More

    ಚೆಕ್‌ಪೋಸ್ಟ್ ತಪ್ಪಿಸಿ ಬಂದವರ ಮೇಲೆ ಕಣ್ಣು

    ಉಡುಪಿ: ಏಪ್ರಿಲ್ 1ರ ನಂತರ ಜಿಲ್ಲೆಯೊಳಗೆ ಗಡಿ ತಪ್ಪಿಸಿ ಬಂದವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಕ್ವಾರಂಟೈನ್‌ನಲ್ಲಿ ಇಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ

    ಈ ರೀತಿಯಲ್ಲಿ ಬಂದವರ ಮಾಹಿತಿ ಇದ್ದರೆ ತಪ್ಪದೆ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಅವರು ಸಾರ್ವಜನಿಕರನ್ನು ವಿನಂತಿಸಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಗಡಿಗಳನ್ನು ಈಗಾಗಲೇ ಬಂದ್ ಮಾಡಿ, ಬೇರೆ ಜಿಲ್ಲೆಗಳನ್ನು ಸಂಪರ್ಕಿಸುವ ಚೆಕ್‌ಪೋಸ್ಟ್‌ಗಳಲ್ಲಿ ದಿನದ 24 ಗಂಟೆ ಬಂದೋಬಸ್ತ್ ಮಾಡಲಾಗಿದೆ. ತುರ್ತು ವೈದ್ಯಕೀಯ ಅಗತ್ಯದ ವಾಹನ ಹಾಗೂ ಅಗತ್ಯ ವಸ್ತುಗಳ ಸಾಗಾಟ ವಾಹನಗಳನ್ನು ಮಾತ್ರ ಬಿಡಲಾಗುತ್ತಿದೆ. ಆದರೆ ಮುಂಬೈ, ಬೆಂಗಳೂರು, ಭಟ್ಕಳ, ಹೈದರಾಬಾದ್, ಮೈಸೂರು ಮುಂತಾದ ಕಡೆಗಳಿಂದ ಈ ಚೆಕ್‌ಪೋಸ್ಟ್‌ಗಳನ್ನು ತಪ್ಪಿಸಿ, ಜನರು ಒಳ ಬರುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಅಂತಹವರನ್ನು ಗುರುತಿಸಿ ಕ್ವಾರಂಟೈನ್‌ನಲ್ಲಿ ಇಡಬೇಕಾದ ಅವಶ್ಯಕತೆ ಇದೆ.

    ಹೀಗಾಗಿ ಮಾಹಿತಿ ನೀಡಬೇಕು. ಇದಕ್ಕಾಗಿ ಅಧಿಕಾರಿಗಳಾದ ಚಂದ್ರಶೇಖರ ನಾಯ್ಕ (82779 32501), ಕೃಷ್ಣ ಹೆಬ್ಸೂರ್ (94495 34792), ರೋಶನ್ ಕುಮಾರ್ ಶೆಟ್ಟಿ (98454 32303) ಅವರಿಗೆ ಮಾಹಿತಿ ನೀಡಬಹುದು. ಅಥವಾ ವಾಟ್ಸಾಪ್ ಮಾಡಬಹುದು ಎಂದು ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಕೆಲವರು ಅನಗತ್ಯವಾಗಿ ಹೊರಗಡೆ ತಿರುಗಾಡುತ್ತಿದ್ದಾರೆ. ಲಾಕ್‌ಡೌನ ಮೂಲ ಉದ್ದೇಶವನ್ನು ಧಿಕ್ಕರಿಸುವುದು ಕಂಡು ಬಂದಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಂಡು ಈವರೆಗೆ 413ಕ್ಕೂ ಹೆಚ್ಚು ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

    ಜಿ.ಜಗದೀಶ್, ಉಡುಪಿ ಡಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts