More

    ಐಎಫ್​ಎಸ್​ ಅಧಿಕಾರಿ ಹಂಚಿಕೊಂಡ ಸಾವಿರ ಮಾತು ಹೇಳುವ ಚಿತ್ರಕ್ಕೆ ನಟಿ ಪೂಜಾ ಭಟ್​ ಪ್ರತಿಕ್ರಿಯಿಸಿದ್ದು ಹೀಗೆ…

    ನವದೆಹಲಿ: ಅರಣ್ಯಾಧಿಕಾರಿ (ಐಎಫ್​ಎಸ್​) ಪರ್ವೀನ್​ ಕಸ್ವಾನ್​ ಅವರು ಟ್ವೀಟರ್​ನಲ್ಲಿ ಹಂಚಿಕೊಳ್ಳುವ ಅದ್ಭುತ ಚಿತ್ರಗಳು ಸಾವಿರ ಮಾತುಗಳನ್ನು ಹೇಳುತ್ತವೆ.

    ಈಗ ಅಂತಹುದ್ದೇ ಒಂದು ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಗಮನ ಸೆಳೆಯುತ್ತಿದೆ. ಇದಕ್ಕೆ 2.2 ಸಾವಿರ ಮಂದಿಕ್ಕೂ ಹೆಚ್ಚು ಲೈಕ್​ ಮಾಡಿದ್ದು ನೂರಾರು ಮಂದಿ ರೀಟ್ವೀಟ್​ ಮಾಡಿದ್ದಾರೆ. ಇದಕ್ಕೆ ನಟಿ ಪೂಜಾ ಭಟ್​ ನೀಡಿದ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆಯುತ್ತಿದೆ.

    ಇತ್ತೀಚೆಗೆ ಪರ್ವೀನ್​ ಕಸ್ವಾನ್​ ಅವರು ಹಂಚಿಕೊಂಡ ಚಿತ್ರದಲ್ಲಿ ದಟ್ಟ ಕಾಡಿನ ನಡುವೆ ಒಂದು ದಾರಿ. ಅಲ್ಲಿ ಎಡ ಮತ್ತು ಬಲಕ್ಕೆ ಒಂದು ಲಾರಿ ಮತ್ತೊಂದು ಬುಲ್ಡೋಜರ್​ ನಿಂತಿದೆ. ನಡುವೆ ಹುಲಿಯೊಂದು ಮಲಗಿದೆ!

    ಅದಕ್ಕೆ ಪರ್ವೀನ್​ ಕಸ್ವಾನ್​ “ಈ ಸ್ಥಳ ಯಾರಿಗೆ ಸಂಬಂಧ ಪಟ್ಟಿದ್ದು. ಒಂದು ಫೋಟೋ ಮಾತಿಗಳಿಗಿಂತ ಹೆಚ್ಚಿನದ್ದೇನೋ ಹೇಳುತ್ತದೆ. ಯಾರೋ ಗೊತ್ತಿಲ್ಲದವರಿಂದ ಇದೊಂದು ಪ್ರಬಲವಾದ ಚಿತ್ರ” ಎಂದು ಬರೆದುಕೊಂಡಿದ್ದಾರೆ. #TigerLand ಎಂದು ಹ್ಯಾಷ್​ಟ್ಯಾಗ್​ ಹಾಕಿದ್ದಾರೆ.

    ನಟಿ ಮತ್ತು ನಿರ್ಮಾಪಕಿ ಪೂಜಾ ಭಟ್​ ಇದನ್ನು ರೀಟ್ವೀಟ್​ ಮಾಡಿ “ಪ್ರಾಣಿಯ ಕಣ್ಣುಗಳ ಮೂಲಕ ನೋಡಿದಾಗ ಬುಲ್ಡೋಜರ್ ಎಷ್ಟು ಭಯಾನಕ ಎಂಬ ಬಗ್ಗೆ ಯೋಚಿಸಿದ್ದೀರಾ? ಈ ಚಿತ್ರವು ಅಂತಿಮವಾಗಿ ಮನುಷ್ಯನು ಪ್ರಗತಿಯ ಹೆಸರಿನಲ್ಲಿ ವಿನಾಶದ ಹಾದಿ ತುಳಿಯುವದನ್ನು ಸೂಚಿಸುತ್ತದೆ” ಎಂದಿದ್ದಾರೆ.

    ಪರ್ವೀನ್​ ಕಸ್ವಾನ್​ ಅವರ ಈ ಪೋಟೋಗೆ ಪ್ರತಿಕ್ರಿಯಿಸಿರುವ ಅದೆಷ್ಟೋ ಮಂದಿ ಇಂತಹದ್ದೇ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿನ ಕೆಲ ಚಿತ್ರಗಳು ಇಲ್ಲಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts