More

    ವಿಶ್ವಕ್ಕೆ ಅಹಿಂಸೆ ತತ್ವ ಸಾರಿದ ಭಾರತ

    ಸಿರಗುಪ್ಪ: ಗೌತಮ ಬುದ್ಧರಂತೆ ಗಾಂಧಿಜೀಯು ಅಹಿಂಸೆಯ ಪ್ರತಿಪಾದಕರಾಗಿದ್ದು, ಮೂಲತಃ ಇಡೀ ಜಗತ್ತಿಗೆ ಅಹಿಂಸೆ ತತ್ವವನ್ನು ಮೊದಲಿಗೆ ಸಾರಿದ್ದು ಭಾರತ. ಮಹಾತ್ಮ ಗಾಂಧೀಜಿಯವರು ನಮ್ಮ ದೇಶದಲ್ಲಿ ಹುಟ್ಟಿದ್ದು, ನಮ್ಮ ಪುಣ್ಯ ಎಂದು ತಹಸೀಲ್ದಾರ್ ಎಚ್.ವಿಶ್ವನಾಥ ತಿಳಿಸಿದರು.

    ಇದನ್ನೂ ಓದಿ: ಸತ್ಯ-ಅಹಿಂಸೆ ತತ್ವ ಪಾಲಿಸಿದರೆ ಸೋಲಿಲ್ಲ

    ನಗರದ ತಾಲೂಕು ಕಚೇರಿಯಲ್ಲಿ ಸೋಮವಾರ ನಡೆದ ಮಹಾತ್ಮ ಗಾಂಧಿಜೀ ಮತ್ತು ಲಾಲ್‌ಬಹಾದುರ್ ಶಾಸ್ತ್ರಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಹಿಂಸೆಯೇ ಪರಮಧರ್ಮ ಎಂಬುದರ ಮೇಲೆಯೇ ವಿಶ್ವದ ಭವಿಷ್ಯ ನಿಂತಿದೆ,

    ಎಲ್ಲಧರ್ಮಗಳಲ್ಲಿಯೂ ಅಹಿಂಸೆಗೆ ಮೊದಲ ಆದ್ಯತೆ ನೀಡಲಾಗಿದೆ, ಎಲ್ಲ ಧರ್ಮಗ್ರಂಥಗಳ ಅಹಿಂಸೆಯೇ ಭೋದಿಸುತ್ತವೆ, ಎಲ್ಲೆಡೆ ಹಿಂಸೆ, ಅಸಹಿಷ್ಣುತೆ ತಾಂಡವವಾಡುತ್ತಿರುವ ಈ ಸಮಯದಲ್ಲಿ ಅಹಿಂಸೆಗೆ ಎಲ್ಲಿಲ್ಲದ ಆದ್ಯತೆ ಬಂದಿದೆ, ಹಿಂಸೆ ಕೊನೆಗೊಂಡರೆ ಮಾತ್ರ ಮನುಕುಲದ ಉದ್ಧಾರ ಸಾಧ್ಯ,

    ಜನರಿಗೆ ಅಹಿಂಸೆಯ ಮಹತ್ವವನ್ನು ಮನಗಾಣಿಸುವುದಕ್ಕಾಗಿಯೇ ಪ್ರತಿವರ್ಷ ಅಕ್ಟೋಬರ್ 2ನ್ನು ವಿಶ್ವಾದ್ಯಾಂತ ಅಹಿಂಸ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಕಂದಾಯ ಅಧಿಕಾರಿ ಮಂಜುನಾಥ, ಆಹಾರ ಶಿರಸ್ಥೆದಾರ ಮಹೇಶ್, ಮಹಾಂತೇಶ, ತುಷರ್ ಗಾಯಕ್ವಾಡ್, ಅನಿತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts