More

    ಗುಟ್ಖಾ ಖರೀದಿಸಲು ಮೂರು ಗಂಟೆ ಕ್ಯೂ ನಿಂತ ಜನ!: ಮಾಸ್ಕೂ ಇಲ್ಲ, ಡಿಸ್ಟನ್ಸೂ ಇಲ್ಲ!!

    ಮಾನ್ವಿ: ಲಾಕ್‌ಡೌನ್ ಜಾರಿಯಿಂದಾಗಿ 40 ದಿನಗಳವರೆಗೆ ಇವರೆಲ್ಲ ಗುಟ್ಖಾ ಇಲ್ಲದೆ ಇದ್ದಿದ್ದೇ ದೊಡ್ಡದು. ಈಗ ಗುಟ್ಖಾ ಮಾರಾಟ ಆರಂಭವಾಗುತ್ತಿದ್ದಂತೆಯೇ ಇವರೆಲ್ಲರ ಬಾಯಲ್ಲಿ ನೀರೂರುತ್ತಿದೆ.

    ಲಾಕ್‌ಡೌನ್ ಸಡಿಲಗೊಂಡ ಬಳಿಕ ಗುಟ್ಖಾ ಮಾರಾಟ ಅರಂಭವಾಗುತ್ತಿದ್ದಂತೆಯೇ ಮಾನ್ವಿ ನಗರದಲ್ಲಿ ಶುಕ್ರವಾರ ಅಂಗಡಿಗಳ ಮುಂದೆ ಅತ್ಯಂತ ಉದ್ದನೆಯ ಕ್ಯೂ ಕಂಡುಬಂತು. ಕ್ಯೂ ಎಷ್ಟು ಉದ್ದ ಇತ್ತೆಂದರೆ ರೇಷನ್‌ಗಾಗಿ ಅಥವಾ ಮದ್ಯಕ್ಕಾಗಿಯೂ ಇಷ್ಟು ಉದ್ದನೆ ಸರತಿ ಸಾಲು ಎಲ್ಲಿಯೂ ಕಂಡುಬಂದಿರಲಿಲ್ಲ.

    ಇದನ್ನೂ ಓದಿ ಮಾನಸ ಸರೋವರ ಯಾತ್ರೆಯ ಮಾರ್ಗ ಬದಲು: ಇನ್ನು ಒಂದೇ ವಾರದಲ್ಲಿ ತಲುಪಬಹುದು ಗಮ್ಯ!

    ಸುಮಾರು ಮೂರು ತಾಸಿಗೂ ಹೆಚ್ಚು ಸಮಯ ಸಾಲಾಗಿ ನಿಂತು ಜನರು ಗುಟ್ಖಾ ಖರೀದಿಸಿದರು. ಗುಟ್ಖಾ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದರಿಂದ ಗುಟ್ಖಾ ಪ್ರಿಯರು ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರು ಹೋಲ್‌ಸೇಲ್ ಅಂಗಡಿಗಳ ಮುಂದೆಯೂ ಸರದಿಯಲ್ಲಿ ಗುಟ್ಖಾ ಖರೀದಿಸಿದ್ದು ವಿಶೇಷ.

    ಲಾಕ್‌ಡೌನ್ ವೇಳೆ ಕಾಳಸಂತೆಯಲ್ಲಿ ಐದು ರೂ.ಯಿಂದ 15 ರೂ.ವರೆಗೆ ಹೆಚ್ಚು ಹಣ ಕೊಟ್ಟು ಖರೀದಿಸಿದ್ದ ಜನರು, ಹೋಲ್‌ಸೇಲ್‌ನಲ್ಲಿ ಸಿಗುತ್ತಿದ್ದಂತೆ ಮಾಸ್ಕ್ ಧರಿಸದೆ, ದೈಹಿಕ ಅಂತರವನ್ನೂ ಕಾಯ್ದುಕೊಳ್ಳದೆ ಸಾಲುಗಟ್ಟಿ ನಿಂತಿದ್ದು ಕಂಡುಬಂತು.

    ದೇವಸ್ಥಾನದಲ್ಲಿ ಮದುವೆ ಮುಗಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿತು ಆ ಜೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts