More

    ಓವಿಯಾ ವಿರುದ್ಧ ಸೈಬರ್​ ಕ್ರೈಂಗೆ ದೂರು ನೀಡಿದ ಬಿಜೆಪಿಯಿಂದ ಗಂಭೀರ ಆರೋಪ..!

    ಚೆನ್ನೈ: ಕಾಲಿವುಡ್​ ನಟಿ ಓವಿಯಾ ವಿರುದ್ಧ ತಮಿಳುನಾಡಿನ ಬಿಜೆಪಿ ಕಾನೂನು ವಿಭಾಗ ಸೈಬರ್​ ಕ್ರೈಂಗೆ ದೂರು ನೀಡಿದ್ದು, ನಟಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ನಿನ್ನೆ ಪ್ರಧಾನಿ ಮೋದಿ ತಮಿಳುನಾಡಿಗೆ ಆಗಮಿಸಿದ್ದ ವೇಳೆ ಗೋ ಬ್ಯಾಕ್​ ಮೋದಿ (#GoBackModi) ಎಂದು ಓವಿಯಾ ಟ್ವೀಟ್​ ಮಾಡಿದ್ದರ ವಿರುದ್ಧ ಬಿಜೆಪಿ ದೂರು ಸಲ್ಲಿಸಿದೆ.

    ಭಾನುವಾರ ತಮಿಳುನಾಡಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ವಿವಿಧ ಯೋಜೆನೆಗಳಿಗೆ ಚಾಲನೆ ನೀಡಿದರು. ಪ್ರಧಾನಿ ಭೇಟಿಯ ನಡುವೆಯೇ ಗೋ ಬ್ಯಾಕ್​ ಮೋದಿ ಹ್ಯಾಷ್​ಟ್ಯಾಗ್​ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿತ್ತು. ನಟಿ ಓವಿಯಾ ಸಹ ಟ್ವೀಟ್​ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಟಿಯ ವಿರುದ್ಧ ಬಿಜೆಪಿ ಕಾನೂನು ವಿಭಾಗ ಸೈಬರ್​ ಸೆಲ್​ನ್​ ಪೊಲೀಸ್​ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ಟ್ವೀಟ್​ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಲು ಒತ್ತಾಯಿಸಿದೆ.

    ಇದನ್ನೂ ಓದಿರಿ: Web Exclusive| ಕೊಟ್ಟ ಪರಿಹಾರ ಕಸಿದುಕೊಳ್ಳುವುದೇ ಸರ್ಕಾರ? ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಶಾಕ್​

    ನಟಿಯ ಟ್ವೀಟ್​ ಹಿಂದಿನ ಉದ್ದೇಶ ಸಾರ್ವಜನಿಕ ಅಸ್ವಸ್ಥತೆಯನ್ನು ಪ್ರಚೋದಿಸುವುದೇ ಎಂದು ಪೊಲೀಸರು ಪರಿಶೀಲಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಇಷ್ಟೇ ಅಲ್ಲದೆ, ಬಿಜೆಪಿ ರಾಜ್ಯ ಕಾರ್ಯದರ್ಶಿ ಗಂಭೀರ ಆರೋಪವೊಂದನ್ನು ಮಾಡಿದ್ದು, ಭಾರತದ ಸಾರ್ವಭೌಮತ್ವದ ವಿರುದ್ಧ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸಲು ಶ್ರೀಲಂಕಾ ಮತ್ತು ಚೀನಾ, ನಟಿ ಓವಿಯಾರೊಂದಿಗೆ ಕೆಲಸ ಮಾಡುತ್ತಿವೆ. ಕೆಲವೊಂದು ರಾಜಕೀಯ ಪಕ್ಷಗಳು ಸಹ ಇದರಲ್ಲಿ ತೊಡಗಿಕೊಂಡಿವೆ. ಇದರಿಂದ ಚೆನ್ನೈ ಸುತ್ತ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗವಾಗಿದೆ ಎಂದು ಬಿಜೆಪಿಯ ರಾಜ್ಯ ಕಾರ್ಯದರ್ಶಿ ಆರೋಪಿಸಿದ್ದಾರೆ. ಆದರೆ, ತಮ್ಮ ಆರೋಪಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಕಾರ್ಯದರ್ಶಿ ಪ್ರದರ್ಶಿಸಲಿಲ್ಲ.

    ಇದನ್ನೂ ಓದಿರಿ: ಪತ್ನಿಗೆ ಕರೆ ಮಾಡಿ ತನ್ನ ಸಾವಿಗೆ ತಾನೇ ಆಹ್ವಾನ ನೀಡಿದ ಸರ್ಕಾರಿ ನೌಕರ: ಬೆಳಗಾಗುವಷ್ಟರಲ್ಲಿ ದುರಂತ ಅಂತ್ಯ!

    ಇನ್ನು ಪ್ರಧಾನಿ ಮೋದಿ ಅವರು ಭಾನುವಾರ ಬೆಳಗ್ಗೆ 10.30ರ ಸುಮಾರಿಗೆ ಚೆನ್ನೈಗೆ ತೆರಳಿದರು. ತಮಿಳುನಾಡು ಸರ್ಕಾರ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅನೇಕ ಯೋಜನೆಗಳಿಗೆ ಚಾಲನೆ ನೀಡಿದರು. ಆ ಬಳಿಕ ಸುಮಾರು 1.30ಕ್ಕೆ ಕೇರಳದ ಕೊಚ್ಚಿಗೆ ತೆರಳಿದರು. (ಏಜೆನ್ಸೀಸ್​)

    ಒಂದೇ ಮನೆಯಲ್ಲಿ ಲಾಕ್​: ವ್ಯಾಲೆಂಟೈನ್ಸ್​ ದಿನ ಬಯಲಾಯ್ತು ಯುವಕ-ಯುವತಿಯ ಲಾಕ್​ಡೌನ್​​ ರಹಸ್ಯ!

    ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಯುವಿ ವಿರುದ್ಧ ಎಫ್​ಐಆರ್​ ದಾಖಲು..!

    ಪೊಲೀಸ್ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆಗೆ 8 ಹೊಸ ನಿಯಮ ಅನುಷ್ಠಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts