More

    ರಾಮದುರ್ಗಕ್ಕೆ ಚನ್ನಮ್ಮ ವೀರಜ್ಯೋತಿ

    ರಾಮದುರ್ಗ: ಪಟ್ಟಣಕ್ಕೆ ಅ.18ರಂದು ಕಿತ್ತೂರು ಚನ್ನಮ್ಮ ವೀರಜ್ಯೋತಿಯಾತ್ರೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಮುಖಂಡರು ಜ್ಯೋತಿಯಾತ್ರೆ ಸ್ವಾಗತ ಹಾಗೂ ಮೆರವಣಿಗೆ ಕುರಿತು ತಹಸೀಲ್ದಾರ್ ಅವರೊಂದಿಗೆ ಮಂಗಳವಾರ ಚರ್ಚೆ ನಡೆಸಿದರು.

    ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ, ಪಟ್ಟಣದ ಸಂಗೊಳ್ಳಿ ರಾಯಣ್ಣ ಸರ್ಕಲ್‌ಗೆ ಆಗಮಿಸುವ ಜ್ಯೋತಿಗೆ ಭವ್ಯ ಸ್ವಾಗತ ಕೋರುವ ಮೂಲಕ ಸುಮಂಗಲೆಯರ ಕುಂಭಮೇಳ, ಆರತಿ, ವಿವಿಧ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆ ಹುತಾತ್ಮ ಸರ್ಕಲ್ ಮುಖಾಂತರ ತೇರ ಬಜಾರದ ಶ್ರೀ ವೆಂಕಟೇಶ್ವರ ದೇವಸ್ಥಾನದ ಮುಖಾಂತರ ಸವದತ್ತಿ ತಾಲೂಕಿಗೆ ಬೀಳ್ಕೊಡಲಾಗುತ್ತದೆ ಎಂದರು.

    ಜ್ಯೋತಿಯಾತ್ರೆ ಹಾಗೂ ಮೆರವಣಿಗೆ ಚಟುವಟಿಕೆಗಳಿಗೆ ಲಿಂಗಾಯತ ಪಂಚಮಸಾಲಿ ಸಮುದಾಯದವರ ನೇತೃತ್ವದಲ್ಲಿ ಸರ್ವ ರೀತಿ ಸಹಕಾರ ನೀಡುತ್ತೇವೆ. ಯಶಸ್ಸಿಗೆ ಸರ್ವರೂ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಅಧಿಕಾರಿಗಳು ಸಹಕರಿಸಬೇಕು ಎಂದು ತಹಸೀಲ್ದಾರ್ ಹೊಳೆಪ್ಪಗೋಳ ಮನವಿ ಮಾಡಿದರು.

    ಗ್ರೇಡ್-2 ತಹಸೀಲ್ದಾರ್ ಸಂಜಯ ಖಾತೇದಾರ, ಸಮುದಾಯದ ಟ್ರಸ್ಟ್ ಅಧ್ಯಕ್ಷ ಬಿ.ಎಫ್.ಬಸಿಡೋಣಿ, ಅಧ್ಯಕ್ಷ ಮಾರುತಿ ಕೊಪ್ಪದ, ಮುಖಂಡರಾದ ಪಿ.ಎಫ್.ಪಾಟೀಲ, ವೈ.ಎಚ್.ಪಾಟೀಲ, ಎಂ.ಎನ್.ದೇಸಾಯಿ, ಬಾಳಪ್ಪ ಹಂಜಿ, ಎನ್.ಬಿ.ದಂಡಿದುರ್ಗಿ, ಡಾ.ಬಿ.ಎನ್.ಮಾದನ್ನವರ, ಶ್ರೀದೇವಿ ಮಾದನ್ನವರ, ಮಹಾದೇವಪ್ಪ ಮದಕಟ್ಟಿ, ಗೌಡಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ಬಾವಿಕಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts