More

    ‘ಟಿಪ್ಪು ನಿಜ ಕನಸು’ ಪುಸ್ತಕ ಮಾರಾಟಕ್ಕಿದ್ದ ನಿರ್ಬಂಧ ತೆರವು

    ಬೆಂಗಳೂರು: ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ರಚನೆಯ ‘ಟಿಪ್ಪು ನಿಜ ಕನಸುಗಳು’ ಪುಸ್ತಕದ ವಿತರಣೆ ಹಾಗೂ ಮಾರಾಟಕ್ಕೆ ತಡೆ ನೀಡಲಾಗಿತ್ತು. ಈ ಆದೇಶ ಹೊರಡಿಸಿದ್ದ ಬೆಂಗಳೂರಿನ 14ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತಾತ್ಕಾಲಿಕ ಪ್ರತಿಬಂಧಕ ಆದೇಶವನ್ನು ಗುರುವಾರ ತೆರವುಗೊಳಿಸಿದೆ.

    ಬೆಂಗಳೂರು ಜಿಲ್ಲಾ ವಕ್ಫ್ ಬೋರ್ಡ್ ಸಮಿತಿ ಮಾಜಿ ಅಧ್ಯಕ್ಷ ಬಿ.ಎಸ್. ರಫೀವುಲ್ಲಾ ಸಲ್ಲಿಸಿದ್ದ ಅಸಲು ದಾವೆಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಜೆ.ಆರ್. ಮೆಂಡೋನ್ಕಾ, ಕೃತಿಯನ್ನು ಆನ್‌ಲೈನ್ ವೇದಿಕೆ ಸೇರಿ ಎಲ್ಲಿಯೂ ಮಾರಾಟ ಹಾಗೂ ವಿತರಣೆ ಮಾಡಬಾರದು ಎಂದು ನ.21ರಂದು ನಿರ್ಬಂಧ ವಿಧಿಸಿ ಆದೇಶಿಸಿದ್ದರು.

    ಮಧ್ಯಂತರ ಆದೇಶ ವಿಸ್ತರಿಸುವಂತೆ ಕೋರಿ ರಫೀವುಲ್ಲಾ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಜಾಗೊಳಿಸಿರುವ ನ್ಯಾಯಾಲಯ, ನ. 21ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ತೆರವು ಮಾಡಲಾಗಿದೆ ಎಂದಿರುವ ಪೀಠ, ವಿಚಾರಣೆಯನ್ನು ಜ.21ಕ್ಕೆ ಮುಂದೂಡಿದೆ.

    ಆಕ್ಷೇಪವೇನು?
    ‘ಟಿಪ್ಪು ನಿಜ ಕನಸುಗಳು ಕೃತಿಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ತಪ್ಪು ಮಾಹಿತಿ ಹರಡಲಾಗಿದೆ. ಲೇಖಕರು ಎಲ್ಲಿಂದ ಮಾಹಿತಿಯನ್ನು ಪಡೆದಿದ್ದಾರೆ ಎಂಬುದನ್ನು ಪುಸ್ತಕದಲ್ಲಿ ತೋರಿಸಿಲ್ಲ. ಪುಸ್ತಕದಲ್ಲಿ ಉಲ್ಲೇಖಿಸಿರುವ ಅಂಶಗಳಿಗೆ ಇತಿಹಾಸದ ಸಮರ್ಥನೆ ಅಥವಾ ಪುರಾವೆಗಳಿಲ್ಲ. ಇತಿಹಾಸದ ತಿಳಿವಳಿಕೆಯಿಲ್ಲದೆ ಕೃತಿ ರಚಿಸಲಾಗಿದೆ. ಇಸ್ಲಾಂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮತ್ತು ಮುಸ್ಲಿಮರ ಬಗ್ಗೆ ಅವಹೇಳನಕಾರಿಯಾದ ಪದಗಳನ್ನು ಬರೆಯಲಾಗಿದೆ. ಕೃತಿಯ ಪ್ರಕಟಣೆಯಿಂದ ಸಾರ್ವಜನಿಕ ಶಾಂತಿ ಕದಡಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ’ ಎಂದು ದಾವೆಯಲ್ಲಿ ಆರೋಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts