More

    ಸೆಮಿಫೈನಲ್​ನಲ್ಲಿ ಮುಗ್ಗಿರಿಸಿದ ಭಾರತ: ಪುರುಷರ ಹಾಕಿಯಲ್ಲಿ ಚಿನ್ನದ ಕನಸು ಭಗ್ನ

    ನವದೆಹಲಿ: ಟೋಕಿಯೊ ಒಲಿಂಪಿಕ್ಸ್​ನ ಪುರುಷರ ಹಾಕಿ ವಿಭಾದಗದ ಸೆಮಿಫೈನಲ್​ನಲ್ಲಿ ಟೀಮ್​ ಇಂಡಿಯಾ, ಬೆಲ್ಜಿಯಂ ತಂಡದ ಎದುರು ಸೋಲನ್ನು ಅನುಭವಿಸಿದ್ದು, ಭಾರತೀಯ ಚಿನ್ನದ ಪದಕದ ಕನಸು ನಿರಾಸೆಯಾಗಿದೆ.

    ಬೆಲ್ಜಿಯಂ ಎದುರು ಭಾರತ 5-2 ಗೋಲುಗಳ ಅಂತರದಲ್ಲಿ ಸೋಲನ್ನು ಕಂಡಿದ್ದು, ಮುಂದಿನ ಪಂದ್ಯದಲ್ಲಿ ಕಂಚಿನ ಪದಕಕ್ಕಾಗಿ ಸೆಣಸಾಡಲಿದೆ. ಸೆಮಿಫೈನಲ್​ನ ಕೊನೆಯ 15 ನಿಮಿಷದ ಅವಧಿಯಲ್ಲಿ ತಂಡದ ಗತಿಯೇ ಬದಲಾಯಿತು. 3ನೇ ಕ್ವಾರ್ಟರ್​ನಲ್ಲಿ ಮನ್​ಪ್ರೀತ್​ ಸಿಂಗ್​ ನೇತೃತ್ವದ ತಂಡವು ಬೆಲ್ಜಿಯಂ ಎದುರು 2-2 ಗೋಲುಗಳೊಂದಿಗೆ ಸಮಬಲ ಸಾಧಿಸಿತ್ತು. ಆದರೆ, ಅಲೆಕ್ಸಾಂಡರ್ ಹೆಂಡ್ರಿಕ್ ಬಾರಿಸಿದ ಹ್ಯಾಟ್ರಿಕ್​ ಗೋಲು ಭಾರತದ ಪಾಲಿಗೆ ಮುಳುವಾಯಿತು.

    ಫೈನಲ್​ ಕ್ವಾರ್ಟರ್​ನಲ್ಲಿ ಒಂದರ ಹಿಂದಂತೆ ಅಲೆಕ್ಸಾಂಡರ್ ಹೆಂಡ್ರಿಕ್ ಎರಡು ಗೋಲು ಬಾರಿಸಿದರು. ಅಂತಿಮವಾಗಿ 5-2 ಅಂತರದ ಗೋಲುಗಳಿಂದ ಬಿಲ್ಜಿಯಂ ವಿಜಯ ಸಾಧಿಸಿದೆ. ವಿಶ್ವ ಎಡರನೇ ಶ್ರೇಯಾಂಕ ಹೊಂದಿರುವ ಬೆಲ್ಜಿಯಂ ತಂಡ ಎದುರು ಆಡುವುದು ಭಾರತಕ್ಕೆ ಕಠಿಣ ಸವಾಲು ಎಂದೇ ಪರಿಗಣಿಸಲಾಗಿತ್ತು.

    ಟೀಮ್​ ಇಂಡಿಯಾ ಪರ ಹಮನ್‌ಪ್ರೀತ್ ಸಿಂಗ್ ಮತ್ತು ಮನ್ ದೀಪ್ ಸಿಂಗ್ ಗೋಲು ಗಳಿಸಿದರೂ ಅದು ಸಾಕಾಗಲಿಲ್ಲ. ಆದರೆ, ಬಿಲ್ಜಿಯಂ ತಂಡಕ್ಕೆ ಪೆನಾಲ್ಟಿ ಕಾರ್ನರ್ ವರವಾಗಿ ಪರಿಣಮಿಸಿತು.

    ಬದುಕಿನ ಕಹಿ ಅನುಭವಗಳನ್ನು ಬಿಚ್ಚಿಟ್ಟ ಶ್ರೀರಾಮಚಂದ್ರನ ಬೆಡಗಿ: ಆತ್ಮಹತ್ಯೆಗೆ ಯತ್ನಿಸಿದ್ದರಂತೆ ನಟಿ ಮೋಹಿನಿ!

    ಎಚ್​ಡಿಕೆ ಕೃಷಿ ಚಿಂತನೆ, ಆಡಳಿತ ಪರಿಕಲ್ಪನೆ: ವಿಜಯವಾಣಿ ಕ್ಲಬ್​ಹೌಸ್ ಸಂವಾದದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ

    ಇದು ನಟಿ ಅದಿತಿ ಪ್ರಭುದೇವ ಹಳ್ಳಿ ಜೀವನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts