More

    ತರಕಾರಿ ಹಾಗೂ ಹಣ್ಣಿನ ರೂಪದಲ್ಲಿ ಲಂಚ ಪಡೆಯುತ್ತಿದ್ದ 6 ಆರ್​ಟಿಒ ಅಧಿಕಾರಿಗಳು ಅಮಾನತು

    ಪಲಕ್ಕಾಡ್​: ಕೇರಳದ ವಾಲಯರ್​ ಅಂತಾರಾಜ್ಯ ಚೆಕ್​ಪೋಸ್ಟ್​ ಬಳಿ ತರಕಾರಿ ಮತ್ತು ಹಣ್ಣಿನ ರೂಪದಲ್ಲಿ ಲಂಚ ಪಡೆಯುತ್ತಿದ್ದ ಮೋಟಾರು ವಾಹನ ಇಲಾಖೆಯ ಆರು ಅಧಿಕಾರಿಗಳನ್ನು ಅಮಾನತು ಮಾಡಿ ಕೇರಳ ಸರ್ಕಾರ ಆದೇಶ ಹೊರಡಿಸಿದೆ.

    ಕೇರಳದ ಆರ್​ಟಿಒ ಅಧಿಕಾರಿಗಳ ವಿನೂತನ ಲಂಚ ಪ್ರಕರಣ ಇದಾಗಿದೆ. ವಾಲಯರ್​ನ ಆರ್​ಟಿಒ ಚೆಕ್​ ಪೋಸ್ಟ್​ ಮೇಲೆ ಕೇರಳ ವಿಜಿಲೆನ್ಸ್​ ಅಧಿಕಾರಿಗಳು ದಾಳಿ ಮಾಡಿದಾಗ ಆರ್​ಟಿಒ ಅಧಿಕಾರಿಗಳು ತರಕಾರಿ ಮತ್ತು ಹಣ್ಣಿನ ರೂಪದಲ್ಲಿ ಲಂಚ ತೆಗೆದುಕೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಹಣದ ಬದಲಾಗಿ ಕುಂಬಳಕಾಯಿ ಮತ್ತು ಕಿತ್ತಳೆ ಹಣ್ಣು ಸೇರಿದಂತೆ ಇತರೆ ರೂಪದಲ್ಲಿ ಲಂಚ ಪಡೆಯುತ್ತಿದ್ದರು. ದಾಳಿಯ ವೇಳೆ 67 ಸಾವಿರ ನಗದನ್ನು ವಶಕ್ಕೆ ಪಡೆಯಲಾಗಿತ್ತು.

    ಬರುತ್ತಿದ್ದ ಲಾರಿಗಳನ್ನು ತಡೆದು ಅದರಲ್ಲಿ ಇರುತ್ತಿದ್ದ ವಸ್ತುಗಳನ್ನು ಲಂಚವಾಗಿ ಪಡೆದುಕೊಂಡು ಆರ್​ಟಿಒ ಅಧಿಕಾರಿಗಳು ಹಂಚಿಕೊಳ್ಳುತ್ತಿದ್ದರು. ದಾಳಿಯ ವೇಳೆ ಸಹಾಯಕ ಮೋಟಾರು ವಾಹನ ಇನ್ಸ್​ಪೆಕ್ಟರ್​ ಅರಣ್ಯದೊಳಗೆ ತಪ್ಪಿಸಿಕೊಂಡಿದ್ದರು. ಅಲ್ಲದೆ, ಅರಣ್ಯದಲ್ಲಿ ಸಿಗುವ ಎಲೆಗಳಿಂದ ಲಂಚವನ್ನು ಮುಚ್ಚಿಟ್ಟಿರುವ ಸಂಗತಿಯು ತಿಳಿದುಬಂದಿದೆ. ಇದೀಗ ಈ ಪ್ರಕರಣರದಲ್ಲಿ ಭಾಗಿಯಾದ ಎಲ್ಲ ಅಧಿಕಾರಿಗಳನ್ನು ಕೇರಳ ಸರ್ಕಾರ ಅಮಾನತು ಮಾಡಿದೆ. (ಏಜೆನ್ಸೀಸ್​)

    ಹೆಣ್ಣು ಮಗು ಆಗುತ್ತದೆ ಎಂಬ ಭಯದಲ್ಲೇ ಹೆರಿಗೆ ಹಿಂದಿನ ದಿನ ಆತ್ಮಹತ್ಯೆಗೆ ಶರಣಾದ ಗರ್ಭಿಣಿ

    ಶ್ರೀವಲ್ಲಿ ಈಗ ಮುಟ್ಟಿದ್ದೆಲ್ಲ ಚಿನ್ನ, ಪುಷ್ಪ-2ಗೆ ರಶ್ಮಿಕಾ ಇಟ್ಟ ಡಿಮಾಂಡ್​ ಕೇಳಿದ್ರೆ ದಂಗಾಗ್ತೀರಾ!

    VIDEO: ಮಂಡ್ಯದಲ್ಲೊಂದು ಅಮಾನವೀಯ ಘಟನೆ- ಎಲ್ಲರೆದುರು ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿ ಕೂಡಿಹಾಕಿ ಥಳಿಸಿದ ಶಿಕ್ಷಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts