More

    2017ರಲ್ಲಿ ಹೆಗಲೇರಿದ ಪಾಪದ ಪ್ರಾಯಶ್ಚಿತ್ತಕ್ಕಾಗಿ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಡಿಕೆಶಿ ಭೇಟಿ!

    ಹಾವೇರಿ: ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದ ಸುಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಇಂದು ಭೇಟಿ ನೀಡಲಿದ್ದಾರೆ. 2017ರಲ್ಲಿ ಹೆಗಲೆರಿರುವ ಪಾಪ ಪ್ರಾಯಶ್ಚಿತ್ತಕ್ಕಾಗಿ ಮೈಲಾರಲಿಂಗೇಶ್ವರನಿಗೆ ಡಿಕೆಶಿ ರುದ್ರಾಭಿಷೇಕ ಮತ್ತು ಪೂಜೆ ನೇರವೇರಿಸಲಿದ್ದಾರೆಂದು ತಿಳಿದುಬಂದಿದೆ.

    2017ರಲ್ಲಿ ಮೈಲಾರಕ್ಕೆ ಹೆಲಿಕ್ಯಾಪ್ಟರ್ ಮೂಲಕ ಡಿಕೆಶಿ ಬಂದಿದ್ದರು. ದೇವರ ನುಡಿ ಅಥವಾ ಕಾರ್ಣಿಕ ನುಡಿಯುವ ವೇಳೆ ಭಕ್ತರ ಚಿತ್ತಕ್ಕೆ ಹೆಲಿಕಾಪ್ಟರ್​ ಶಬ್ದದ ಮೂಲಕ ಡಿಕೆಶಿ ಭಂಗ ತಂದಿದ್ದರು ಎನ್ನಲಾಗಿದೆ. ರಾಜ್ಯದ ಮೂಲೆ ಮೂಲೆಯಿಂದ ಕಾಲ್ನಡಿಗೆಯಲ್ಲಿ ಮಾತ್ರ ಇಲ್ಲಿಗೆ ಭಕ್ತರು ಬರುತ್ತಾರೆ. ಆದರೆ ಹೊಸಪೇಟೆಯಿಂದ ಹೆಲಿಕಾಪ್ಟರ್​ ಮೂಲಕ ನೇರವಾಗಿ ಕಾರ್ಣಿಕದ ಸ್ಥಳ ಡೆಂಕಣಮರಡಿಗೆ ಆಗಮಿಸಿ ಭಕ್ತರ ಚಿತ್ತಭಂಗ ಮಾಡಿದ್ದರು ಎಂಬ ಕಳಂಕ ಡಿಕೆಶಿ ಮೇಲಿದೆ.

    ಇದನ್ನೂ ಓದಿ: ಕಾರ್ ಕಳಿಸ್ತೀನಿ ಪ್ಲೀಸ್ ಬನ್ನಿ: ಮುಳ್ಳಿನಬೇಲಿ ಹಾಕಿದ್ದವರಿಂದಲೇ ಸ್ವಾಗತ | ಮತಕ್ಕಾಗಿ ಡಿಮಾಂಡ್

    ಡಿಕೆಶಿ ಜತೆ ಶಾಸಕ ಪಿ.ಟಿ. ಪರಮೇಶ್ವರನಾಯ್ಕ್​ ಕೂಡ​ ಹೆಲಿಕಾಪ್ಟರ್​ನಲ್ಲಿ ಬಂದಿದ್ದರು. ಹೀಗಾಗಿಯೇ ದೇವರ ಶಾಪಕ್ಕೆ ಗುರಿಯಾಗಿಯೇ ಪಿ.ಟಿ.ಪರಮೇಶ್ವರನಾಯ್ಕ್ ಮಂತ್ರಿಸ್ಥಾನ ಕಳಕೊಂಡರೆ, ಡಿಕೆಶಿ ಸಹ ಮಂತ್ರಿಸ್ಥಾನ ಕಳೆದುಕೊಂಡು ಜೈಲು ಸೇರಿದರು ಎಂಬ ಮಾತುಗಳು ಕೇಳಿಬರುತ್ತಿವೆ.

    ಇದೆಲ್ಲವು ಮೈಲಾರಲಿಂಗನ ಶಾಪ ಎಂದು ದೇವಸ್ಥಾನದ ಧರ್ಮದರ್ಶಿಗಳಾದ ವೆಂಕಟಪ್ಪ ಓಡೆಯರ್ ಸಹ ಹೇಳಿದ್ದರಂತೆ. ಆದಷ್ಟು ಬೇಗ ಬಂದು ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಇಲ್ಲವಾದರೆ ಭವಿಷ್ಯದಲ್ಲಿ ತೊಂದರೆಯಾಗಲಿದೆ ಎಂದು ಧರ್ಮದರ್ಶಿಗಳು ಮನವರಿಕೆ ಮಾಡಿದ್ದರಂತೆ.

    ಹೀಗಾಗಿ ಇಂದು ಭೇಟಿ ನೀಡುವ ಡಿಕೆಶಿ, ಧರ್ಮದರ್ಶಿಗಳ ಮುಂದೆ ನಿಂತು ಪೂಜಾ ಕಾರ್ಯಗಳನ್ನು ಮಾಡಲಿದ್ದಾರೆ. ಪಾಪ ಪ್ರಾಯಶ್ಚಿತ್ತ ಮಾಡಿಕೊಂಡು ಇಂದು ರಾಜಕೀಯ ಹರಕೆಯನ್ನು ಡಿಕೆಶಿ ಹೊತ್ತುಕೊಳ್ಳಲಿದ್ದಾರೆ. ರಾಜಕೀಯ ತೊಂದರೆಗಳನ್ನು ದೂರ ಮಾಡಲು ಮತ್ತು ಶತ್ರುಗಳ ಸಂಹಾರಕ್ಕಾಗಿ ಡಿಕೆಶಿ ಹರಕೆ ಹೊತ್ತುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಬಸ್​ಗೆ ಕಾಯುತ್ತಿದ್ದ ಯುವತಿ ಬಳಿ ಬಂದ ಆಟೋ ಚಾಲಕ: ಮಾತು ನಂಬಿದವಳಿಗೆ ಕಾದಿತ್ತು ಶಾಕ್!​

    ಹೊಸವರ್ಷಾಚರಣೆ ಆಸೆಯಿಟ್ಟುಕೊಂಡಿದ್ದವರಿಗೆ ಸರ್ಕಾರದ ಶಾಕ್​: ಮಾರ್ಗಸೂಚಿಯಲ್ಲಿ ಕಠಿಣ ನಿಯಮಗಳು

    ನಾನು ರಾಜಕೀಯವನ್ನೇ ಬಿಟ್ಟುಬಿಡುತ್ತೇನೆ ಆದರೆ… ಸಿಎಂ ಜಗನ್​ಗೆ ಸವಾಲೆಸೆದ ಚಂದ್ರಬಾಬು ನಾಯ್ಡು

    ಉಜಿರೆ ಬಾಲಕನ ಅಪಹರಣ ಪ್ರಕರಣ: ಬಿಡುಗಡೆಗೆ 17 ಕೋಟಿ ರೂ.ಗೆ ಬೇಡಿಕೆಯಿಟ್ಟ ಅಪಹರಣಕಾರರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts