More

    ಪಬ್​ಜಿ ವಾಪಸಾದ ಬೆನ್ನಲ್ಲೇ ಟಿಕ್​ಟಾಕ್​ಗೂ ಗ್ರೀನ್ ಸಿಗ್ನಲ್?

    ಬೆಂಗಳೂರು: ಟಿಕ್​ಟಾಕ್, ಪಬ್​ಜಿ ಸೇರಿ ಚೀನಾದ ಒಟ್ಟು 59 ಆ್ಯಪ್​ಗಳನ್ನು ಭಾರತದಲ್ಲಿ ನಿರ್ಬಂಧಿಸಿರುವ ವಿಚಾರ ನಿಮಗೆಲ್ಲರಿಗೂ ತಿಳಿದಿರುವುದೇ. ಅದರಲ್ಲಿ ಪಬ್​ಜಿ ಹೊಸ ಅವತಾರದೊಂದಿಗೆ ಭಾರತಕ್ಕೆ ವಾಪಸಾಗಿರುವುದೂ ಹಳೆಯ ವಿಚಾರವೇ. ಇದೀಗ ಹೊಸ ವಿಚಾರವೇನೆಂದರೆ, ಪಬ್​ಜಿಯಂತೆ ಟಿಕ್​ಟಾಕ್​ ಕೂಡ ಭಾರತಕ್ಕೆ ವಾಪಸಾಗಲು ಸಿದ್ಧತೆ ಮಾಡಿಕೊಳ್ಳುತ್ತಿರುವುದು.

    ಟಿಕ್​ಟಾಕ್(TikTok) ಆ್ಯಪ್​ನ್ನು ಚೀನಾದ ಬೈಟ್​ಡ್ಯಾನ್ಸ್ ಸಂಸ್ಥೆ ತಯಾರಿಸಿತ್ತು. ಆ ಹೆಸರಿಗೆ ಈಗಾಗಲೇ ಟ್ರೇಡ್ ಮಾರ್ಕ್ ಪಡೆದಿರುವ ಸಂಸ್ಥೆ ಇದೀಗ TikTock ಹೆಸರಿಗೆ ಟ್ರೇಡ್ ಮಾರ್ಕ್ ಪಡೆಯಲು ಮುಂದಾಗಿದೆ. ಭಾರತದ ಐಟಿ ಇಲಾಖೆಯ ಎಲ್ಲ ನಿಯಮಗಳಿಗೆ ಒಪ್ಪಿಕೊಳ್ಳುವುದಾಗಿ ಸಂಸ್ಥೆ ಈ ಹಿಂದೆಯೇ ತಿಳಿಸಿದೆ. ಅದರ ಬೆನ್ನಲ್ಲೇ ಈ ರೀತಿ ಟ್ರೇಡ್ ಮಾರ್ಕ್​ಗಾಗಿ ಅರ್ಜಿ ಹಾಕಿದ್ದು ಕುತೂಹಲಕ್ಕೆ ಕಾರಣವಾಗಿದೆ.

    ಜುಲೈ 6ನೇ ತಾರೀಖಿನಂದು ಟ್ರೇಡ್ ಮಾರ್ಕ್​ಗಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಸದ್ಯ ಇನ್ನೂ ಅರ್ಜಿ ಪರಿಶೀಲನೆ ಹಂತದಲ್ಲಿದೆ. ಟ್ರೇಡ್ ಮಾರ್ಕ್ ಸಿಕ್ಕ ಮೇಲೆ ಭಾರತಕ್ಕೆ ಹೊಂದುವ ರೀತಿಯಲ್ಲಿ ನಿಯಮಗಳನ್ನು ಮಾಡಿಕೊಂಡು ಟಿಕ್​ಟಾಕ್ ಮತ್ತೆ ವಾಪಸು ಬರಬಹುದು ಎನ್ನುವ ಚರ್ಚೆ ಭಲವಾಗಿದೆ. (ಏಜೆನ್ಸೀಸ್)

    ನಟ ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್​ರನ್ನು 5 ವರ್ಷ ಬ್ಯಾನ್​ ಮಾಡಿ…

    ಬಜಾಜ್ ಚೇತಕ್​ಗೆ ಕಾಂಪಿಟೇಶನ್ ಕೊಡತ್ತಾ ಓಲಾ ಸ್ಕೂಟರ್? ಹೇಗಿರಲಿದೆ ಗೊತ್ತಾ ಓಲಾ ಸ್ಕೂಟಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts