More

    “140 ಕೋಟಿ ಭಾರತೀಯರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದೆ”: ಮೋದಿ – ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ

    Tirupati – Prime Minister Narendra Modi had darshan at Tirumala Sri Venkateswara Temple. He has

    ತಿರುಪತಿ: “ಕಲಿಯುಗ ವೈಕುಂಠ ತಿರುಮಲೆಯ ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ 140 ಕೋಟಿ ಭಾರತೀಯರ ಆರೋಗ್ಯ, ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಲಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಇದನ್ನೂ ಓದಿ : ಬೆಂಗಳೂರು “ರಾಜ-ಮಹಾರಾಜ” ಜೋಡುಕರೆ ಕಂಬಳ ಕೂಟದ ಫಲಿತಾoಶ ಪಟ್ಟಿ ಇಲ್ಲಿದೆ ನೋಡಿ
    ಪ್ರಧಾನಿ ಮೋದಿ ಅವರು ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ವಿಶ್ವವಿಖ್ಯಾತ ತಿರುಮಲೆ ಬೆಟ್ಟದ ಮೇಲಿರುವ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದು, ದೇಶದ ಸಮಗ್ರ ನಾಗರಿಕರ ಕ್ಷೇಮ ಬಯಸಿ ಭಗವಂತನಲ್ಲಿ ಬೇಡಿಕೊಂಡಿರುವುದಾಗಿ ಬಳಿಕ ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಇದೇ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಮೋದಿಯವರಿಗೆ ವೈದಿಕ ಆಶೀರ್ವಾದ ನೀಡಿದರು. ಭಾನುವಾರ ರಾತ್ರಿಯೇ ಪ್ರಧಾನಿ ತಿರುಮಲಕ್ಕೆ ಆಗಮಿಸಿದ್ದು, ಆಂಧ್ರಪ್ರದೇಶದ ರಾಜ್ಯಪಾಲ ಎಸ್.ಅಬ್ದುಲ್ ನಜೀರ್ ಮತ್ತು ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ರೆನಿಗಿಂಟಾ ವಿಮಾನ ನಿಲ್ದಾಣದಲ್ಲಿ ಹಾಜರಿದ್ದು, ಪ್ರಧಾನಿಯವರನ್ನು ಸ್ವಾಗತಿಸಿದ್ದರು.

    ತಿರುಪತಿ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ತಿರುಮಲ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಂಪು ಹಾಸಿನ ಸ್ವಾಗತ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ತಿರುಪತಿ-ತಿರುಮಲ ದೇಗುಲದ ಸಂಕೀರ್ಣದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿತ್ತು.

    ದೇವಾಲಯ ದರ್ಶನಕ್ಕೂ ಮುನ್ನ ತೆಲಂಗಾಣದ ಹೈದರಾಬಾದ್‌ ಬಳಿಯ ಪರಿಸರ ಸಂರಕ್ಷಣೆ ಮತ್ತು ಯೋಗಕ್ಷೇಮ ಕೇಂದ್ರವಾದ ಕನ್ಹಾ ಶಾಂತಿ ವನಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಪಶುಪತಿನಾಥ ದೇವಾಲಯದ ಪ್ರತಿಕೃತಿ ಭಾರತದಲ್ಲಿ ನಿರ್ಮಿಸಲು ಅನುಮತಿ; ಸುದ್ದಿ ನಿರಾಕರಿಸಿದ ನೇಪಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts