More

    VIDEO ] ಮಾತೃಶಕ್ತಿಗೆ ಸೋತ ನಾಗರಹಾವು

    ತಾಯಿ ಎಂಬ ಅದಮ್ಯ ಶಕ್ತಿಯನ್ನು ವರ್ಣಿಸಲು, ಪದಗಳಲ್ಲಿ ಬಂಧಿಸಲು ಸಾಧ್ಯವಿಲ್ಲ ಆದ್ದರಿಂದಲೇ ತಾಯಿಯನ್ನು ‘ಪದಗಳಿಗೆ ಸಿಗದ ಗುಣದವಳು’ ಎಂದೇ ವರ್ಣಿಸುತ್ತಾರೆ. ಮನುಕುಲದಲ್ಲಿ ತಾಯಿಯೇ ಅಂತಿಮ ದೈವ ಎಂಬ ನಂಬಿಕೆ ಇದೆ. ಈ ಪೂಜ್ಯನೀಯ ಭಾವನೆ ಮನುಷ್ಯ ಜೀವಿಗಳಲ್ಲಿ ಮಾತ್ರವಲ್ಲ. ಸಕಲ ಜೀವರಾಶಿಗಳಲ್ಲೂ ಇದೆ. ಮರಿಗಳನ್ನು ತಮ್ಮ ತೆಕ್ಕೆಯಲ್ಲೇ ಬಚ್ಚಿಟ್ಟುಕೊಂಡು ಪೋಷಿಸಿ ಬೆಳೆಸುವ ಪ್ರಾಣಿ ಪಕ್ಷಿಗಳದೆಷ್ಟೋ.
    ತನ್ನ ಮರಿಗಳಿಗೆ ಕುತ್ತು ಬಂತೆಂದರೆ ಯಾವ ಪ್ರಾಣಿ, ಪಕ್ಷಿಯಾದರೂ ಸರಿ, ಪ್ರಾಣಾಪಾಯವನ್ನೂ ಲೆಕ್ಕಿಸದೆ ಘೋರ ಕಾಳಗಕ್ಕಿಳಿಯುತ್ತವೆ. ಅಂಥದೇ ಒಂದು ಘಟನೆ ಇಲ್ಲಿಯೂ ನಡೆದಿದೆ ನೋಡಿ.

    ತನ್ನ ಮರಿಗಳನ್ನು ನಾಗರಹಾವಿನ ದಾಳಿಯಿಂದ ಪಾರು ಮಾಡಲು ಹಾವಿನೊಂದಿಗೆ ಕೋಳಿಯೊಂದು ಘೋರ ಯುದ್ಧಕ್ಕಿಳಿದ ದೃಶ್ಯವಿದು.
    ಭಾರತೀಯ ಅರಣ್ಯ ಸೇವೆಯ ಸುಸಾಂತ ನಂದಾ ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ದೃಶ್ಯಾವಳಿಯನ್ನು ಹಂಚಿಕೊಂಡಿದ್ದು ಈಗಾಗಲೇ 13ಸಾವಿರ ಬಾರಿ ಜನ ಇದನ್ನು ವೀಕ್ಷಿಸಿದ್ದಾರೆ.
    ಭರ್ಜರಿ ಭೋಜನದ ಆಸೆ ಹೊತ್ತು ಹಾವು ಹೊಂಚು ಹಾಕುತ್ತ ಬಂದಿತ್ತೇನೋ. ಕೋಳಿಯೇನು ಮಹಾ? ಸುಲಭದ ತುತ್ತಿಗೆ ಸಿಗುವಂಥದ್ದು ಯೋಚನೆಯಿಂದಲೂ ಅದು ಬಂದಿರಬಹುದು. ಆದರೆ ಕಹಾನಿ ಮೇ ಟ್ವಿಸ್ಟ್ ಎಂಬಂತೆ ಕೋಳಿಯ ಆವರಣಕ್ಕೆ ಬಂದಾಗ ಹಾವಿನ ಲೆಕ್ಕಾಚಾರ ಉಲ್ಟಾ ಹೊಡೆಯಿತು.
    ಕೋಳಿ ಹಾವನ್ನು ತಡೆಯುವ ಶತಪ್ರಯತ್ನದಲ್ಲಿದ್ದಾಗಲೇ ನಾಗರಹಾವು ಆವರಣದೊಳಗೆ ನುಗ್ಗಿಬಿಟ್ಟಿತು. ಆಗ ಶುರುವಾಯ್ತು ನೋಡಿ ಇವುಗಳ ಮಧ್ಯೆ ಕಾಳಗ. ಕೋಳಿ ಮರಿಗಳು ದಿಕ್ಕೆಟ್ಟು ಆಚೀಚೆ ಓಡಾಡಲಾರಂಭಿಸಿದವು. ಆದಾಗ್ಯೂ, ಕೋಳಿ ಸೋಲನ್ನು ಒಪ್ಪಿಕೊಳ್ಳಲಿಲ್ಲ ಮತ್ತು ಕೋಳಿ ಮರಿಗಳು ಆವರಣದಿಂದ ಸುರಕ್ಷಿತವಾಗಿ ಹೊರಹೋಗುವವರೆಗೂ ನಾಗರಹಾವಿನೊಂದಿಗೆ ಕಾಳಗ ಮುಂದುವರಿದೇ ಇತ್ತು.

    ಇದನ್ನೂ ಓದಿ: ಶೀಘ್ರವೇ ಬರಲಿದೆ ಉದ್ಯಮಶೀಲತಾ ಕೌಶಲಗಳ ಮೇಲೆ ಬೆಳಕು ಚೆಲ್ಲುವ ಡಿಟಿಎಚ್ ಚಾನೆಲ್

    ಏತನ್ಮಧ್ಯೆ, ಕೋಳಿಯನ್ನು ಕಚ್ಚಲೂ ಕೂಡ ಹಾವು ಪ್ರಯತ್ನಿಸಿತು ಆದರೆ ತಾಯಿ ಕೋಳಿ ತನ್ನ ಮಾತೃ ಶಕ್ತಿಯಿಂದ ಮರಿಗಳನ್ನು ಪ್ರಾಣಾಪಾಯದಿಂದ ಪಾರುಮಾಡುವಲ್ಲಿ ಯಶಸ್ವಿಯಾಯಿತು.
    ತನ್ನ ಮರಿಗಳನ್ನು ರಕ್ಷಿಸಲು ನಾಗರಹಾವಿನೊಂದಿಗೆ ದಿಟ್ಟತನದಿಂಧ ಹೋರಾಡಿದ ‘ಮಹಾ’ ತಾಯಿ. ಇದು ದಿಟ್ಟ ಹೋರಾಟ.’ಮಹಾ’ಯುದ್ಧ’ ಎಂದು ಸುಸಾಂತ ನಂದಾ ತಮ್ಮ ಪೋಸ್ಟ್​ಗೆ ಶೀರ್ಷಿಕೆ ನೀಡಿದ್ದಾರೆ. ಲದಲ್ಲಿ ಈ ವೀಡಿಯೋ ಭರ್ಜರಿ ವೈರಲ್ ಆಗಿದೆ. ಜತೆಗೆ ನೆಟ್ಟಿಗರು ತಾಯಿ ಕೋಳಿಯ ಸಾಹಸವನ್ನು ಮೆಚ್ಚಿ, ಮಾತೃ ಶಕ್ತಿಯನ್ನು ಕೊಂಡಾಡಿದ್ದಾರೆ.

    ಕಲೆಗೆ ಧರ್ಮದ ಹಂಗಿಲ್ಲ ಎಂದು ಸಾಬೀತುಪಡಿಸಿದ ಮುಸ್ಲಿಂ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts