More

    ದಲಿತರ ಮನೆಯಲ್ಲಿ ಸಿಎಂ ಉಪಹಾರಕ್ಕೆ ಸಿದ್ಧತೆ

    ಹೊಸಪೇಟೆ: ತಾಲೂಕಿನ ಕಮಲಾಪುರ ಗ್ರಾಮದ ದಲಿತರ ಮನೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಉಪಹಾರ ಸೇವಿಸಲಿದ್ದು, ಅಡುಗೆ ಸಿದ್ಧತೆ ಜೋರಾಗಿದೆ.
    ಗ್ರಾಮದ ಅಂಬೇಡ್ಕರ್ ನಗರದ ದುರ್ಗಮ್ಮ ಗುಡಿ ಪಕ್ಕದ ಹಿರಾಳ ಕೊಲ್ಲಾರಪ್ಪ ಎಂಬುವವರ ಮನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಮೆಸ್.ಯಡಿಯೂರಪ್ಪ, ಸಚಿವ ಆನಂದ ಸಿಂಗ್ ಮತ್ತಿತರರು ಬೆಳಗಿನ ಉಪಹಾರ ಸೇವಿಸಲಿದ್ದಾರೆ.
    ಗಣ್ಯರ ಆಗಮನದ ಹಿನ್ನೆಲೆಯಲ್ಲಿ ಮನೆಯಲ್ಲಿ‌ಸಂಭ್ರಮ‌ ಮನೆ ಮಾಡಿದೆ. ಕೊಲ್ಲಾರಪ್ಪ ಅವರ ಪುತ್ರಿಯರಾದ ರೇಣುಕಾ ಮತ್ತು ಹುಲಿಗೆಮ್ಮ ಅಡುಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕೇಸರಿ ಬಾತ್, ಮಂಡಕ್ಕಿ ವಗ್ಗರಣೆ, ಮಿರ್ಚಿ, ಉಪ್ಪಿಟ್ಟು‌‌ ಹಾಗೂ ಚಹ ಸಿದ್ಧಪಡಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts