More

    ಸೊಂಟ, ಬೆನ್ನಿನ ಸ್ನಾಯು ಬಲಪಡಿಸಲು, ತೂಕ ಕಡಿಮೆ ಮಾಡಿಕೊಳ್ಳಲು ಈ ಆಸನ ಮಾಡಿ

    ಜಗತ್ತಿನ ಸಮಸ್ತ ಜೀವಗಳ ಅಸ್ತಿತ್ವಕ್ಕೆ ಕಾರಣವಾಗಿರುವ ಸೂರ್ಯನಿಗೆ ಯಾವುದೇ ಜಾತಿ, ಧರ್ಮವಿಲ್ಲ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ನೆರವಾಗುವ ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವುದು ಸೂರ್ಯ ನಮಸ್ಕಾರ. ಸಾಂಪ್ರದಾಯಿಕವಾಗಿ ಸೂರ್ಯ ನಮಸ್ಕಾರದ ಅಭ್ಯಾಸವನ್ನು ಸೂರ್ಯನಿಗೆ ಗೌರವ ಸಲ್ಲಿಸುವ ಸಾಧನವಾಗಿ ಬಳಸಲಾಗುತ್ತಿತ್ತು.

    ಸೂರ್ಯ ನಮಸ್ಕಾರ ಎಂದರೆ ಆಸನ ಮತ್ತು ಪ್ರಾಣಾಯಾಮಗಳ ಮಿಶ್ರಣ. ದೇಹದ ಜಡತ್ವ ಹೋಗಿ, ಮೃದುತ್ವ ಲಘುತ್ವ ಬರಲು ಸೂರ್ಯ ನಮಸ್ಕಾರ ಸಹಕಾರಿಯಾಗಿದೆ. ಜ್ಞಾನಿಗಳು ‘ಆರೋಗ್ಯಂ ಭಾಸ್ಕರಾದಿಚ್ಛೇತ್’ ಎಂದಿರುತ್ತಾರೆ. ಇದು ಹಠ, ವಿನ್ಯಾಸ ಮತ್ತು ಅಷ್ಠಾಂಗಗಳಂತಹ ಹಲವಾರು ವಿಭಿನ್ನ ಸಂಪ್ರದಾಯಗಳಲ್ಲಿ ಸಂಯೋಜಿಸಲ್ಪಟ್ಟ ಅತ್ಯಂತ ವ್ಯಾಪಕವಾಗಿ ತಿಳಿದಿರುವ ಯೋಗ ಅಭ್ಯಾಸಗಳಲ್ಲಿ ಒಂದಾಗಿದೆ. ಸೂರ್ಯದೇವನ ಅನುಗ್ರಹವಿದ್ದರೆ ಆರೋಗ್ಯ ಭಾಗ್ಯ ಲಭಿಸುತ್ತದೆ. ದೇಹಕ್ಕೆ ಲವಲವಿಕೆ ಒದಗಿ ಬರುತ್ತದೆ. ಮುಂಜಾನೆ ಹೆಚ್ಚು ಹೇರಳವಾಗಿರುವ ಪ್ರಾಣ ಶಕ್ತಿಯನ್ನು (ಜೀವ ಶಕ್ತಿ) ಬಳಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಈ ಅನುಕ್ರಮವು ಎಲ್ಲಾ ಸ್ನಾಯುಗಳು, ಅಂಗಗಳ ವ್ಯವಸ್ಥೆಗಳು ಮತ್ತು ಚಕ್ರಗಳನ್ನು ಉತ್ತೇಜಿಸುತ್ತದೆ. ಜೊತೆಗೆ ಮನಸ್ಸಿನ ಏಕಾಗ್ರತೆ ಮತ್ತು ಸ್ಥಿರತೆಯನ್ನು ಬೆಳೆಸುತ್ತದೆ.

    ಸೂರ್ಯ ನಮಸ್ಕಾರದ ಭಂಗಿಯಲ್ಲಿ ಕೆಲವು ಆಸನಗಳು ಬರುತ್ತವೆ. 1. ನಮಸ್ಕಾರ ಮುದ್ರೆ 2.ಅರ್ಧಚಕ್ರಾಸನ(ಊರ್ಧ್ವಾಸನ) 3.ಉತ್ಥಾನಾಸನ 4.ಏಕಪಾದ ಪ್ರಸರಣಾಸನ 5. ಚತುರಂಗ ದಂಡಾಸನ ದ್ವಿಪಾದ ಪ್ರಸರಣಾಸನ) 6. ಶಶಾಂಕಾಸನ 7. ಸಾಷ್ಟಾಂಗ ನಮನ(ಅಷ್ಟಾಂಗ ನಮಸ್ಕಾರ) 8. ಊರ್ಧ್ವ ಮುಖ ಶ್ವಾನಾಸನ 9. ಅಧೋಮುಖ ಶ್ವಾನಾಸನ

    ಪ್ರಯೋಜನಗಳು
    ಇದು ದೇಹದ ಎಲ್ಲಾ ಪ್ರಮುಖ ಅಂಗಗಳ ರಕ್ತ ಪರಿಚಲನೆ ಸುಧಾರಿಸುತ್ತದೆ. ಹೃದಯ ಮತ್ತು ಶ್ವಾಸಕೋಶದ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ತೋಳುಗಳ ಮತ್ತು ಸೊಂಟದ ಸ್ನಾಯುಗಳನ್ನು ಬಲಪಡಿಸುತ್ತದೆ. ಬೆನ್ನುಮೂಳೆ ಮತ್ತು ಸೊಂಟವನ್ನು ಹೆಚ್ಚು ಹೊಂದಿಕೊಳ್ಳುವಂತೆ ಮಾಡುತ್ತದೆ. ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ತೂಕವನ್ನು ಕಡಿಮೆ ಮಾಡುತ್ತದೆ. ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ಸೂರ್ಯನಮಸ್ಕಾರದ ಮೂಲ ಉದ್ದೇಶ ಒಂದೇ ಆದರೂ ಆನೇಕ ರೂಪಾಂತರಗಳು, ಪರಿವರ್ತನೆಗಳು ವಿವಿಧ ಉಪಾಸಕರಿಂದ ಬೆಳಕಿಗೆ ಬಂದಿದೆ.

    ಸೂರ್ಯ ನಮಸ್ಕಾರದ ಶ್ಲೋಕಗಳನ್ನು ತಿಳಿಸಿ.
    1. ಓಂ ಹ್ರಾಂ ಮಿತ್ರಾಯ ನಮಃ 2. ಓಂ ಹ್ರೀಂ ರವಯೇ ನಮಃ 3. ಓಂ ಹ್ರೂಂ ಸೂರ್ಯಾಯ ನಮಃ 4. ಓಂ ಹ್ರೈಂ ಭಾನವೇ ನಮಃ 5. ಓಂ ಹ್ರೌಂ ಖಗಾಯ ನಮಃ 6. ಓಂ ಹ್ರಃ ಪೂಷ್ಣೇ ನಮಃ 7. ಓಂ ಹ್ರಾಂ ಹಿರಣ್ಯಗರ್ಭಾಯ ನಮಃ 8. ಓಂ ಹ್ರೀಂ ಮರೀಚಯೇ ನಮಃ 9. ಓಂ ಹ್ರೂಂ ಆದಿತ್ಯಾಯ ನಮಃ 10. ಓಂ ಹ್ರೈಂ ಸವಿತ್ರೇ ನಮಃ 11. ಓಂ ಹ್ರೌಂ ಅರ್ಕಾಯ ನಮಃ 12. ಓಂ ಹ್ರಃ ಭಾಸ್ಕರಾಯ ನಮಃ

    ಯಾರು ಸೂರ್ಯ ನಮಸ್ಕಾರವನ್ನು ಮಾಡಬಾರದು?
    ನಿತ್ರಾಣ ಹೊಂದಿದ್ದರೆ, ಸೊಂಟನೋವು ಇದ್ದವರು, ಹೆಚ್ಚಿನ ರಕ್ತದೊತ್ತಡವಿದ್ದವರು, ಹೃದಯ ದೌರ್ಬಲ್ಯವಿದ್ದವರು, ಆರ್ಥರೈಟಿಸ್ ಹಾಗೂ ರಿಸ್ಟ್ ಗಾಯ ಇದ್ದವರು ಸೂರ್ಯ ನಮಸ್ಕಾರ ಅಭ್ಯಾಸ ಮಾಡುವುದು ಬೇಡ.

    ಮಗಳಿಗೆ ವ್ಯಾಪಾರದಲ್ಲಿ ಇಂಟ್ರೆಸ್ಟ್​ ಇಲ್ಲ ಅಂತ ಬಿಸ್ಲೆರಿ ಕಂಪೆನಿಯನ್ನೇ ಮಾರಲಿದ್ದಾರಾ.?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts