ಕೊಕಟನೂರ: ಹಿಂದು ರಾಷ್ಟ್ರಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅನುಪಮವಾದುದು ಎಂದು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ತಮ್ಮಣ್ಣ ಮಗರ ಹೇಳಿದ್ದಾರೆ.
ಗ್ರಾಮದ ಶಿವಾಜಿ ಮಹಾರಾಜರ ವೃತ್ತದಲ್ಲಿ ಭವಾನಿ ಮಾತಾ ಸೇವಾ ಸಮಿತಿ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಶಿವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಶಿವಾಜಿ ಮಹಾರಾಜರು ಹಿಂದು ಧರ್ಮದ ಉಳಿವಿಗಾಗಿ ಹೋರಾಡದಿದ್ದರೆ, ಧರ್ಮ ಉಳಿಯುತ್ತಿರಲಿಲ್ಲ. ಶಿವಾಜಿಯ ಶೂರತನವನ್ನು ಶಿಕ್ಷಕರು ಹಾಗೂ ಪಾಲಕರು ದಿನಂಪ್ರತಿ ಬೋಧಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಪ್ರಲ್ಹಾದ ಪೂಜಾರಿ, ನ್ಯಾಯವಾದಿ ದಾದಾಸಾಹೇಬ ಚವ್ಹಾಣ ಮಾತನಾಡಿದರು. ಅದಕ್ಕೂ ಪೂರ್ವ ಸೋಮೇಶ್ವರ ಜ್ಯೋಶಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸುರೇಶ ಪಾಟಣಕರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ನಾರಾಯಣ ಜಾಧವ, ಅನಿಲ ಮುಳಿಕ, ಬಾವುಸಾಹೇಬ ಭೋಸಲೆ, ಬಂಡು ಜಾಧವ, ವಿಲಾಸ ಪಾಟಣಕರ, ಶಾನೂರ ಕರಿಹಾಜಿ, ಬಸವರಾಜ ಅಂಬಾಜಿ, ಶ್ರೀಕಾಂತ ಜಾಧವ, ರಮೇಶ ತೋರಥ ಇತರರು ಇದ್ದರು.