More

    ವರ್ಷದ ಅವಧಿಗೆ ಹುಲಿ ದತ್ತು ಪಡೆದ ಸರ್ಕಾರಿ ನೌಕರರ ಸಂಘ

    ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಸಂಘವು ಶಿವಮೊಗ್ಗ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ ಹುಲಿಯನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿರುವುದಾಗಿ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದ್ದಾರೆ.
    ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಸೋಮವಾರ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳೊಂದಿಗೆ ಹುಲಿ ದತ್ತು ಪಡೆಯುವ ಬಗ್ಗೆ ಸಮಾಲೋಚನೆ ನಡೆಸಿದ ಅವರು, ಮೃಗಾಲಯ ಪ್ರಾಧಿಕಾರ ನಿಗದಿಪಡಿಸಿದಂತೆ 2 ಲಕ್ಷ ರೂ. ಸಂಘ ಪಾವತಿಸಲಿದೆ ಎಂದಿದ್ದಾರೆ.
    ಕರೊನಾ ನಂತರದ ದಿನಗಳಲ್ಲಿ ಮೃಗಾಲಯಗಳಲ್ಲಿನ ಪ್ರಾಣಿಗಳ ನಿರ್ವಹಣೆ ಪ್ರಾಧಿಕಾರಕ್ಕೆ ಸವಾಲಾಗಿ ಪರಿಣಮಿಸಿತ್ತು. ಅಂತಹ ದಿನಗಳಲ್ಲಿ ನೌಕರರ ಸಂಘದಿಂದ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಿಂದ ಒಂದು ಚಿರತೆ ದತ್ತು ಪಡೆಯಲಾಗಿತ್ತು. ಸರ್ಕಾರದ ಕೋರಿಕೆಯಂತೆ ಈ ಹಿಂದೆ ಅನೇಕ ಸೆಲೆಬ್ರಿಟಿಗಳು, ಚಿತ್ರ ನಟರು, ಕ್ರೀಡಾಪಟುಗಳು ಮೃಗಾಲಯದ ಪ್ರಾಣಿಗಳನ್ನು ನಿಯಮಾನುಸಾರ ಶುಲ್ಕ ಪಾವತಿಸಿ, ನಿಗದಿಪಡಿಸಿದ ಅವಧಿಗೆ ದತ್ತು ಪಡೆದಿದ್ದರು ಎಂದು ತಿಳಿಸಿದ್ದಾರೆ.
    ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಘಕ್ಕೆ ಮಾಡಿಕೊಂಡ ಮನವಿಯಂತೆ ಪುಣ್ಯಕೋಟಿ ಯೋಜನೆ ಅನುಷ್ಠಾನಕ್ಕಾಗಿ 100 ಕೋಟಿ ರೂ.ಗಳನ್ನು ನೌಕರರ ವೃಂದ ಸಂಘಗಳ ಪದಾಧಿಕಾರಿಗಳ ವೇತನದಲ್ಲಿ ಕಟಾವಣೆಗೊಳಿಸಲಾಗಿದೆ. ಇದೀಗ ದತ್ತು ಪಡೆಯುವ ಮೂಲಕ ವನ್ಯ ಮೃಗಗಳಿಗೂ ನೆರವಿನ ಹಸ್ತಚಾಚಿದೆ. ನೌಕರರ ಅನೇಕ ಬೇಕು ಬೇಡಗಳ ನಡುವೆ ಸಂಘವು ಎಂದಿನಂತೆ ಸಾಮಾಜಿಕ ಕಳಕಳಿ ಮೆರೆದಿದೆ. ಸಂಘದ ಈ ನಿರ್ಣಯದ ಬಗ್ಗೆ ಅನೇಕ ನೌಕರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು. ಸಂಘದ ಉಪಾಧ್ಯಕ್ಷ ಆರ್.ಮೋಹನ್‌ಕುಮಾರ್ ಸೇರಿದಂತೆ ರಾಜ್ಯ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts