More

    ಸಂಪೂರ್ಣ ಕಾರ್ಯ ನಿಲ್ಲಿಸಿದ ಟಿಕ್​ಟಾಕ್​: ಈಗಾಗ್ಲೇ ಇನ್ಸ್ಟಾಲ್​ ಆಗಿರೋ ಆ್ಯಪ್​ ಸಹ ವರ್ಕ್​ ಆಗ್ತಿಲ್ಲ

    ನವದೆಹಲಿ: ಲಡಾಖ್​ ಗಡಿ ಸಂಘರ್ಷದ ಬೆನ್ನಲ್ಲೇ ಭಾರತ ಸರ್ಕಾರ ಚೀನಾಗೆ ಡಿಜಿಟಲ್​ ತಿರುಗೇಟು ನೀಡಿದ್ದು, ತುಂಬಾ ಪ್ರಖ್ಯಾತಿ ಪಡೆದಿದ್ದ ಟಿಕ್​ಟಾಕ್​ ಸೇರಿದಂತೆ ಚೀನಾ ನಿರ್ಮಿತ 59 ಆ್ಯಪ್​ಗಳನ್ನು ಸೋಮವಾರ ಬ್ಯಾನ್​ ಮಾಡಿದೆ.

    ಬ್ಯಾನ್​ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಗೂಗಲ್​ ಆ್ಯಂಡ್​ ಆ್ಯಪಲ್​ ಆ್ಯಪ್​ ಸ್ಟೋರ್​ನಿಂದ ಟಿಕ್​ಟಾಕ್​ ಆ್ಯಪ್​ ಅನ್ನು ಕಿತ್ತೊಗೆಯಲಾಯಿತು. ಆದರೆ, ಈಗಾಗಲೇ ಡೌನ್​ಲೋಡ್​ ಮಾಡಿಕೊಂಡು ಇನ್​ಸ್ಟಾಲ್ ಮಾಡಲಾಗಿದ್ದ​ ಟಿಕ್​ಟಾಕ್​ ಆ್ಯಪ್ ಮಾತ್ರ​ ಕಾರ್ಯನಿರ್ವಹಿಸುತ್ತಿತ್ತು.

    ಇದನ್ನೂ ಓದಿ: VIDEO| ಪತ್ನಿಯ ಜುಟ್ಟು ಹಿಡಿದು ಊರೆಲ್ಲಾ ಎಳೆದಾಡಿ ಥಳಿಸಿದ ಪತಿ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ?

    ಆದರೆ, ಅದು ಕೂಡ ಹೆಚ್ಚಿನ ಸಮಯ ಉಳಿಯಲು ಸಾಧ್ಯವಾಗಿಲ್ಲ. ಏಕೆಂದರೆ ಟಿಕ್​ಟಾಕ್​ ಆ್ಯಪ್​ ಇದೀಗ ಸಂಪೂರ್ಣ ಆಫ್​ಲೈನ್​ಗೆ ಹೋಗಿದೆ. ನೀವು ಟಿಕ್​ಟಾಕ್​ ಆ್ಯಪ್​ ಓಪನ್​ ಮಾಡಿದರೆ 59 ಆ್ಯಪ್​ಗಳನ್ನು ಬ್ಯಾನ್​ ಮಾಡಿದ ಸರ್ಕಾರದ ಆದೇಶದ ಕುರಿತ ಸೂಚನೆಯನ್ನು ತೋರಿಸುತ್ತದೆ. ಅದರ ಸಾರ ಈ ಕೆಳಕಂಡಂತಿದೆ.

    ಆತ್ಮೀಯ ಬಳಕೆದಾರರೆ, 2020, ಜೂನ್​ 29ರಂದು ಭಾರತ ಸರ್ಕಾರ ಟಿಕ್​ಟಾಕ್​ ಸೇರಿದಂತೆ 59 ಆ್ಯಪ್​ಗಳನ್ನು ಬ್ಯಾನ್​ ಮಾಡುವ ನಿರ್ಧಾರ ತೆಗೆದುಕೊಂಡಿತು. ನಾವು ಭಾರತ ಸರ್ಕಾರದ ನಿರ್ದೇಶನವನ್ನು ಪಾಲಿಸುವ ಪ್ರಕ್ರಿಯೆಯಲ್ಲಿದ್ದೇವೆ. ಸಮಸ್ಯೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಕ್ರಮವನ್ನು ತಿಳಿದುಕೊಳ್ಳಲು ಸರ್ಕಾರದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಭಾರತದಲ್ಲಿ ನಮ್ಮ ಎಲ್ಲ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವುದು ನಮ್ಮ ಆದ್ಯತೆಯಾಗಿ ಉಳಿದಿದೆ ಎಂದು ತಿಳಿಸಿದೆ.

    ಇದನ್ನೂ ಓದಿ: ಟಿಕ್‌ಟಾಕ್‌ ಬ್ಯಾನ್‌ ಬೆನ್ನಲ್ಲೇ ಚಿಗುರಿತು ‘ಚಿಂಗಾರಿ’: ಲಕ್ಷ ಲಕ್ಷ ಡೌನ್‌ಲೋಡ್‌

    ಟಿಕ್​ಟಾಕ್​ನ ಅಧಿಕೃತ ವೆಬ್​ಸೈಟ್​ ಸಹ ದೀರ್ಘಕಾಲ ಉಳಿದಿಲ್ಲ. ಇದೀಗ ಟಿಕ್​ಟಾಕ್​. ಕಾಮ್​ (tiktok.com) ವೆಬ್​ಸೈಟ್​ ಓಪನ್​ ಮಾಡಿದರೆ, ಪೇಜ್​ ನಾಟ್​ ಫೌಂಡ್​ ಎಂಬ ಸಂದೇಶದೊಂದಿಗೆ ಮೇಲಿನ ಸೂಚನೆಯನ್ನು ಸಹ ತೋರಿಸುತ್ತಿದೆ. (ಏಜೆನ್ಸೀಸ್​)

    ಚೀನಾದ 59 ಆ್ಯಪ್​ ನಿಷೇಧಿಸ್ಪಟ್ಟರೂ, ಪಬ್​ಜಿ ಗೇಮ್​ ಯಾಕೆ ಬ್ಯಾನ್​ ಆಗಲಿಲ್ಲ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts