More

    ‘ಲೈಫ್​ ಅಂದ್ರೆ ಗೇಮು, ಹಿಡಿಯೋ ಲಗಾಮು’ … ‘ಬ್ಯಾಡ್​ ಮ್ಯಾನರ್ಸ್​’ ಟೈಟಲ್​ ಸಾಂಗ್​ ಬಿಡುಗಡೆ

    ಬೆಂಗಳೂರು: ಯುಗಾದ ಹಬ್ಬದ ದಿನ ಅಭಿಷೇಕ್​ ಅಂಬರೀಷ್ ಅಭಿನಯದ ‘ಬ್ಯಾಡ್​ ಮ್ಯಾನರ್ಸ್​’ ಚಿತ್ರದ ಟೈಟಲ್​ ಸಾಂಗ್ ಬಿಡುಗಡೆಯಾಗುತ್ತದೆ ಎಂದು ಒಂದು ವಾರದ ಮುಂಚೆಯೇ ಸುದ್ದಿಯಾಗಿತ್ತು. ಹಾಡು ಇದೀಗ ಕೊನೆಗೂ ಯೂಟ್ಯೂಬ್​ನ ಆನಂದ್​ ಆಡಿಯೋ ಮ್ಯೂಸಿಕ್​ ಚಾನಲ್​ನಲ್ಲಿ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಇದನ್ನೂ ಓದಿ: ಮತ್ತೆ ಕನ್ನಡಕ್ಕೆ ಶಿಲ್ಪಾ ಶೆಟ್ಟಿ; ಪ್ರೇಮ್​ ನಿರ್ದೇಶನದ ‘ಕೆಡಿ’ ಚಿತ್ರದಲ್ಲಿ ನಟನೆ

    ‘ಲೈಫ್​ ಅಂದ್ರೆ ಗೇಮು ಹಿಡಿಯೋ ಲಗಾಮು’ … ಎಂದು ಸಾಗುವ ಈ ಹಾಡನ್ನು ಹಿರಿಯ ಗಾಯಕಿ ಉಷಾ ಉತ್ತುಪ್​ ಮತ್ತು ಆಕಾಶ್​ ಜಾಕೋಬ್​ ಹಾಡಿದ್ದಾರೆ. ಇದುವರೆಗೂ ಹಲವು ಕನ್ನಡ ಹಾಡುಗಳನ್ನು ಹಾಡಿರುವ ಉಷಾ ಉತ್ತುಪ್​ ಬಹಳ ವರ್ಷಗಳ ನಂತರ ಈ ಹಾಡಿಗೆ ಧ್ವನಿಯಾಗಿದ್ದಾರೆ. ಚರಣ್​ ರಾಜ್​ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದು, ಧನಂಜಯ್​ ರಂಜನ್​ ಸಾಹಿತ್ಯ ರಚಿಸಿದ್ದಾರೆ. ಇನ್ನು, ಧನಂಜಯ್​ ಈ ಹಾಡಿನ ನೃತ್ಯ ನಿರ್ದೇಶಕರು. ಇಡೀ ಹಾಡು ಮೈಕಲ್​ ಜಾಕ್ಸನ್​ ಅವರ ಪಾಪ್​ ಹಾಡುಗಳನ್ನು ನೆನಪಿಸುವಂತಿದೆ.

    ‘ಬ್ಯಾಡ್​ ಮ್ಯಾನರ್ಸ್​’ ಚಿತ್ರವು ಇದೇ ಹಾಡಿನ ಚಿತ್ರೀಕರಣದೊಂದಿಗೆ ಮುಕ್ತಾಯವಾಗಿದ್ದು, ಸದ್ಯ ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ. ಮೇ ತಿಂಗಳಲ್ಲಿ ಅಂಬರೀಷ್​ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ.

    ಇದನ್ನೂ ಓದಿ: ‘ಕಾಟೇರ’ ಚಿತ್ರದಲ್ಲಿ ಮಾಲಾಶ್ರೀ ಮಗಳು ಹೀಗೆ ಕಾಣ್ತಾರೆ ನೋಡಿ …

    ‘ಬ್ಯಾಡ್​ ಮ್ಯಾನರ್ಸ್​’ ಚಿತ್ರವನ್ನು ಸ್ಟುಡಿಯೋಸ್​ 18ನಡಿ ಕೆ.ಎಂ. ಸುಧೀರ್​ ನಿರ್ಮಿಸಿದ್ದು, ಸೂರಿ ನಿರ್ದೇಶನ ಮಾಡಿದ್ದಾರೆ. ಸುರೇಂದ್ರನಾಥ್​ ಮತ್ತು ಆಮ್ರಿ ಕಥೆ-ಚಿತ್ರಕಥೆ ಬರೆದಿರುವ ಈ ಚಿತ್ರದಲ್ಲಿ ಅಭಿಷೇಕ್​ ಅಂಬರೀಷ್​, ರಚಿತಾ ರಾಮ್​, ತಾರಾ, ದತ್ತಣ್ಣ, ಶರತ್​ ಲೋಹಿತಾಶ್ವ, ಕುರಿ ಪ್ರತಾಪ್​, ಮಿತ್ರಾ ಮುಂತಾದವರು ನಟಿಸಿದ್ದಾರೆ. ಚರಣ್​ರಾಜ್​ ಸಂಗೀತ ಮತ್ತು ಶೇಖರ್​ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

    ಬೆನ್ನು ನೋವಿನ ಭಯ; ಇನ್ಮುಂದೆ ಸಾಮಿ..ಸಾಮಿ ಎಂದು ಕುಣಿಯಲ್ಲ ಎಂದ ರಶ್ಮಿಕಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts