More

    ಸರ್ಕಾರಿ ಅಧಿಕಾರಿ ಸೇರಿ ಇಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಸೈಬರ್ ಖದೀಮರು

    ಹಾವೇರಿ: ಆನ್‌ಲೈನ್ ಡ್ರೆಡಿಂಗ್‌ನಲ್ಲಿ ನೀವು ಹೂಡಿಕೆ ಮಾಡಿದ ಪ್ರತಿ ಟ್ರೇಡ್ ಹಣಕ್ಕೆ ಶೇ. 5ರಿಂದ 6ರಷ್ಟು ಬಡ್ಡಿ ಕೊಡುವುದಾಗಿ ನಂಬಿಸಿದ ಆನ್‌ಲೈನ್ ವಂಚಕರು ಶಿಗ್ಗಾಂವಿ ತಾಪಂ ಪ್ರಭಾರ ಸಹಾಯಕ ನಿರ್ದೇಶಕ ಸೇರಿ ಇಬ್ಬರು ವ್ಯಕ್ತಿಗಳಿಗೆ ಲಕ್ಷಾಂತರ ರೂ. ವಂಚಿಸಿದ ಕುರಿತು ಇಲ್ಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿವೆ.
    ಶಿಗ್ಗಾಂವಿ ತಾಲೂಕಿನ ಅತ್ತಿಗೇರಿ ಗ್ರಾಪಂ ಪಿಡಿಒ ಹಾಗೂ ತಾಪಂ ಸಹಾಯಕ ನಿರ್ದೇಶಕ ನೃಪತಿ ಬಸಪ್ಪ ಭೂಸರೆಡ್ಡಿ (44) ಹಾಗೂ ಇಲ್ಲಿಯ ಬಸವೇಶ್ವರ ನಗರದ ವಿನಯ ಮಲ್ಲೇಶಪ್ಪ ಬೈರಮ್ಮನವರ (37) ಮೋಸ ಹೋದವರು.
    ನೃಪತಿ ಅವರಿಗೆ ಕಾಲ್ ಮಾಡಿದ ಅಪರಿಚಿತ ವ್ಯಕ್ತಿ ಹಾರ್ಬೋರ್ ವೆಸ್ಟ್ ಕಂಪನಿಯಿಂದ ಆನ್‌ಲೈನ್ ಟ್ರೆಡಿಂಗ್ ಮಾಡಲು ಹೂಡಿಕೆ ಮಾಡಿದರೆ ಪ್ರತಿ ಟ್ರೇಡ್‌ಗೆ ಶೇ. 5ರಿಂದ 6ರಷ್ಟು ಲಾಭಾಂಶ ನೀಡಲಾಗುವುದು ಎಂದು ನಂಬಿಸಿದ್ದಾನೆ. ನಂತರ ನೃಪತಿ ತನ್ನ ಖಾತೆಯಿಂದ 11.10 ಲಕ್ಷ ರೂ. ಹಾಗೂ ಪತ್ನಿ ಖಾತೆಯಿಂದ 1 ಲಕ್ಷ ರೂ., ಸ್ನೇಹಿತ ಮಂಜುನಾಥ ಎಂಬುವನ ಖಾತೆಯಿಂದ 3.76 ಲಕ್ಷ ರೂ. ಸೇರಿ ಒಟ್ಟು 15.86 ಲಕ್ಷ ರೂ. ಹಾಕಿಸಿಕೊಂಡಿದ್ದಾನೆ. ನಂತರ ಲಾಭಾಂಶ ಎಂದು 4.99 ಲಕ್ಷ ರೂ. ವಾಪಸ್ ಹಾಕಿ ಉಳಿದ ಹಣ ಕೊಡದೆ ಮೋಸ ಮಾಡಿದ್ದಾರೆ ಎನ್ನಲಾಗಿದೆ.
    ಇನ್ನೊಂದು ಪ್ರಕರಣದಲ್ಲಿ ವಿನಯ ಎಂಬುವರಿಗೆ ಅಪರಿಚಿತ ವ್ಯಕ್ತಿ ಫೋನ್ ಮಾಡಿ ವಿಕಿಂಗ್ ಗ್ಲೋಬಲ್ ಇನ್ವೆಸ್ಟರ್ ಕಂಪನಿಯ ಮುಖ್ಯಸ್ಥನಾಗಿದ್ದು, ನಮ್ಮಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡಲಾಗುವುದು ಎಂದು ನಂಬಿಸಿ 15.89 ಲಕ್ಷ ರೂ. ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಅದರಲ್ಲಿ 7.82 ಲಕ್ಷ ರೂ. ಟ್ರೆಡಿಂಗ್‌ನ ಮೊತ್ತ ಎಂದು ವಾಪಸ್ ನೀಡಿ ಉಳಿದ 8.7 ಲಕ್ಷ ರೂ. ಕೊಡದೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts