More

    ವೆಹಿಕಲ್​ ಫಿಟ್​ನೆಸ್ ಸರ್ಟಿಫಿಕೇಟ್ ತಗೊಳ್ಳೋಕೆ ಇನ್ನು ಪರದಾಡಬೇಕಾಗಿಲ್ಲ !

    ಬೆಂಗಳೂರು: ವಾಹನಗಳ ಫಿಟ್​ನೆಸ್​ ಸರ್ಟಿಫಿಕೇಟ್​ ತಗೊಳ್ಳೋದಕ್ಕೆ, ವಾಹನಗಳ ಮಾಲೀಕತ್ವ ವರ್ಗಾವಣೆ, ಸರಕು ಸಾಗಣೆ ರಹದಾರಿ ಮುಂತಾದ ಸೇವೆಗಳನ್ನು ಪಡೆಯೋದಕ್ಕೆ ಇನ್ನು ಹತ್ತಾರು ಬಾರಿ ಸಾರಿಗೆ ಇಲಾಖೆ ಕಚೇರಿ ಎಡತಾಕಬೇಕಾಗಿಲ್ಲ.

    ಸಾರಿಗೆ ಇಲಾಖೆ 3 ಸೇವೆಗಳು ಆನ್‌ಲೈನ್‌ನಲ್ಲಿ ಅನುಷ್ಠಾನ 
    ಭೌತಿಕ ಸಂಪರ್ಕ ಇಲ್ಲ, ಆನ್‌ಲೈನ್ ಕಡ್ಡಾಯ

    ವಾಹನಗಳ ಮಾಲೀಕತ್ವ ವರ್ಗಾವಣೆ, ಸರಕು ಸಾಗಾಣೆ ರಹದಾರಿ, ವಾಹನಗಳ ಅರ್ಹತಾ ಪ್ರಮಾಣ ಪತ್ರ ಸೇವೆಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಲು ಹಾಗೂ ಕಾರ್ಯಗತಗೊಳಿಸಲು ಸರ್ಕಾರ ಸಾರಿಗೆ ಇಲಾಖೆಗೆ ಸೂಚಿಸಿದೆ. ರಾಜ್ಯದಲ್ಲಿ ವ್ಯಾಪಾರ ಸರಳೀಕರಣ ಮತ್ತು ವ್ಯವಹಾರ ಸ್ನೇಹಿ ವ್ಯವಸ್ಥೆ ಕಲ್ಪಿಸುವ ಸಂಬಂಧ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ ಅಧಿಸೂಚಿತ ಸಕಾಲ ಸೇವೆಗಳನ್ನು ಆನ್‌ಲೈನ್ ಮೂಲವಾಗಿ ನಿರ್ವಹಿಸುವಂತೆ ತಿಳಿಸಲಾಗಿದೆ.

    ಇದನ್ನೂ ಓದಿ: ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಮೇಲಿನ ಜಲಪ್ರಹಾರ ಸಮರ್ಥಿಸಿದ ಸರ್ಕಾರ: 89 ಜನರ ಬಂಧನ

    ಈ ಮೂರು ಸೇವೆಗಳ ಅನುಷ್ಠಾನಕ್ಕೆ ಯಾವುದೇ ಭೌತಿಕ ಸಂಪರ್ಕವಿಲ್ಲದೆ, ಕಡ್ಡಾಯವಾಗಿ ಆನ್‌ಲೈನ್ ವಿಧಾನದ ಮುಖಾಂತರ ಅರ್ಜಿಗಳನ್ನು ಸ್ವೀಕರಿಸುವುದು ಮತ್ತು ಕಾರ್ಯಗತಗೊಳಿಸುವುದು ಹಾಗೂ ಸೇವಾಸಿಂಧು ಪೋರ್ಟಲ್ ಮುಖಾಂತರ ನಿರ್ವಹಿಸುವಂತೆ ಆದೇಶಿಸಲಾಗಿದೆ.

    ನಾಡಬಾಂಬ್ ಎಸೆದ್ರು ನಮ್ಮ ರ‍್ಯಾಲಿ ಮೇಲೆ, ಟಿಎಂಸಿಯ ಗೂಂಡಾಗಳದ್ದೇ ಕೆಲ್ಸ ಇದು- ತೇಜಸ್ವಿಸೂರ್ಯ ಗಂಭೀರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts