More

    ಸತ್ಯ-ಅಹಿಂಸೆ ತತ್ವ ಪಾಲಿಸಿದರೆ ಸೋಲಿಲ್ಲ

    ವಿಜಯಪುರ: ಸತ್ಯ ಮತ್ತು ಅಹಿಂಸೆಗಳು ಪರ್ವತದಷ್ಟೇ ಪುರಾತನವಾದದ್ದು, ಅಂತಹ ತತ್ವಗಳನ್ನು ಪಾಲಿಸಿದರೆ ಸೋಲಿಲ್ಲ ಎಂಬುವುದನ್ನು ಗಾಂಧೀಜಿಯವರು ಅರಿತಿದ್ದರು ಎಂದು ಧಾರವಾಡದ ನ್ಯಾಯವಾದಿ ಹಾಗೂ ಗಾಂಧಿವಾದಿ ಬಸವಪ್ರಭು ಹೊಸಕೇರಿ ಹೇಳಿದರು.
    ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರ ಹಾಗೂ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ವಿವಿಯ ಜ್ಞಾನಶಕ್ತಿ ಆವರಣದಲ್ಲಿರುವ ಕನ್ನಡ ಅಧ್ಯಯನ ಸಭಾಂಗಣದಲ್ಲಿ ಶುಕ್ರವಾರ ನಡೆದ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಮಹಾತ್ಮ ಎಂಬುವುದನ್ನು ಮರೆತು ಬರೀ ಗಾಂಧಿ ಎಂಬುವುದನ್ನು ಪಾಲಿಸಿದರೆ ಅಂತಹವರು ನನ್ನ ಮೆಚ್ಚುಗೆಗೆ ಪಾತ್ರರಾಗುತ್ತಾರೆ ಎಂದು ಗಾಂಧೀಜಿ ತಮ್ಮ ಹಿಂಬಾಲಕರಿಗೆ ಸದಾ ಕಿವಿ ಮಾತು ಹೇಳುತ್ತಿದ್ದರು. ಆದರೆ, ಈಗಿನ ಕೆಲವರು ಗಾಂಧಿಯನ್ನು ತಿಳಿಯದೆಯೇ, ಅವರನ್ನು ಅರಿತುಕೊಳ್ಳದೆಯೇ ಅವರನ್ನು ವಿರೋಧಿಸುವ ಕೆಲಸ ಮಾಡುತ್ತಿರುವುದು ವಿಷಾದನೀಯ ಸಂಗತಿ ಎಂದರು.
    ಕುಲಸಚಿವೆ ಪ್ರೊ.ಆರ್. ಸುನಂದಮ್ಮ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನೋಡಿದರೆ ನಾವು ನಿಜವಾಗಲೂ ಗಾಂಧಿ ತತ್ವಗಳನ್ನು ಪಾಲಿಸುತ್ತಿದ್ದೇವೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಗಾಂಧಿಯ ಕನಸಾದ ಹೆಣ್ಣು-ಪುರುಷರಿಗೆ ಸಮಾನ ಎಂಬ ತತ್ವ ಎಲ್ಲಿದೆ ಎಂಬ ಧ್ವನಿ ನಮ್ಮ ಅಂತರಾಳದಲ್ಲಿ ಹುಟ್ಟುತ್ತಿದೆ. ಭಾರತ ಶ್ರೇಷ್ಠ ಸಂಸ್ಕೃತಿಯ ಸಂಕೇತ ಅಂತಹ ಸಂಸ್ಕೃತಿಯನ್ನು ನಾವು ಉಳಿಸಿ ಬೆಳೆಸಬೇಕಾಗಿದೆಯೇ ವಿನಹಃ ಅದನ್ನು ವಿನಾಶಕ್ಕೆ ಧೂಡಿ ಇಡೀ ಜಗತ್ತೇ ನಮ್ಮನ್ನು ನೋಡಿ ನಗುವಂತೆ ಆಗಬಾರದು ಎಂದರು.
    ಮೌಲ್ಯಮಾಪನ ಕುಲಸಚಿವ ಪ್ರೊ. ಪಿ.ಜಿ. ತಡಸದ ಮಾತನಾಡಿದರು. ಕುಲಪತಿ ಪ್ರೊ. ಓಂಕಾರ ಕಾಕಡೆ ಅಧ್ಯಕ್ಷತೆ ವಹಿಸಿದ್ದರು. ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ತಹಮೀನಾ ಕೋಲಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಡಾ. ಕಲಾವತಿ ಕಾಂಬಳೆ ನಿರೂಪಿಸಿದರು. ಪ್ರೊ. ನಾಮದೇವ ಗೌಡ ಸ್ವಾಗತಿಸಿದರು. ಜನ್ನಿರ್ ಸೌಲಮ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts