More

    ಟಿಪ್ಪರ್-ಮಿನಿ ಬಸ್ ಡಿಕ್ಕಿ, ಹಲವರಿಗೆ ಗಾಯ

    ಕಾರ್ಕಳ: ಮಾಳ ಘಾಟಿಯ ಎಸ್.ಕೆ.ಬಾರ್ಡರ್ ಕಡೆಗೆ ಹಾದು ಹೋಗುವ ಕಾರ್ಕಳ-ಶೃಂಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್ ಹಾಗೂ ಮಿನಿ ಬಸ್ ನಡುವೆ ಡಿಕ್ಕಿ ಸಂಭವಿಸಿ ಮಿನಿ ಬಸ್ ಚಾಲಕ ಸಹಿತ ಪ್ರಯಾಣಿಕರು ಗಾಯಗೊಂಡಿದ್ದಾರೆ.

    ಟಿಪ್ಪರ್ ಚಾಲಕ ಎಸ್.ಕೆ.ಬಾರ್ಡರ್ ಕಡೆಯಿಂದ ಬಜಗೋಳಿ ಕಡೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷೃದಿಂದ ತಿರುವಿನಲ್ಲಿ ತೀರಾ ಬಲಕ್ಕೆ ಚಲಾಯಿಸಿಕೊಂಡು ಹೋಗಿ ಕಾರ್ಕಳ ಕಡೆಯಿಂದ ಎಸ್.ಕೆ. ಬಾರ್ಡರ್ ಕಡೆಗೆ ಹೋಗುತ್ತಿದ್ದ ಮಿನಿ ಟೂರಿಸ್ಟ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಆರ್.ತಿಲಕ್(23) ಹಾಗೂ ಬಸ್‌ನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಎರಡೂ ವಾಹನಗಳು ಜಖಂಗೊಂಡಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts