More

    ಛತ್ರಪತಿ ಶಿವಾಜಿ ಪ್ರತಿಮೆ ಅಪವಿತ್ರಗೊಳಿಸಿದ ಮೂವರ ಬಂಧನ!

    ಗೋವಾ: ರಾಜ್ಯದ ಮಾಪುಸಾ ಪಟ್ಟಣದ ಬಳಿ ಛತ್ರಪತಿ ಶಿವಾಜಿ ಪ್ರತಿಮೆಯನ್ನು ಅವಮಾನಿಸಿದ ಆರೋಪದ ಮೇಲೆ ಮಂಗಳವಾರ (ಆಗಸ್ಟ್​ 15) ಗೋವಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

    ಇದನ್ನೂ ಓದಿ: ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಅಡ್ವಾನ್ಸ್ಡ್ ನ್ಯೂರೋ ರೇಡಿಯಾಲಜಿ ಸೆಂಟರ್ ಆರಂಭ

    ನಿಗೆಸ್ಲ್ ಜೋಕ್ವಿಮ್ ಫೊನ್ಸೆಕಾ, ಅಲೆಕ್ಸ್ ಫೆರ್ನಾಂಡಿಸ್ ಮತ್ತು ಲಾರೆನ್ಸ್ ಮೆಂಡಿಸ್ ಎಂಬ ಮೂವರನ್ನು ಇದೀಗ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (DYSP) ಜಿವ್ಬಾ ದಾಲ್ವಿ ಮಾಹಿತಿ ನೀಡಿದ್ದಾರೆ. ಛತ್ರಪತಿ ಶಿವಾಜಿಯ ಪ್ರತಿಮೆಯನ್ನು ಮೂವರು ಅಪವಿತ್ರಗೊಳಿಸಿದ್ದಾರೆ. ಶೀಘ್ರವೇ ಅವರನ್ನು ಬಂಧಿಸುವಂತೆ ಒತ್ತಾಯಿಸಿ ನೂರಾರು ಜನರು ಮಾಪುಸಾ ಪೊಲೀಸ್ ಠಾಣೆಯ ಹೊರಗೆ ಸೋಮವಾರ ರಾತ್ರಿ ಜಮಾಯಿಸಿದ್ದರು ಎಂದು ಹೇಳಲಾಗಿದೆ.

    ಭಾನುವಾರ (ಆಗಸ್ಟ್​ 13) ರಾತ್ರಿ ಅಪವಿತ್ರಗೊಳಿಸಲಾಗಿದೆ ಎನ್ನಲಾದ ಪ್ರತಿಮೆಯನ್ನು ಸೋಮವಾರ ಸಂಜೆ ರಾಜ್ಯ ಸಮಾಜ ಕಲ್ಯಾಣ ಸಚಿವ ಸುಭಾಷ್ ಫಾಲ್ ದೇಸಾಯಿ ಅವರ ಸಮ್ಮುಖದಲ್ಲಿ ಮತ್ತೊಂದು ಪ್ರತಿಮೆಯನ್ನು ಸ್ಥಾಪಿಸಲಾಯಿತು. ಮೂವರು ಆರೋಪಿಗಳನ್ನು ನ್ಯಾಯಾಲಯ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ಡಿವೈಎಸ್ಪಿ ದಳವಿ ತಿಳಿಸಿದ್ದಾರೆ.

    ಇದನ್ನೂ ಓದಿ: ಸ್ವಾತಂತ್ರ್ಯೋತ್ಸವ ಪದಬಂಧ ಸ್ಪರ್ಧೆ; ಹತ್ತು ವಿಜೇತರಿಗೆ ನಗದು ಬಹುಮಾನ

    ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295-ಎ (ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವುದು), 153-ಎ (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 427-ಎ (ದುಷ್ಕೃತ್ಯ ಎಸಗುವುದು ಮತ್ತು ನಷ್ಟ ಉಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ,(ಏಜೆನ್ಸೀಸ್).

    ಬಾಕ್ಸ್​ ಆಫೀಸ್​ನಲ್ಲಿ ಘರ್ಜಿಸಿದ ‘ಗದರ್​ 2’; ಒಟ್ಟು ಕಲೆಕ್ಷನ್​ ಎಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts