More

    ಎರಡನೇ ಝಾನ್ಸಿ ರಾಣಿ ಲಕ್ಷ್ಮೀಬಾಯಿ; ತಹಸೀಲ್ದಾರ್ ಟಿ.ಜಗದೀಶ್ ಬಣ್ಣನೆ

    ಕೂಡ್ಲಿಗಿ: ವೀರ ಮಾತೆ ಕಿತ್ತೂರ ರಾಣಿ ಚನ್ನಮಳ್ಮ ಧೈರ್ಯ, ಬೇಕು ಎಂದು ತಹಸೀಲ್ದಾರ್ ಟಿ.ಜಗದೀಶ್ ಹೇಳಿದರು. ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಮಸಾಲಿ ಸಮುದಾಯ ಆಯೋಜಿಸಿದ್ದ ರಾಣಿ ಚನ್ನಮ್ಮ ವಿಜಯೋತ್ಸವ ಹಾಗೂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಿತ್ತೂರು ರಾಣಿ ಚನ್ನಮ್ಮ ದೇಶದ ಎರಡನೇ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಎಂದೇ ಹೆಸರಾಗಿದ್ದಾರೆ ಎಂದರು.

    ಪೌಢ ಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಸಿದ್ದರಾಧ್ಯ ಮಾತನಾಡಿ, ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರ ಪಂಕ್ತಿಗೆ ಸೇರಿರುವ, ಸ್ವಾತಂತ್ರ್ಯ ಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ ಚನ್ನಮ್ಮ ಎಂದು ಶ್ಲಾಘಿಸಿದರು.

    ಪಂಚಮಸಾಲಿ ಸಮುದಾಯದ ತಾಲೂಕು ಅಧ್ಯಕ್ಷ ಹೊಂಬಾಳೆ ರೇವಣ್ಣ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಪಂಚಮಸಾಲಿ ಸಮುದಾಯದ ಯುವ ಘಟಕದ ಜಿಲ್ಲಾಧ್ಯಕ್ಷ ಗುಳಿಗಿ ವೀರೇಂದ್ರ, ಜಿಲ್ಲಾ ಗೌರವಾಧ್ಯಕ್ಷ ಎಂ.ಶಿವಣ್ಣ, ನೌಕರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್, ಸಿಪಿಐ ವಸಂತ ಅಸೋದೆ, ಶಾಸಕರ ಆಪ್ತ ಕಾರ್ಯದರ್ಶಿ ಬಿ.ಶ್ರೀಕಾಂತ್, ಟಿ.ಜಿ.ಮಲ್ಲಿಕಾರ್ಜುನ ಗೌಡ, ಕೋಗಳಿ ಮಂಜುನಾಥ, ಕೆ.ಎಸ್.ವೀರೇಶ್, ಸಂದೀಪ್ ಪಾಟೀಲ್, ಸಿದ್ದೇಶ್,ನಂದಿ ಬಸವರಾಜ, ಕಲ್ಲೇಶ್, ಖಾನವಳಿ ಕೊಟ್ರೇಶ್, ಜೆ.ಇ.ನಾಗನಗೌಡ, ಕೆ.ನಾಗರಾಜ, ಗಿರೀಶ್, ಶರಣಪ್ಪ, ಕೊಟ್ರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts