, ವೇಟ್‌ಲಿಫ್ಟಿಂಗ್‌ನಲ್ಲಿ ತಲಾ 2, ಬ್ಯಾಡ್ಮಿಂಟನ್, ಫೆನ್ಸಿಂಗ್, ಜುಡೋ, ಜಿಮ್ನಾಸ್ಟಿಕ್ಸ್, ಆರ್ಚರಿ, ರಗ್ಬಿ ಸೆವೆನ್ಸ್, ಟೆನಿಸ್, ಟ್ರಯಥ್ಲಾನ್‌ನಲ್ಲಿ ತಲಾ ಒಂದು ಚಿನ್ನ ನಿರ್ಧಾರವಾಗಲಿದೆ.

    Tokyo Olympic 2020: ಕಾಂಡೋಮ್​ ಬಳಸಿ ಪದಕ ಗೆದ್ದೆ ಎಂದ ಒಲಿಂಪಿಕ್ಸ್​ ಸ್ಪರ್ಧಿ! ಹೀಗಿದೆ ಆಕೆ ಕೊಟ್ಟ ವಿವರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts