More

    ಚನ್ನಮ್ಮ ನಾಡ ಉಳಿವಿಗಾಗಿ ಹೋರಾಡಿದ ವೀರಮಹಿಳೆ

    ದೇವದುರ್ಗ: ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿ ಉಳಿವಿಗಾಗಿ ಹೋರಾಟ ಮಾಡಿದ ಮಹಾನ್ ಹೋರಾಟಗಾರ್ತಿ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.

    ಇದನ್ನೂ ಓದಿ: ಎರಡನೇ ಝಾನ್ಸಿ ರಾಣಿ ಲಕ್ಷ್ಮೀಬಾಯಿ; ತಹಸೀಲ್ದಾರ್ ಟಿ.ಜಗದೀಶ್ ಬಣ್ಣನೆ

    ನಗರದ ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಚನ್ನಮ್ಮ ಭಾರತೀಯ ಸಂಸ್ಕೃತಿ ಪರಂಪರೆ ಉಳಿಯುಗಾಗಿ ಹೋರಾಟ ಮಾಡಿದ ಸ್ಫೂರ್ತಿಯ ಚಿಲುಮೆ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ತನ್ನ ಸಾಹಸವನ್ನು ಮೆರೆದು, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು.

    ಚನ್ನಮ್ಮಳ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ ಅಮತ್ತೂರು ಬಾಳಪ್ಪ ಚೆನ್ನಮ್ಮಳ ನಿಷ್ಟಿಗೆ ಪಾತ್ರರಾಗಿದ್ದರು. ಚನ್ನಮ್ಮ ನಾಡಿನ ಸ್ತ್ರಿ ಕುಲದ ಸಾಹಸಿ. ಕರ್ನಾಟಕ ನಾಡಿನ ಪರಂಪರೆಯಲ್ಲಿ ಸಾಲು ಸಾಲು ವೀರ ಮಹಿಳೆಯರ ಹೆಸರುಗಳಿವೆ. ಕೇಳದಿ ಚನ್ನಮ್ಮ, ಬೆಳವಡಿಯ ಮಲ್ಲಮ್ಮ, ಉಳ್ಳಾಲದ ರಾಣಿ ಅಬ್ಬಕ್ಕ, ಒಣಕೆ ಓಬವ್ವ ಕರ್ನಾಟಕ ಇತಿಹಾಸ ಚರಿತ್ರೆಯಲ್ಲಿ ವೀರ ಮಹಿಳೆ ಎನಿಸಿದ್ದಾರೆ ಎಂದರು.

    ಗ್ರೇಡ್ 2 ತಹಸೀಲ್ದಾರ್ ವೆಂಕಟೇಶ್ ಕುಲಕರ್ಣಿ, ಚನ್ನಮ್ಮ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ನೌಕರರಾದ ಗೋವಿಂದ ನಾಯಕ್, ಭೀಮರಾಯ ನಾಯಕ್, ಕಂದಾಯ ನಿರೀಕ್ಷಕ ಭೀಮನಗೌಡ, ಪ್ರವೀಣ್, ರಾಕೇಶ್, ರವಿಕುಮಾರ್, ಅನಿಲ್ ಕುಮಾರ್, ಗಣೇಶ್, ದಂಡಪ್ಪ, ಹನುಮಂತಪ್ಪ ಮನ್ನಾಪುರ, ಇಕ್ಬಾಲ್ ಸಾಬ್, ಶಿವಪುತ್ರ ಉಪ್ಪಾರ್, ಕವಿತಾ, ಸರಸ್ವತಿ, ಪಾರ್ವತಿಬಾಯಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts