More

    ಅವನ ಒಳ್ಳೆಯ ಕೆಲಸಗಳ ಬಗ್ಗೆ ಯಾಕೆ ಬರೆಯುವುದಿಲ್ಲ? … ಟೈಗರ್​ ತಾಯಿಯ ಪ್ರಶ್ನೆ

    ಮುಂಬೈ: ಲಾಕ್​ಡೌನ್​ ಸಮಯದಲ್ಲಿ ರೈಡಿಂಗ್​ಗೆ ಹೋಗಿದ್ದ ಟೈಗರ್​ ಶ್ರಾಫ್ ಮತ್ತು ದಿಶಾ ಪಠಾಣಿಗೆ ಪೊಲೀಸರು ಬೈದು ಕಳಿಸಿದ್ದಾರಂತೆ, ಅವರ ಮೇಲೆ ಕೇಸು ಹಾಕಿದ್ದಾರಂತೆ ಎಂಬಂತಹ ಸುದ್ದಿಗಳು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಲೇ ಇದೆ. ಈ ವಿಷಯವಾಗಿ, ಟೈಗರ್​ ತಾಯಿ ಮತ್ತು ಜಾಕಿ ಶ್ರಾಫ್​ ಪತ್ನಿ ಆಯೇಷಾ ಶ್ರಾಫ್​ ಮಾಧ್ಯಮದವರ ವಿರುದ್ಧ ಹರಿಹಾಯ್ದಿದ್ದಾರೆ. ಟೈಗರ್​ ಮಾಡುವ ಒಳ್ಳೆಯ ಕೆಲಸಗಳ ಬಗ್ಗೆ ಯಾಕೆ ಬರೆಯುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ಓಟಿಟಿಯಲ್ಲಿ ‘ಜಗಮೇ ತಂಧಿರಮ್’ ಬಿಡುಗಡೆಯಾಗುತ್ತಿರುವ ಬಗ್ಗೆ ಧನುಷ್​ ಬೇಸರ

    ಇತ್ತೀಚೆಗೆ, ಟೈಗರ್​ ಮತ್ತು ದಿಶಾ ಕಾರಿನಲ್ಲಿ ಹೋಗುವಾಗ ಪೊಲೀಸರು ತಡೆದಿದ್ದರು. ಆ ನಂತರ ಅವರ ಐಡಿ ಕಾರ್ಡ್​ ನೋಡಿ, ಬಿಟ್ಟು ಕಳಿಸಿದ್ದರು. ಆದರ, ಈ ಪ್ರಕರಣ ಇನ್ನೊಂದು ರೂಪ ಪಡೆದಿದೆ. ಲಾಕ್​ಡೌನ್​ ನಿಯಮಗಳನ್ನು ಗಾಳಿಗೆ ತೂರಿದ್ದರಿಂದ ಟೈಗರ್​ ಮೇಲೆ ಪೊಲೀಸರು ಕೇಸ್​ ಹಾಕಿದ್ದಾರೆ ಎಂದು ಕೆಲವು ಕಡೆ ವರದಿಯಾಗಿದೆ. ಇದು ಟೈಗರ್​ ತಾಯಿ ಆಯೇಷಾ ಶ್ರಾಫ್​ ಅವರನ್ನು ತೀವ್ರವಾಗಿ ಕೆರಳಿಸಿದೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ‘ಯಾರೂ ಇಂತಹ ಸಂದರ್ಭದಲ್ಲಿ ಸುಮ್ಮನೆ ಅಲೆಯುವುದಿಲ್ಲ. ಅಗತ್ಯ ವಸ್ತುಗಳನ್ನು ಕೊಳ್ಳುವುದಕ್ಕೆ ಹೋದಾಗ ಪೊಲೀಸರು ಅವನ ಐಡಿಯನ್ನು ನೋಡಿ, ಬಿಟ್ಟು ಕಳುಹಿಸಿದ್ದಾರೆ. ಅಷ್ಟೇ ಆಗಿದ್ದು. ಇದಕ್ಕೆ ದಯವಿಟ್ಟು ಬಣ್ಣ ಬಳಿಯಬೇಡಿ. ನನ್ನ ಮಗನ ಬಗ್ಗೆ ಸುಳ್ಳುಸುದ್ದಿಗಳನ್ನು ಹಬ್ಬಿಸಬೇಡಿ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಪ್ರಚಾರಕ್ಕಾಗಿ 5ಜಿ ಅನುಷ್ಠಾನದ ವಿರುದ್ಧ ಕೇಸ್​ ಹಾಕಿದರಾ ಜೂಹಿ?

    ಟೈಗರ್​ ಮಾಡುವ ಒಳ್ಳೆಯ ಕೆಲಸಗಳ ಬಗ್ಗೆ ಯಾಕೆ ಯಾರೂ ಬರೆಯುವುದಿಲ್ಲ ಎಂದು ಪ್ರಶ್ನಿಸಿರುವ ಆಯೇಷಾ, ‘ಹಲವು ದಿನಗಳಿಂದ ಫ್ರಂಟ್​ಲೈನ್​ ವಾರಿಯರ್​ಗಳಿಗೆ ಟೈಗರ್​ ಆಹಾರ ವಿತರಿಸುವ ವ್ಯವಸ್ಥೆ ಮಾಡುತ್ತಿದ್ದಾನೆ. ಆ ಬಗ್ಗೆ ಯಾರೂ ಯಾಕೆ ಸುದ್ದಿ ಮಾಡುವುದಿಲ್ಲ. ಏಕೆಂದರೆ, ಈ ವಿಷಯವನ್ನು ಅವನೇ ಎಲ್ಲೂ ಹೇಳಿಕೊಳ್ಳುವುದಿಲ್ಲ. ಸಾಧ್ಯವಾದರೆ ಒಳ್ಳೆಯ ವಿಷಯಗಳ ಬಗ್ಗೆ ಮಾತನಾಡಿ, ಸುಮ್ಮನೆ ಇನ್ನೊಬ್ಬರ ತೇಜೋವಧೆ ಮಾಡಬೇಡಿ’ ಎಂದು ಹೇಳಿದ್ದಾರೆ.

    ನಾನು ಮಾತಾಡಿದ್ದು ಆ ಗೋವಿಂದ ಬಗ್ಗೆ ಅಲ್ಲ … ಉಲ್ಟಾ ಹೊಡೆದ ಕೆಆರ್​ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts