More

    ಸೂರ್ಯ ನಮಸ್ಕಾರ ಮಾಡೋದು ಹೇಗೆ? ಇಲ್ಲಿದೆ ಸ್ಟೆಪ್‌ ಬೈ ಸ್ಟೆಪ್ ವಿಧಾನ..

    ಸೂರ್ಯ ನಮಸ್ಕಾರ ಮಾಡೋದು ಹೇಗೆ? ಇಲ್ಲಿದೆ ಸ್ಟೆಪ್‌ ಬೈ ಸ್ಟೆಪ್ ವಿಧಾನ..ಸೂರ್ಯ ನಮಸ್ಕಾರ ಎಂದರೆ ಆಸನ ಮತ್ತು ಪ್ರಾಣಾಯಾಮಗಳ ಮಿಶ್ರಣ. ದೇಹದ ಜಡತ್ವ ಹೋಗಿ, ಮೃದುತ್ವ ಲಘತ್ವ ಬರಲು ಸೂರ್ಯ ನಮಸ್ಕಾರ ಸಹಕಾರಿಯಾಗಿದೆ. ಬೆಳಿಗ್ಗೆ ಎದ್ದ ಕೂಡಲೇ ನೇರವಾಗಿ ಯೋಗ ಮಾಡಲು ಕಷ್ಟವಾಗುತ್ತದೆ. ಆರಂಭದಲ್ಲಿ ಸರಳ ವ್ಯಾಯಾಮ ಆನಂತರ ಸೂರ್ಯ ನಮಸ್ಕಾರ ಮಾಡಬೇಕು. ಜ್ಞಾನಿಗಳು ‘ಆರೋಗ್ಯಂ ಭಾಸ್ಕರಾದಿಚ್ಛೇತ್’ ಎಂದಿರುತ್ತಾರೆ. ಸೂರ್ಯದೇವನ ಅನುಗ್ರಹವಿದ್ದರೆ ಆರೋಗ್ಯ ಭಾಗ್ಯ ಲಭಿಸುತ್ತದೆ. ದೇಹಕ್ಕೆ ಲವಲವಿಕೆ ಒದಗಿ ಬರುತ್ತದೆ.
    ಯೋಗ ಸಾಧಕರು ಬ್ರಾಹ್ಮೀ ಮುಹೂರ್ತ ದಲ್ಲಿಯೇ ಎದ್ದು ಮಲಮೂತ್ರ ವಿಸರ್ಜನೆ, ಮುಖಮಾರ್ಜಿನ, ಸರ್ವಾಂಗ ಸ್ನಾನ ತೀರಿಸಿ, ಸುರ್ಯೋದಯಕ್ಕೆ ಸರಿಯಾಗಿ ಮಂತ್ರ ಸಹಿತ ಸೂರ್ಯ ನಮಸ್ಕಾರಕ್ಕೆ ಸಿದ್ದರಾದರೊಳಿತು.

    ಸೂರ್ಯ ನಮಸ್ಕಾರವನ್ನು ಉಸಿರಿನ ಗತಿಯೊಂದಿಗೆ ನಿಧಾನವಾಗಿ ಅಭ್ಯಾಸ ಮಾಡಬೇಕು. ಸೂರ್ಯ ನಮಸ್ಕಾರ ಅಭ್ಯಾಸ ಮಾಡುವಾಗ ಯಾವುದೆ ಸ್ಥಿತಿಯಲ್ಲಿ ಹೆಚ್ಚು ಅವಧಿ ಇರಬಯಸಿದರೆ, ಆಗ ಉಸಿರಾಟವನ್ನು ತಡೆಹಿಡಿಯಲು ಸಹಜವಾಗಿ ಉಸಿರಾಡುತ್ತಿರಬೇಕು. ಗುರುಮುಖೇನವೇ ಶಿಸ್ತುಬದ್ದವಾಗಿ ಕಲಿಯಬೇಕು. ಆರಂಭದಲ್ಲಿ ಕೆಲವು ಸೂರ್ಯ ನಮಸ್ಕಾರಗಳನ್ನು ಮಾಡಿದರೆ ಸಾಕು. ಅನಂತರ 12 ವಿಧವಾಗಿ ಸೂರ್ಯನ ದ್ವಾದಶಮಂತ್ರ ಸಹಿತ ನಮಸ್ಕಾರಗಳನ್ನು ಮಾಡಬೇಕು.

    ಸಸ್ಯಲೋಕ ಪ್ರಾಣಿ ಪ್ರಪಂಚ ಹಾಗೂ ಮಾನವನ ದೈನಂದಿನ ಚಟುವಟಿಕೆ ಆರಂಭವಾಗುವುದೇ ಸುರ್ಯೋದಯದ ವೇಳೆ. ಆದ್ದರಿಂದ ಭಾಸ್ಕರನಿಗೆ ನಮಿಸುತ್ತಾ ಸೂರ್ಯದೇವನ ಮಂತ್ರಗಳನ್ನು ಹೇಳುತ್ತಾ ಸೂರ್ಯ ನಮಸ್ಕಾರ ಮಾಡುವುದು ನಮ್ಮ ಕರ್ತವ್ಯ.

    ಸೂರ್ಯ ನಾರಾಯಣನಿಗೆ ನಮಸ್ಕರಿಸುವ ಮಂತ್ರಃ-
    ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ |
    ತತ್ ತ್ವಂ ಪೂಷನ್, ಅಪಾವೃಣು ಸತ್ಯ ಧರ್ಮಾಯ ದೃಷ್ಟಯೇ ||

    ಮಂತ್ರದ ಅರ್ಥ ಹೀಗಿದೆ:- “ಮುಚ್ಚಳವು ಪಾತ್ರೆಯನ್ನು ಹೇಗೆ ಮುಚ್ಚುತ್ತದೇಯೋ ನಿನ್ನ ಸ್ವರ್ಣಮಯ ಬಿಂಬವು ಸತ್ಯದ ದ್ವಾರವನ್ನು ಮುಚ್ಚಿದೆ. ಓ ಸೂರ್ಯದೇವನೆ, ದಯವಿಟ್ಟು ಅದನ್ನು ಸರಿಸಿ, ಸತ್ಯಧರ್ಮ (ಜ್ಞಾನ)ಗಳ ಪ್ರಾಪ್ತಿಕ್ಕಾಗಿ ನನ್ನನ್ನು ನಡೆಸು”

    ಸೂರ್ಯ ನಮಸ್ಕಾರ ಮಾಡುವಲ್ಲಿ ಮುಖ್ಯವಾಗಿ ಎರಡು ಪ್ರಕಾರಗಳಿವೆ.
    1. 12 ಹಂತಗಳಲ್ಲಿ (ಶಶಾಂಕಾಸನ ಸಹಿತ)
    2. 10 ಹಂತಗಳಲ್ಲಿ (ಶಶಾಂಕಾಸನ ರಹಿತ)

    ಸೂರ್ಯ ನಮಸ್ಕಾರ ಮಾಡೋದು ಹೇಗೆ? ಇಲ್ಲಿದೆ ಸ್ಟೆಪ್‌ ಬೈ ಸ್ಟೆಪ್ ವಿಧಾನ..

    ಸೂರ್ಯ ನಮಸ್ಕಾರಗಳನ್ನು ಸಾಮೂಹಿಕವಾಗಿ ಅಭ್ಯಾಸ ಮಾಡುವುದರಿಂದ ಆನಂದ ಉತ್ಸಾಹ ಹೆಚ್ಚು ಒದಗಿ ಬರುತ್ತದೆ.
    ಸೂರ್ಯ ನಮಸ್ಕಾರ ಅಭ್ಯಾಸ ಮಾಡಲು ಸ್ವಚ್ಛವಾದ ಗಾಳಿ ಬೆಳಕು ಇರಬೇಕು ಮತ್ತು ಶಾಂತ ಸ್ಥಳದಲ್ಲಿ ಜಮಖಾನ ಹಾಸಿ ಅಭ್ಯಾಸ ಮಾಡಬೇಕು
    ಸೂರ್ಯ ನಮಸ್ಕಾರವನ್ನು ಯಾವಾಗಲು ಸೂರ್ಯೋದಯ (ಪೂರ್ವ) ಅಥವಾ ಸೂರ್ಯಾಸ್ತದ(ಪಶ್ಚಮ) ದಿಕ್ಕಿನಲ್ಲಿ ಮುಖಮಾಡಿ ಮಾಡಲಾಗುವುದು
    ಸೂರ್ಯ ನಮಸ್ಕಾರ ಅಭ್ಯಾಸ ಆದ ಮೇಲೆ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬೇಕು

    ಸೂರ್ಯ ನಮಸ್ಕಾರದ ಭಂಗಿಯಲ್ಲಿ ಕೆಲವು ಆಸನಗಳು ಬರುತ್ತದೆ

    1. ನಮಸ್ಕಾರ ಮುದ್ರೆ
    2. ಅರ್ಧಚಕ್ರಸನ(ಊಧ್ರ್ವಾಸನ)
    3. ಉತ್ತಾನಾಸನ
    4. ಏಕಪಾದ ಪ್ರಸರಣಾಸನ
    5. ಚತುರಂಗ ದಂಡಾಸನ( ದ್ವಿಪಾದ ಪ್ರಸರಣಾಸನ)
    6. ಶಶಾಂಕಾಸನ
    7. ಸಾಷ್ಟಾಂಗ ನಮನ(ಅಷ್ಟಾಂಗ ನಮಸ್ಕಾರ)
    8. ಊಧ್ರ್ವ ಮುಖ ಶ್ವಾನಾಸನ
    9. ಅಧೋಮುಖ ಶ್ವಾನಾಸನ

    ಸೂರ್ಯ ನಮಸ್ಕಾರ ಮಾಡೋದು ಹೇಗೆ? ಇಲ್ಲಿದೆ ಸ್ಟೆಪ್‌ ಬೈ ಸ್ಟೆಪ್ ವಿಧಾನ..ಸೂರ್ಯನಮಸ್ಕಾರದ ಮೂಲ ಉದ್ದೇಶ ಒಂದೇ ಆದರೂ ಆನೇಕ ರೂಪಾಂತರಗಳು , ಪರಿವರ್ತನೆಗಳು ವಿವಿಧ ಉಪಾಸಕರಿಂದ ಬೆಳಕಿಗೆ ಬಂದಿದೆ.

    ಸೂರ್ಯ ನಮಸ್ಕಾರದ ಪ್ರಯೋಜನಗಳು: – (ಅದೊಂದು ಸಂಕ್ಷಿಪ್ತ ಯೋಗಾಭ್ಯಾಸ)
    ದೈಹಿಕ ನಿಲುವು ಮತ್ತು ಚಲನಾ ವ್ಯವಸ್ಥೆ ಸುಗಮವಾಗುವುದು.
    ಹೃದಯ ಕ್ರಿಯೆ ಮತ್ತು ರಕ್ತ ಚಲನೆ ಸುಸೂತ್ರವಾಗುವುದು.
    ಜೀರ್ಣಕ್ರಿಯೆ ಆರೋಗ್ಯಕರವಾಗುವುದು. ಸೂರ್ಯ ನಮಸ್ಕಾರ ಒಂದು ವ್ರತ.
    ಶ್ವಾಸಕೋಶಗಳು ಬಲಿಷ್ಠವಾಗುವುವು.
    ವಿಸರ್ಜನಾ ವ್ಯವಸ್ಥೆ ಕ್ರಮಬದ್ದವಾಗುವುದು.
    ನರವ್ಯೂಹ ಮತ್ತು ಮೆದುಳು ಚುರುಕಾಗುವುದು.
    ನಿರ್ನಾಳಗ್ರಂಥಿಗಳು ಚೋದಕಗಳನ್ನು ಸರಿಯಾಗಿ ಸರವಿಸುವುವು.
    ಜನನಾಂಗಗಳು ಆರೋಗ್ಯಕರ ಬೆಳವಣಿಗೆಯಾಗಿ ವೀರ್ಯ/ಅಂಡಾಣುಗಳು ಕ್ರಮವಾಗಿ ಉತ್ಪತ್ತಿಯಾಗುವುದು.
    ಜ್ಞಾನೇಂದ್ರಿಯಗಳು ಚುರುಕುಗೊಳ್ಳುವುವು, ಕ್ರಿಯಾಶೀಲವಾಗುವುವು.
    ಶರೀರ ಮೃದುತ್ವ, ಲಘುತ್ವ ಉಂಟಾಗಿ ಮಾನಸಿಕ ಜಡತ್ವ ಮಾಯವಾಗುವುದು.

    ಸೂರ್ಯನಮಸ್ಕಾರದ ಶ್ಲೋಕಗಳು:

    1. ಓಂ ಹ್ರಾಂ ಮಿತ್ರಾಯ ನಮಃ
    2. ಓಂ ಹ್ರೀಂ ರವಯೇ ನಮಃ
    3. ಓಂ ಹ್ರೂಂ ಸೂರ್ಯಾಯ ನಮಃ
    4. ಓಂ ಹ್ರೈಂ ಭಾನವೇ ನಮಃ
    5. ಓಂ ಹ್ರೌಂ ಖಗಾಯ ನಮಃ
    6. ಓಂ ಹ್ರಃ ಪೂಷ್ಣೇ ನಮಃ
    7. ಓಂ ಹ್ರಾಂ ಹಿರಣ್ಯಗರ್ಭಾಯ ನಮಃ
    8. ಓಂ ಹ್ರೀಂ ಮರೀಚಯೇ ನಮಃ
    9. ಓಂ ಹ್ರೂಂ ಆದಿತ್ಯಾಯ ನಮಃ
    10. ಓಂ ಹ್ರೈಂ ಸವಿತ್ರೇ ನಮಃ
    11. ಓಂ ಹ್ರೌಂ ಅರ್ಕಾಯ ನಮಃ
    12. ಓಂ ಹ್ರಃ ಭಾಸ್ಕರಾಯ ನಮಃ

    ಸೂರ್ಯ ನಮಸ್ಕಾರ ಮಾಡೋದು ಹೇಗೆ? ಇಲ್ಲಿದೆ ಸ್ಟೆಪ್‌ ಬೈ ಸ್ಟೆಪ್ ವಿಧಾನ..ಸೂರ್ಯೋಪಾಸನೆ: ಸೂರ್ಯನು ಉತ್ತಮ ಅರೋಗ್ಯದತನಾಗಿದ್ದನೆ.ಸೂರ್ಯದೇವನನ್ನು ಪ್ರಸನ್ನಗೊಳಿಸಲು ನವು ಮಂತ್ರಗಳು ಸಂಗೀತದ ನೆರವು ಪಡೆಉಬಹುದು. ಅರೋಹಣ ಮತ್ತು ಅವರೋಹಣ ಕ್ರಮದಲ್ಲಿ ಮಂತ್ರೋಚ್ಛಾರಣೆ ಅಥವಾ ನಾದಗಯನ ಮಡುವ ಮೂಲಕ, ಪ್ರಾಣಾಯಾಮದ ಮೂಲಕ ಸೂರ್ಯೋಪಾಸನೆ ಮಾಡಬಹುದಾಗಿದೆ. ‘ ಉಪಾಸನೆ’ ಎಂದರೆ ದೇವತೆಗೆ ಸಮೀಪವಿದ್ದು ಆರಾಧಿಸುವುದು. ಆರಾಧನೆ ಅಥವಾ ಉಪಾಸನೆಯನ್ನು ಶಾರೀರಿಕವಗಿ, ಮಾನಸಿಕವಾಗಿ ಅಥವಾ ಆದ್ಯಾತ್ಮಿಕವಾಗಿ ಆಚರಿಸಬಹುದಗಿದೆ. ಉಪಾಸಿಸುವ ವ್ಯಕ್ತಿ ನಂಬಿಕೆ, ಸಂಕಲ್ಪ, ಸಮಚಿತ್ತ, ಅಳ ಶೃದ್ದೆ ಹೊಂದಿರಬೇಕು. ಪುರಾಣಗಳ ಪ್ರಕರ ಸೂರ್ಯದೇವನು ಕಶ್ಯಪಮುನಿ ಮತ್ತು ಅದಿತಿದೇವಯ ಪುತ್ರನಗಿದ್ದಾನೆ. ಇವನು ಜನನ ಸಮಯದಿಂದಲೇ ಎಲ್ಲ ದಿಕ್ಕುಗಳನ್ನೂ ಬೆಳಗಿದೆ ಎಂದು ಹೇಳಲಾಗಿದೆ.

    ಸೂರ್ಯನಮಸ್ಕಾರ: ಸೂರ್ಯೋಪಾಸನೆಯು ಮಂತ್ರಜಪ,ನಮಸ್ಕಾರ ಮತ್ತು ಪ್ರಾಣಾಯಮ ಮುಖಾಂತರ ನಡೆಯುವಂಥದ್ದಾಗಿದೆ. ಅಯುರ್ವೇದದ ಪ್ರಕಾರ ಸೂರ್ಯನು ಆರೋಗ್ಯದಾತನಾಗಿದ್ದಾನೆ. ಸೂರ್ಯನಿಂದಲೇ ನವು ಕವು – ಕಾಂತಿ, ತನ್ಮೂಲಕ ಜೀವಶಕ್ತಿ ಪಡೆಯುತ್ತಿದ್ದೇವೆ.ಸೂರ್ಯನು ಹೇರಳ ಬೆಳೆಗಳು,ಹಣ್ಣು ತರಕಾರಿಗಳು, ಹೂವುಗಳು ಇತ್ಯಾದಿಗಳನ್ನು ಒದಗಿಸುವ ಮೂಲಕ ಭೂಮಿಯಲ್ಲಿ ನಮ್ಮ ಜೀವನವನ್ನು ಸುಗಮಗೊಳಿಸಿದ್ದಾನೆ.

    ಸೂರ್ಯನಮಸ್ಕರವನ್ನು ಪ್ರತಿನಿತ್ಯವೂ ಆಚರಿಸಬೇಕು ಮತ್ತು ಸತ್ಪಲಿಂತಾಂಶಗಳನ್ನು ಪಡೆಯಲು ಕನಿಷ್ಠ ಪಕ್ಷ ಮೂರು ತಿಂಗಳುಗಳ ಕಲ ಮುಂದುವರಿಸಬೇಕು. ಈ ಸಾಧನೆಯನ್ನು ಭಾನುವರದ ದಿನ ಪ್ರಾರಂಭಿಸಬೇಕು ಮತ್ತು ಪ್ರತಿ ಭಾನುವಾರ ಉಪ್ಪು ಹಾಕದ ಆಹಾರವನ್ನು ಒಂದು ಹೊತ್ತು ಮತ್ರ ಸೇವಿಸಬೇಕು. ಇದರಿಂದ ಸಾಧಕರ ದೃಷ್ಟಿಪಟುತ್ವ ಸುಧಾರಿಸುತ್ತದೆ. ದೃಷ್ಟಿದೋಷಗಳು ನಿವಾರಣೆಯಗುತ್ತದೆ. ಯುವ ಪೀಳಿಗೆ ಸೂರ್ಯನಮಸ್ಕಾರದ ಆಚರಣೆಯಿಂದ ಶಾಂತಿ-ಸೌಹಾರ್ಧಯುತ ಜಗತ್ತಿನ ನಿರ್ಮಾಣಕ್ಕೆ ಬುನಾದಿ ಹಾಕಬಹುದಾಗಿರುತ್ತದೆ. ಸೂರ್ಯ ನಮಸ್ಕಾರವು ಹೃದಯ ಮಿಡಿತಗಳನ್ನು ಸುಧಾರಿಸುತ್ತದೆ. ರಕ್ತ ಪರಿಚಲನೆಯನ್ನು ಉತ್ತಮಪಡಿಸುತ್ತದೆ. ಮನಃಸ್ಥಿತಿಯನ್ನು ಜಾಗೃತವಾಗಿಸುತ್ತದೆ ಮತ್ತು ಸ್ನಾಯುಗಳ ಬಿಗಿತವನ್ನು ನಿವಾರಿಸುತ್ತದೆ.
    ಸೂರ್ಯ ನಮಸ್ಕರವು ಒಂದು ಲಯಬದ್ಧ ವ್ಯಾಯಾಮವಗಿದ್ದು 12 ಹಂತಗಳನ್ನೊಳಗೊಂಡಿದೆ. ಈ ವ್ಯಾಯಾಮದಲ್ಲಿ ಶರೀರದ ಎಂಟು ಭಾಗಗಳ ಬಳಕೆ ಆಗುತ್ತದೆ. ಅವು:ಎದೆ,ತಲೆ,ಎರಡೂ ಕೈಗಳು,ಎರಡೂ ಕಾಲುಗಳು,ದೃಷ್ಟಿ ಧ್ವನಿ ಮತ್ತು ಮಾನಸಿಕ ಎಕಾಗ್ರತೆ.

    ಸೂರ್ಯ ನಮಸ್ಕಾರ ಮಾಡೋದು ಹೇಗೆ? ಇಲ್ಲಿದೆ ಸ್ಟೆಪ್‌ ಬೈ ಸ್ಟೆಪ್ ವಿಧಾನ..ಸೂರ್ಯನಮಸ್ಕಾರ ಅಚರಣೆಯ ನಿಯಮಗಳು:
    1. ಸೂರ್ಯ ನಮಸ್ಕರಗಳನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯಗಳಲ್ಲಿ ಅಭ್ಯಾಸ ಮಾಡಬೇಕು.
    2. 6ನೇ ವಯಸ್ಸಿನನಿಂದ ಯಾರಾದರೂ ಸೂರ್ಯ ನಮಸ್ಕಾರಗಳನ್ನು ಆಚರಿಸಬಹುದು.
    3. ಸೂರ್ಯೋದಯದ ವೇಳೆ ಪೂರ್ವಾಭಿಮುಖವಾಗಿ ಮತ್ತು ಸೂರ್ಯಾಸ್ತದ ವೇಳೇ ಪಶ್ಚಿಮಾಭಿಮುಖವಾಗಿ ನಿಂತು ಮೈಮೇಲೆ ಎಳೆಯ ಸೂರ್ಯ ಕಿರಣಗಳು ಬೀಳುವ ರೀತಿ ಸೂರ್ಯ ನಮಸ್ಕಾರಗಳನ್ನು ಆಚರಿಸಬೇಕು.
    4. ಯುವಕರು, ವಯೋವೃದ್ಧರು, ಸ್ತ್ರೀಯರು-ಪುರುಷರು ಃಇಗೆ ಯಾರು ಬೇಕಾದರೂ ಸೂರ್ಯ ನಮಸ್ಕಾರ ಮಾಡಬಹುದು.
    5. ನೆಲದ ಮೇಲೆ ಒಂದು ಚಾಪೆ ಅಥವಾ ಜಮಖಾನ ಹಸಿ ಸೂರ್ಯ ನಮಸ್ಕಾರ ಮಾಡಬಹುದು. ಅದರೆ ಚಾಪೆ ಪ್ಲಾಸ್ಟಿಕ್‍ನದ್ದಾಗಿರಬೇಕು.
    6. ಸೂರ್ಯ ನಮಸ್ಕಾರ ಸಾಧಕರು ಸಸ್ಯಹಾರಿಗಳಾಗಿದ್ದರೆ ಉತ್ತಮ.
    7. ಸೂರ್ಯ ನಮಸ್ಕರವನ್ನು ಒಳ್ಳೆಯ ಗಾಳಿ-ಬೆಳಕಿನ ಸಂಚಾರವಿರುವ ಜಗದಲ್ಲಿ ಅಭ್ಯಸಿಸಬೇಕು. ಆದರೆ ಮೈ ಮೇಲೆ ಬಿರುಸಾದ ಗಾಳಿ ಬೀಸುತ್ತಿರಬಾರದು.
    8. ಸೂರ್ಯ ನಮಸ್ಕಾರವನ್ನು ಸಾಧಕರು ಹತ್ತಿಯ ಬಟ್ಟೆಗಳನ್ನು ಧರಿಸುವುದು ಉತ್ತಮ.
    9. ಪುರುಷರು ಪೈಜಾಮ ಮತ್ತು ಮಹಿಳೆಯರು ಪಂಜಾಬಿ ಉಡುಪು ದರಿಸಿ ಸೂರ್ಯ ನಮಸ್ಕಾರ ಮಡಬಹುದು.
    10. ಸೂರ್ಯ ನಮಸ್ಕಾರವನ್ನು ಉಪಾಹಾರಕ್ಕೆ ಮುಂಚೆ,ಬೆಳಿಗ್ಗೆ 8ಗಂಟೆಗೆ ಮುನ್ನ ಅಥವಾ ಸಂಜೆ 5ರಿಂದ 6ಗಂಟೆಯ ವೇಳೆಯಲ್ಲಿ ಅಭ್ಯಾಸ ಮಾಡುವುದು ವಿಹಿತ.

    ‘‘ಯೋಗರತ್ನ’ ಶ್ರೀ ಗೋಪಾಲಕೃಷ್ಣ ದೇಲಂಪಾಡಿ
    ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್‍ಪೆಕ್ಟರ್
    ಅಂತರರಾಷ್ಟ್ರೀಯ ಯೋಗ ತೀರ್ಪುಗಾರರು
    “ಪಾರಿಜಾತ”À, ಮನೆ ಸಂಖ್ಯೆ 2-72:5
    ಬಿಷಪ್ ಕಂಪೌಂಡು, ಯೆಯ್ಯಾಡಿ ಪದವು
    ಕೊಂಚಾಡಿ ಪೋಸ್ಟ್, ಮಂಗಳೂರು -575 008

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts