More

    ಟೈಟಾನಿಕ್​​ ದುರಂತ: ನಾಯಕಿಯ ಜೀವ ಉಳಿಸಿದ ಮರದ ಹಲಗೆ ಮಾರಾಟವಾದ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

    ಲಂಡನ್​: ಐಷಾರಾಮಿ ಟೈಟಾನಿಕ್‌ ಹಡಗಿನ ಘೋರ ದುರಂತದ ಬಗ್ಗೆ ಹಲವಾರು ಮಂದಿ ಕೇಳಿಯೇ ಇರುತ್ತೀರಿ. ಇತಿಹಾಸದ ಪುಟಗಳಲ್ಲಿ ಅತ್ಯಂತ ದುರಂತ ಅವಘಡ ಎಂದೇ ಕರೆಯಲ್ಪಡುವ ಈ ಹಡಗಿನ ದುರಂತದ ಕುರಿತ ಚಲನಚಿತ್ರ ಬಂದ ಮೇಲಂತೂ ಟೈಟಾನಿಕ್‌ ಹಡಗು ಜಗತ್ತಿಗೇ ಚಿರಪರಿಚಿತವಾಗಿದೆ. ನೀರಿನ ಮೇಲಿನ ಸ್ವರ್ಗದಂತಿದ್ದ ಟೈಟಾನಿಕ್​ 1912, ಏಪ್ರಿಲ್​ 14ರ ರಾತ್ರಿ ತನ್ನ ಮೊದಲ ಅಟ್ಲಾಂಟಿಕ್ ಪ್ರಯಾಣದ ಸಂದರ್ಭದಲ್ಲಿ ಮಂಜುಗೆಡ್ಡೆಗೆ ಡಿಕ್ಕಿ ಹೊಡೆದು ನೀರಿನಲ್ಲಿ ಮುಳುಗಡೆಯಾಯಿತು.

    ಕಳೆದ ವಾರವಷ್ಟೇ ಹಾಲಿವುಡ್​ ಸಿನಿಮಾಗಳಿಗೆ ಸಂಬಂಧಿಸಿದ ವಸ್ತುಗಳ ಹರಾಜು ನಡೆಯಿತು. ದಿ ಶೈನಿಂಗ್​ ಚಿತ್ರದ ಕೊಡಲಿ, ಫಾರೆಸ್ಟ್​ ಗಂಪ್​ ಚಿತ್ರದ ಚಾಕೋಲೆಟ್​ ಬಾಕ್ಸ್​ ಹಾಗೂ ಇಂಡಿಯಾನಾ ಜೋನ್ಸ್​ ಸಿನಿಮಾದ ಚಾಟಿ ಸೇರಿದಂತೆ ಅನೇಕ ವಸ್ತುಗಳು ಮಾರಾಟವಾದವು. ಈ ವೇಳೆ ಎಲ್ಲರನ್ನು ಆಕರ್ಷಿಸಿದ ವಸ್ತುವೆಂದರೆ, ಟೈಟಾನಿಕ್​ ಸಿನಿಮಾದ ಮರದ ಹಲಗೆ. ಟೈಟಾನಿಕ್​ ಸಿನಿಮಾದಲ್ಲಿ ನಾಯಕ ಜ್ಯಾಕ್ ಸಮುದ್ರದಲ್ಲಿ ಮುಳುಗಿದಾಗ ನಾಯಕಿ ರೋಸ್​ಳನ್ನು ಕಾಪಾಡಲು ಬಳಸಿದ ಮರದ ಹಲಗೆ ದಾಖಲೆ ಬೆಲೆಗೆ ಹರಾಜಿನಲ್ಲಿ ಮಾರಾಟವಾಗಿದೆ.

    ಹಾಲಿವುಡ್​ನ ಪ್ರಖ್ಯಾತ ರೆಸ್ಟೋರೆಂಟ್​ ಮತ್ತು ರೆಸಾರ್ಟ್​ ಕಂಪನಿ ಪ್ಲಾನೆಟ್​ ಹಾಲಿವುಡ್​ ಈ ಹರಾಜನ್ನು ಆಯೋಜನೆ ಮಾಡಿತ್ತು. ಈ ಹರಾಜಿನಲ್ಲಿ ಟೈಟಾನಿಕ್​ ಮರದ ಹಲಗೆ ಬರೋಬ್ಬರಿ 718,750 ಡಾಲರ್​ಗೆ ಮಾರಾಟವಾಗಿದೆ. ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 5 ಕೋಟಿ ರೂಪಾಯಿ. ಈ ಬೆಲೆ ಕೇಳಿ ಎಲ್ಲರು ಬೆರಗಾಗಿದ್ದಾರೆ, ಇಷ್ಟೊಂದು ಬೆಲೆ ಬಾಳುತ್ತಾ ಈ ಮರದ ಹಲಗೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

    ಇನ್ನೂ ಈ ಮರದ ಹಲಗೆ ಟೈಟಾನಿಕ್ ಹಡಗಿನ ಬಾಗಿಲು ಎಂದು ಹಲವರು ಭಾವಿಸುತ್ತಾರೆ. ಆದರೆ, ಇದು ಹಡಗಿನ ಭಗ್ನಾವಶೇಷದ ಒಂದು ಭಾಗ ಮಾತ್ರ. 1912 ರಲ್ಲಿ ಟೈಟಾನಿಕ್ ಹಡಗು ಮುಳುಗಿದಾಗ, ಈ ಮರದ ತುಂಡನ್ನು ಹಡಗಿನಿಂದ ಬೇರ್ಪಡಿಸಲಾಯಿತು. 1997ರಲ್ಲಿ ಟೈಟಾನಿಕ್ ಸಿನಿಮಾ ಬಿಡುಗಡೆಯಾದಾಗಿನಿಂದ, ರೋಸ್ ಮತ್ತು ಜ್ಯಾಕ್ ಇಬ್ಬರೂ ಬದುಕಲು ದೊಡ್ಡ ಮರದ ತುಂಡನ್ನು ಕಂಡುಕೊಳ್ಳಬಹುದಿತ್ತು ಎಂದು ಫ್ಯಾನ್ಸ್​ ವಲಯದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಈ ಸಿನಿಮಾದಲ್ಲಿ ಜ್ಯಾಕ್ (ಲಿಯೊನಾರ್ಡೊ ಡಿಕಾಪ್ರಿಯೊ) ಮುಳುಗುತ್ತಿರುವ ಹಡಗಿನಿಂದ ತಪ್ಪಿಸಿಕೊಂಡು, ರೋಸ್ (ಕೇಟ್ ವಿನ್ಸ್ಲೆಟ್) ಕಾಪಾಡಲು ಮರದ ತುಂಡೊಂದನ್ನು ಕಂಡುಕೊಳ್ಳುತ್ತಾನೆ. ಅದರ ಮೇಲೆ ರೋಸ್​ಳನ್ನು ಇರಿಸಿ, ತಾನು ಹೆಪ್ಪುಗಟ್ಟಿ ಸಾಯುತ್ತಾನೆ. ಕೊನೆಗೆ ರೋಸ್​ ಬದುಕುಳಿಯುತ್ತಾಳೆ.

    ಟೈಟಾನಿಕ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ (ನಿರ್ದೇಶಕ ಜೇಮ್ಸ್ ಕ್ಯಾಮರೂನ್) ಕೂಡ ಈ ವಿಷಯಕ್ಕೆ ಪ್ರತಿಕ್ರಿಯಿಸಿದ್ದು, ರೋಸ್ ಅನ್ನು “ಸ್ವಾರ್ಥಿ” ಮತ್ತು ಜ್ಯಾಕ್ “ಮೂರ್ಖ” ಎಂದು ಟೀಕಿಸಿ, ಅನೇಕ ಅಭಿಮಾನಿಗಳು ನನಗೆ ಪತ್ರಗಳನ್ನು ಬರೆದಿದ್ದಾರೆ. ಆದರೆ, ಸಿನಿಮಾ ಕತೆಯಲ್ಲಿ ಅವರು ಜ್ಯಾಕ್ ಸಾಯಲೇಬೇಕಿತ್ತು. ಹೀಗಾಗಿ ಮರದ ತುಂಡನ್ನು ಚಿಕ್ಕದಾಗಿ ಇರಿಸಲಾಯಿತು ಎಂದು ಹೇಳಿದ್ದಾರೆ.

    ಚಿತ್ರ ಬಿಡುಗಡೆಯಾದ 25 ವರ್ಷಗಳ ನಂತರ, “ಟೈಟಾನಿಕ್”ನ ಈ ದೃಶ್ಯವು ಚರ್ಚೆಯ ವಿಷಯವಾಗಿದೆ. ‘ಟ್ರೆಷರ್ಸ್ ಫ್ರಮ್ ಪ್ಲಾನೆಟ್ ಹಾಲಿವುಡ್’ ಎಂದು ಕರೆಯಲಾಗುವ ಸಂಪೂರ್ಣ ಹರಾಜು ಐದು ದಿನಗಳ ಕಾಲ ನಡೆಯಿತು. ಸುಮಾರು 1,600 ವಸ್ತುಗಳನ್ನು ಹರಾಜಿನಲ್ಲಿ ಪ್ರದರ್ಶಿಸಲಾಯಿತು. ಇದು ಪ್ರಪಂಚದಾದ್ಯಂತ 5,500 ಖರೀದಿದಾರರನ್ನು ಆಕರ್ಷಿಸಿತು ಮತ್ತು 15.6 ಮಿಲಿಯನ್ ಡಾಲರ್​ ಅಂದರೆ, 130 ಕೋಟಿ ರೂ.ಗೂ ಅಧಿಕ ಹಣವನ್ನು ಸಂಗ್ರಹಿಸಿತು. (ಏಜೆನ್ಸೀಸ್​)

    ಟೀ ಜತೆ ಈ ಹಣ್ಣನ್ನು ಸೇರಿಸಿ ಸೇವಿಸಿದ್ರೆ ಹೃದಯ ಸಮಸ್ಯೆ, ಕ್ಯಾನ್ಸರ್​ ಎಂದಿಗೂ ನಿಮ್ಮ ಬಳಿ ಸುಳಿಯಲ್ಲ!

    ಕಚ್ಚತೀವು ದ್ವೀಪ ಕುರಿತ ಹೊಸ ಮಾಹಿತಿ ಡಿಎಂಕೆ ಪಕ್ಷದ ದ್ವಂದ್ವ ನೀತಿಯ ಮುಖವಾಡ ಕಳಚಿದೆ: ಪ್ರಧಾನಿ ಮೋದಿ ವಾಗ್ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts