More

    ಸ್ವಾತಂತ್ರ್ಯ ಹೋರಾಟಗಾರರ್ತಿ ಚನ್ನಮ್ಮರನ್ನು ಮರೆತ ಸರ್ಕಾರ; ಕೃಷ್ಣಮೂರ್ತಿ ಕುಲಕರ್ಣಿ ಬೇಸರ

    ಹಾವೇರಿ: ಮಹಾತ್ಮಾ ಗಾಂಧಿ ಹಾಗೂ ಸಂತ ವಿನೋಭಾ ಭಾವೆ ಅವರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಹೊಸರಿತ್ತಿಯ ಹೋರಾಟಗಾರ್ತಿ, ಅಪ್ಪಟ ಗಾಂಧಿವಾದಿ ಚನ್ನಮ್ಮ ಹಳ್ಳಿಕೇರಿ ಅವರನ್ನು ಸರ್ಕಾರ ಮರೆತಿದೆ ಎಂದು ಚಿಂತನ ವೇದಿಕೆ ಅಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು.
    ನಗರದ ಗೌರಿಮಠದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಪುಣೆ ಸಮೀಪದ ಪವನಾರ ವಿನೋಭಾ ಆಶ್ರಮದಲ್ಲಿ ನಿಧನ ಹೊಂದಿದ ಸ್ವಾತಂತ್ರೃ ಹೋರಾಟಗಾರ್ತಿ ಚನ್ನಮ್ಮ ಹಳ್ಳಿಕೇರಿ ಅವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚೆಗೆ ಚನ್ನಮ್ಮನವರು ಸ್ವಗ್ರಾಮಕ್ಕೆ ಆಗಮಿಸಿದಾಗ ಜಿಲ್ಲಾಡಳಿತ ನಿರ್ಲಕ್ಷೃ ವಹಿಸಿತ್ತು. ಈಗ ನಿಧನ ಹೊಂದಿದಾಗಲೂ ಸೂಕ್ತ ಗೌರವ ನೀಡಲಿಲ್ಲ. ಹಾಗಾಗಿ, ಆಶ್ರಮದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದರು.
    ಸಾನ್ನಿಧ್ಯ ವಹಿಸಿದ್ದ ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಮಠದಲ್ಲಿ ಈ ಹಿಂದೆ ನಡೆದ ಕಚುಸಾಪ 6ನೇ ಸಮ್ಮೇಳನದ ಸರ್ವಧ್ಯಕ್ಷರನ್ನಾಗಿ ಚನ್ನಮ್ಮ ಅವರನ್ನು ಮಾಡುವ ಮೂಲಕ ಗೌರವ ಸೂಚಿಸಲಾಗಿತ್ತು. ಅವರ ಹೋರಾಟದ ಜೀವನ ನಮಗೆಲ್ಲ ಮಾದರಿ ಎಂದರು.
    ಮುಖ್ಯಶಿಕ್ಷಕ ಶಂಕರ ಅಕ್ಕಸಾಲಿ, ನಿಂಗಪ್ಪ ಆರ್., ವಿರೂಪಾಕ್ಷ ಲಮಾಣಿ, ಮಹಾಂತೇಶ ಸಂಗೂರ, ರವಿ ತಿಮ್ಮನಗೌಡ್ರ, ಶಿಕ್ಷಕಿಯರಾದ ಲಕ್ಷ್ಮೀ ಜಂತಿಕಟ್ಟಿ, ಸರಸ್ವತಿ ಹಿರೇಮಠ, ಮಂಜುಳಾ ಈಳಗೇರ, ಕಾವ್ಯಾ ಕೊರಕ್ಕನವರು, ಪವಿತ್ರಾ ಬಣಕಾರ, ಚಂದನ ಆರ್, ರೇಷ್ಮಾಬಾನು ನದಾಫ, ರೇಣುಕಾ ಬಣಕಾರ, ಶಹಬಾಜ ಪಾಟೀಲ, ಭಾಗ್ಯ ವಿಭೂತಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts