More

    ಕೇರಳಕ್ಕೆ ರೈಲ್ವೆ ಲಿಂಕ್ ಒದಗಿಸಲು ಆದ್ಯತೆ

    ಬಳ್ಳಾರಿ: ಪ್ರತಿಯೊಬ್ಬರೂ ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸುವುದರಿಂದ ಪರಸ್ಪರ ಸಾಮರಸ್ಯ ಬೆಳೆಯುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೆಂದ್ರ ಹೇಳಿದರು.


    ನಗರದ ಬಂಟ್ಸ್ ಭವನದಲ್ಲಿ ಕೇರಳ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಭಾನುವಾರ ಆಯೋಜಿಸಿದ್ದ ಓಣಂ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


    ಬಳ್ಳಾರಿ ಮಹಾನಗರದಲ್ಲಿ ಕೇರಳದ ಕಲ್ಚರಲ್ ಅಸೋಸಿಯೇಷನ್ ಕಳೆದ 35 ವರ್ಷಗಳಿಂದ ಸಾಂಪ್ರದಾಯಿಕ ಓಣಂ ಹಬ್ಬವನ್ನು ಯಾವುದೇ ಮತ, ಪಂಥಗಳ ಭೇದವಿಲ್ಲದೆ ಅಚ್ಚುಕಟ್ಟಾಗಿ ಆಚರಿಸಲಾಗುತ್ತಿದೆ.

    ಕಳೆದ ವರ್ಷವೂ ಕೂಡ ಶಾಸಕನಾಗಿದ್ದ ನನ್ನನ್ನ ಪ್ರೀತಿಯಿಂದ ಆಹ್ವಾನಿಸಿ ಸತ್ಕರಿಸಿ ಹಾರೈಸಿದ್ದೀರಿ. ನಿಮ್ಮ ಹಾರೈಕೆಯ ಫಲವಾಗಿ ಇವತ್ತು ಸಚಿವನಾಗಿ ನಿಮ್ಮೊಂದಿಗೆ ಓಣಂ ಸಂಭ್ರಮ ಹಂಚಿಕೊಳ್ಳುತ್ತಿರುವುದು ಅತೀವ ಸಂತಸವನ್ನುಂಟು ಮಾಡಿದೆ ಎಂದರು.


    ದಸರಾ ಹಬ್ಬದಂತೆ ಕೇರಳ ರಾಜ್ಯದಲ್ಲಿ ಓಣಂ ಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ಹತ್ತು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ವಿಶೇಷವಾಗಿರುತ್ತದೆ. ರಂಜಾನ್, ಓಣಂ, ದಸರಾ, ಕ್ರಿಸ್‌ಮಸ್‌ಗಳಂತಹ ಹಬ್ಬಗಳನ್ನು ಆಚರಿಸುವ ಮೂಲಕ ಇಲ್ಲಿ ವಿವಿಧತೆಯಲ್ಲಿ ಏಕತೆ ಕಾಣುತ್ತಿದ್ದೇವೆ ಎಂದು ತಿಳಿಸಿದರು.


    ಕೇರಳ ಕಲ್ಚರಲ್ ಅಸೋಸಿಯೇಷನ್‌ಗಾಗಿ ಒಂದು ಎಕರೆ ಜಮೀನು ಒದಗಿಸಿ ಅನುದಾನ ನೀಡುವ ಮೂಲಕ ಎರಡು ವರ್ಷದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಿಕೊಡಲಾಗುವುದು. ದಶಕಗಳ ಬೇಡಿಕೆಯಾದ ಕೇರಳಕ್ಕೆ ರೈಲ್ವೆ ಲಿಂಕ್ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.


    ಶಾಸಕ ನಾರಾಭರತ್ ರೆಡ್ಡಿ, ಪಾಲಿಕೆ ಮೇಯರ್ ಡಿ.ತ್ರಿವೇಣಿ, ಉಪ ಮೇಯರ್ ಜಾನಕಿ, ಕೇರಳ ಕಲ್ಚರಲ್ ಅಸೋಸಿಯೇಷನ್‌ನ ಗುರುಮ್ಯಾಥೀವ್ ಜಾಕಬ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts