More

    ವಿಮಾನದಲ್ಲಿ ನಟಿಯ ಸೊಂಟ ಹಿಡಿದು ಎಳೆದ ಸಹಪ್ರಯಾಣಿಕ!

    ಮುಂಬೈ: ವಿಮಾನ ಪ್ರಯಾಣ ಮಾಡುತ್ತಿದ್ದ ನಟಿಯನ್ನು ಲೈಂಗಿಕವಾಗಿ ಶೋಷಿಸಿದ ಆರೋಪದ ಮೇಲೆ ಸಹಪ್ರಯಾಣಿಕನಾಗಿದ್ದ ಬಿಸಿನೆಸ್​​ಮನ್​ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಾಪಾರಿಯನ್ನು ಉತ್ತರಪ್ರದೇಶದ ಘಾಜಿಯಾಬಾದ್​ ನಿವಾಸಿ ನಿತಿನ್​(36) ಎಂದು ಗುರುತಿಸಲಾಗಿದೆ.

    ಮುಂಬೈ ನಿವಾಸಿಯಾದ 40 ವರ್ಷದ ಕಲಾವಿದೆಯು ಅಕ್ಟೋಬರ್​ 1 ರಂದು ದೆಹಲಿಗೆ ಹೋಗಿದ್ದು, ಅ.3 ರಂದು ದೆಹಲಿಯಿಂದ ಮುಂಬೈಗೆ ಹಿಂತಿರುಗುತ್ತಿದ್ದಳು. ವಿಮಾನವು ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ನಿಂತಾಗ ಆಕೆ ಓವರ್​ಹೆಡ್​ ಸ್ಟೋರೇಜ್​ನಿಂದ ತನ್ನ ಹ್ಯಾಂಡ್​ಬ್ಯಾಗ್​ ತೆಗೆದುಕೊಳ್ಳುತ್ತಿದ್ದಳು. ಆಗ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಆರೋಪಿಯು ನಟಿಯ ಸೊಂಟ ಹಿಡಿದು ತನ್ನೆಡೆಗೆ ಎಳೆದುಕೊಂಡ ಎನ್ನಲಾಗಿದೆ.

    ಇದನ್ನೂ ಓದಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಸ್ಲೇಟರ್ ಬಂಧನ

    ಈ ಬಗ್ಗೆ ತಕ್ಷಣ ವಿಮಾನದ ಸಿಬ್ಬಂದಿಗೆ ತಿಳಿಸಿದಾಗ, ಅವರು ಆ ವ್ಯಕ್ತಿಯನ್ನು ಪಕ್ಕಕ್ಕೆ ಬಂದು ನಿಲ್ಲಲು ಹೇಳಿದ್ದರು. ನಂತರ ಈಮೇಲ್​ ಮೂಲಕ ಏರ್​ಲೈನ್ಸ್​​ಗೆ ದೂರು ನೀಡಿದ ನಟಿಯು, ವಿಮಾನ ನಿಲ್ದಾಣದಿಂದ ಹೊರಬಂದ ನಂತರ ಸಹಾರ್​ ಪೊಲೀಸ್​ ಠಾಣೆಯಲ್ಲೂ ಲಿಖಿತ ದೂರು ಸಲ್ಲಿಸಿದ್ದಳು.

    ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ವಿಮಾನದ ಪ್ರಯಾಣಿಕರ ಮಾಹಿತಿ ಪಡೆದು, ನಟಿಯ ಸೀಟಿನ ಆಸುಪಾಸಿನಲ್ಲಿ ಕುಳಿತಿದ್ದವರ ಫೋಟೋಗಳನ್ನು ತರಿಸಿಕೊಂಡರು. ಸಂತ್ರಸ್ತ ನಟಿಯು ಆರೋಪಿಯನ್ನು ಗುರುತು ಹಿಡಿಯಲಾಗಿ ಆತನನ್ನು ಅ.14 ರಂದು ಪೊಲೀಸ್​ ಠಾಣೆಗೆ ಕರೆಸಿ, ವಿಚಾರಣೆಯ ನಂತರ ಬಂಧಿಸಲಾಯಿತು ಎನ್ನಲಾಗಿದೆ. (ಏಜೆನ್ಸೀಸ್)

    ಯಾವುದೇ ಮಕ್ಕಳಿಗೆ ಶಾಲೆಯಲ್ಲಿ ಸೋಂಕು ತಗುಲಿಲ್ಲ: ಶಿಕ್ಷಣ ಸಚಿವ ನಾಗೇಶ್​

    ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್​ ರಾಮ್​ ರಹೀಂಗೆ ಜೀವಾವಧಿ ಶಿಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts