More

    ಶಾಲೆಗೆ ವಿದ್ಯುತ್, ಕುಡಿವ ನೀರು ಒದಗಿಸಿ

    ಸಂಡೂರು: ಇಡೀ ತಾಲೂಕಿಗೆ ನಾಗಲಾಪುರ ಗ್ರಾಮಸ್ಥರು ಸ್ಫೂರ್ತಿಯಾಗಿದ್ದಾರೆ. ಅನುದಾನ ಪಡೆದು ಹೇಗೆ ಕೆಲಸ ಮಾಡಿಕೊಳ್ಳಬೇಕು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಶಾಸಕ ಈ.ತುಕಾರಾಮ್ ಹೇಳಿದರು.

    ಇದನ್ನೂ ಓದಿ: ಮಂಗನನ್ನು ಬೇಟೆಯಾಡಲು ಟ್ರಾನ್ಸ್ ಫಾರ್ಮರ್ ಹತ್ತಿದ ಚಿರತೆ ವಿದ್ಯುತ್ ಸ್ಪರ್ಶಿಸಿ ಸಾವು

    ನಾಗಲಾಪುರ ಗ್ರಾಮದಲ್ಲಿ ನೂತನ ಸರ್ಕಾರಿ ಹಿಪ್ರಾ ಶಾಲೆ ಉದ್ಘಾಟಿಸಿ ಶನಿವಾರ ಮಾತನಾಡಿದರು. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೆಕೆಆರ್‌ಡಿಬಿ, ಎಸ್‌ಡಿಪಿ ಅಡಿ ಒಂದು ಕೋಟಿ ರೂ. ವೆಚ್ಚದಲ್ಲಿ ಶಾಲೆ ನಿರ್ಮಿಸಿಕೊಂಡಿದ್ದಾರೆ.

    ಕುಡಿವ ನೀರು, ವಿದ್ಯುತ್ ಮತ್ತು ಪ್ರಾಥಮಿಕ ಶಾಲೆ ಬಳಿ ನಾಮಫಲಕ ಹಾಕಿ, ಸಿಸಿ ರಸ್ತೆ ನಿರ್ಮಾಣಕ್ಕೆ 25 ಲಕ್ಷ ರೂ. ನೀಡಿದ್ದು, ಒಳ್ಳೇ ಗ್ರಾವಲ್ ಹಾಕಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಿದರು. ಶಾಲೆಯಲ್ಲಿ ಡಿಜಿಟಲ್ ಲೈಬ್ರರಿ ಮಾಡಿ, 6 ಕಂಪ್ಯೂಟರ್ ಕೊಡ್ತೀನಿ ಎಂದರು.

    ಭೂದಾನ ಮಾಡಿದ ಮಾಳಿಗಿ ಈರಣ್ಣ ಮಗನಿಗೆ ಕೃತಜ್ಞತೆ ಸಲ್ಲಿಸಿದರು. ತಹಸೀಲ್ದಾರ್ ಜಿ.ಅನಿಲ್ ಕುಮಾರ್, ತಾಪಂ ಇಒ ಎಚ್.ಷಡಕ್ಷರಯ್ಯ, ಸಿಪಿಐ ಮಹೇಶ್ ಗೌಡ, ಬಿಇಒ ಡಾ.ಐ.ಆರ್.ಅಕ್ಕಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಏಕಾಂಬ್ರಪ್ಪ, ಇಸಿಒ ಬಸವರಾಜ್, ಪ್ರಭಾರ ಮುಖ್ಯಶಿಕ್ಷಕಿ ಗೀತಾ ಮರೋಳ್, ಗ್ರಾಪಂ ಅಧ್ಯಕ್ಷ ಪಿ.ಜಗದೀಶ, ಪಿಡಿಒ ಫಕ್ಕೀರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts