More

    ಸತ್ತು ಹೋಗಿದ್ದ ವೃದ್ಧ ದಿಢೀರ್​ ಪ್ರತ್ಯಕ್ಷನಾದಾಗ…!

    ಲುಧಿಯಾನಾ (ಪಂಜಾಬ್​): ಚೀನಾದ ಟಿಕ್​ಟಾಕ್​ ವಿರುದ್ಧ ಈಗ ಭಾರಿ ಪ್ರತಿಭಟನೆ ಶುರುವಾಗಿದೆ. ನಮ್ಮ ವೈಯಕ್ತಿಯ ಡಾಟಾಗಳನ್ನು ಕದ್ದು, ಗೋಲ್​ಮಾಲ್​ ಮಾಡುತ್ತಿರುವ, ಅಶ್ಲೀಲ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮೂಲಕ ಯುವ ಸಮೂಹವನ್ನು ತಪ್ಪು ದಾರಿಗೆ ಎಳೆಯುತ್ತಿರುವ ಈ ಆ್ಯಪ್​ ಬ್ಯಾನ್​ ಮಾಡಬೇಕು ಎಂಬ ಅಭಿಯಾನವೂ ದೊಡ್ಡ ಪ್ರಮಾಣದಲ್ಲಿ ನಡೆದಿದೆ.

    ಆದರೆ ಅದೇ ಇನ್ನೊಂದೆಡೆ ಇದೇ ಟಿಕ್​ಟಾಕ್​ ಅಚ್ಚರಿ ಎನಿಸುವ ಘಟನೆಗಳಿಗೂ ಸಾಕ್ಷಿಯಾಗಿದೆ. ಇಲ್ಲಿ ಹೇಳಹೊರಟಿರುವುದು ಅಂಥದ್ದೇ ಒಂದು ಘಟನೆ.
    ಇದು 60 ವರ್ಷ ವೃದ್ಧ ಪಂಜಾಬ್​ನ ಬುರಗಂಪಾಡು ಮಂಡಲ್​ ಎಂಬ ಗ್ರಾಮದ ವ್ಯಕ್ತಿಯ ಘಟನೆ. ಮಾತನಾಡಲು ಬಾರದ, ಕಿವಿ ಕೇಳಿಸದ ಆರ್​.ವೆಂಕಟೇಶ್ವರಲು ಎಂಬ ವ್ಯಕ್ತಿ 2018ರ ಏಪ್ರಿಲ್​ನಲ್ಲಿ ಇದ್ದಕ್ಕಿಂದ್ದಂತೆಯೇ ನಾಪತ್ತೆಯಾಗಿದ್ದರು. ಅವರು ಎಲ್ಲಿ ಹೋದರು, ಯಾಕಾಗಿ ಹೋದರು ಎಂಬುದು ಮನೆಯವರಿಗೆ ತಿಳಿಯಲೇ ಇಲ್ಲ.

    ಇದನ್ನೂ ಓದಿ: ಮಕ್ಕಳಿಂದ ಶೇ.70ರಷ್ಟು ಫೀಸ್​ ವಸೂಲಿ ಮಾಡಿ, ಶಿಕ್ಷಕರಿಗೆ ಶೇ.70ರಷ್ಟು ಸಂಬಳ ನೀಡಿ ಎಂದ ಹೈಕೋರ್ಟ್​

    ಪೊಲೀಸರಲ್ಲಿ ದೂರು ದಾಖಲು ಮಾಡಲಾಯಿತು. ಅಕ್ಕ-ಪಕ್ಕದ ಊರು, ನಗರ, ರಾಜ್ಯ ಎಲ್ಲೆಡೆ ವರ್ಷಗಟ್ಟಲೆ ಹುಡುಕಾಟ ನಡೆಸಿದ ಪೊಲೀಸರಿಗೆ ಇವರು ಸಿಗಲೇ ಇಲ್ಲ. ಮೊದಲೇ ಕಿವುಡು-ಮೂಕ ಆಗಿರುವ ಈ ವೃದ್ಧ ಎಲ್ಲಿಗೆ ಹೋದರು ಎಂಬ ಬಗ್ಗೆ ಮನೆಯವರಿಗೆ ಚಿಂತೆ ಆಯಿತು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಅವರು ಸಿಗಲೇ ಇಲ್ಲ.

    ಕೊನೆಯದಾಗಿ ಪೊಲೀಸರು ವೆಂಕಟೇಶ್ವರಲು ಬಹುಶಃ ಮೃತಪಟ್ಟಿರಬಹುದು ಎಂದು ಊಹಿಸಿದರು. ಮನೆಯವರು ಕೂಡ ಅದನ್ನೇ ನಂಬಿದರು. ಏಕೆಂದರೆ ಎಲ್ಲಿ ಹೋದರೂ ಅವರು ವಾಪಸಾಗುತ್ತಿದ್ದರು. ಆದರೆ ವರ್ಷವಾದಲೂ ಬಂದಿಲ್ಲ ಎಂದರೆ ಮೃತಪಟ್ಟಿರಬಹುದು ಎಂದೇ ಕುಟುಂಬದವರು ಅಂದುಕೊಂಡಿದ್ದರು.

    ಎರಡು ವರ್ಷ ಹೀಗೆಯೇ ಕಳೆದುಹೋಯಿತು. ಆದರೆ ಮೊನ್ನೆ , ವೆಂಕಟೇಶ್ವರಲು ಅವರ ಮನ ಪೆದ್ದಿ ರಾಜು ಅವರಿಗೆ ಪರಿಚಯಸ್ಥರೊಬ್ಬರು ಗಾಬರಿಯಿಂದ ಕರೆ ಮಾಡಿದರು. ಏನಾಯಿತು ಎಂದು ಕೇಳಿದಾಗ, ಮೊಬೈಲ್​ ಫೋನ್​ನಲ್ಲಿ ತಾವು ಕಳುಹಿಸಿರುವ ವಾಟ್ಸ್​ಆ್ಯಪ್​ ಮೆಸೇಜ್​ ನೋಡುವಂತೆ ಹೇಳಿದರು. ಅದರಲ್ಲಿ ಟಿಕ್​ಟಾಕ್​ ವೀಡಿಯೋ ಇತ್ತು. ಇದರಲ್ಲೇನು ವಿಶೇಷ ಎಂದು ಅದನ್ನು ನೋಡಿದಾಗ, ಎರಡು ವರ್ಷಗಳ ಹಿಂದೆ ಕಳೆದುಹೋದ, ತಾವು ಸತ್ತೇ ಹೋಗಿರುವುದಾಗಿ ನಂಬಿದ್ದ ವೆಂಕಟೇಶ್ವರಲು ಅಲ್ಲಿದ್ದರು! ನೋಡಿದ ಕುಟುಂಬಸ್ಥರಿಗೆ ಗಾಬರಿ, ಸಂತೋಷ ಎಲ್ಲವೂ ಒಟ್ಟಿಗೇ ಆಯಿತು.

    ಇದನ್ನೂ ಓದಿ: ಕರೊನಾ ನಿರ್ವಹಣೆ: ನಾಲ್ಕು ನಗರಗಳಿಗೆ ‘ರೋಲ್​ ಮಾಡೆಲ್​’ ಗರಿ- ಕೇಂದ್ರದಿಂದ ಶಹಭಾಷ್​ಗಿರಿ

    ಆಗಿದ್ದೇನೆಂದರೆ, ಲಾಕ್​ಡೌನ್​ ಹಿನ್ನೆಲೆಯಲ್ಲಿ ನಾಗೇಂದರ್​ ಎಂಬ ಯುವಕ ಲುಧಿಯಾನದಲ್ಲಿ ಕೆಲವು ಬಡ ಜನರಿಗೆ ಆಹಾರ ಪೂರೈಸುತ್ತಿದ್ದರು. ಅದನ್ನು ಅವರು ಟಿಕ್​ಟಾಕ್​ ವೀಡಿಯೋದಲ್ಲಿ ರೆಕಾರ್ಡ್​ ಮಾಡಿಕೊಂಡಿದ್ದರು. ಅದರಲ್ಲಿ ವೆಂಕಟೇಶ್ವರಲು ಅವರಿಗೂ ಆಹಾರ ಪೂರೈಕೆ ಮಾಡಲಾಗುತ್ತಿತ್ತು!

    ಅದನ್ನು ನೋಡಿದ್ದೇ ತಡ, ಮಗ ಪೆದ್ದಿರಾಜು ಪೊಲೀಸರ ಬಳಿ ಹೋಗಿ ವಿಷಯ ತಿಳಿಸಿದರು. ನಂತರ ಟಿಕ್​ಟಾಕ್​ ಮಾಡಿದ ಯುವಕನನ್ನು ಪತ್ತೆ ಹಚ್ಚಿ, ಆ ಮೂಲಕ ಅಲ್ಲಿಯ ಪೊಲೀಸರನ್ನು ಸಂಪರ್ಕಿಸಲಾಯಿತು. ಆಹಾರ ವಿತರಣೆ ಮಾಡಿರುವ ಜಾಗದಲ್ಲಿಯೇ ವೆಂಕಟೇಶ್ವರಲು ಪೊಲೀಸರಿಗೆ ಕಂಡರು. ಅಂತೂ ಅಪ್ಪ-ಮಗನನ್ನು ಒಂದು ಮಾಡಲಾಯಿತು.

    ಅವರು ಹೇಗೆ ನಾಪತ್ತೆಯಾಗಿದ್ದರು ಎಂಬ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಅಂತೂ ಯುವಜನರನ್ನು ಹಾಳು ಮಾಡುತ್ತಿರುವ ಟಿಕ್​ಟಾಕ್​, ಒಬ್ಬ ಯುವಕನ ಸಮಾಜ ಸೇವೆಯಿಂದ ಅಪ್ಪ-ಮಗನನ್ನು ಒಂದು ಮಾಡಿತು. (ಏಜೆನ್ಸೀಸ್​)

    ಮಗು ನನ್ನದಲ್ಲ ಎನ್ನಿಸುತ್ತಿದೆ, ಸಾಬೀತಾದರೆ ನನಗೆ ವಿಚ್ಛೇದನ ಸಿಗತ್ತಾ? ಅಲ್ಲವಾದರೆ ನಾನು ಜೀವನಾಂಶ ಕೊಡಬೇಕಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts