More

    ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಅಡ್ವಾನ್ಸ್ಡ್ ನ್ಯೂರೋ ರೇಡಿಯಾಲಜಿ ಸೆಂಟರ್ ಆರಂಭ

    ಮಂಗಳೂರು: ರಾಜ್ಯದಲ್ಲೇ ಹೆಸರುವಾಸಿಯಾದ ನರರೋಗ ಚಿಕಿತ್ಸೆಗೆ ಮೀಸಲಾದ ಮಂಗಳೂರಿನ ಫಸ್ಟ್ ನ್ಯೂರೋ ಬ್ರೈನ್ ಮತ್ತು ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಿಮೆನ್ಸ್ ಮ್ಯಾಗ್ನಟೋಮ್ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಒಳಗೊಂಡ ಬಯೋಮೆಟ್ರಿಕ್ಸ್ ಟೆಕ್ನಾಲಜಿ ಎಂಆರ್‌ಐ (SIEMENS Magnetom Amira AI Enabled Biometrix Technology MRI System) ಸೌಲಭ್ಯಕ್ಕೆ ಮಂಗಳವಾರ ಅದ್ದೂರಿಯ ಚಾಲನೆ ದೊರೆಯಿತು.

    ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿ ಮಾತನಾಡಿ, ಡ್ವಾನ್ಸ್ಡ್ ನ್ಯೂರೋ ರೇಡಿಯಾಲಜಿ ಸೆಂಟರ್ ಆರಂಭ ನರರೋಗ ಶಾಸ್ತ್ರಜ್ಞರಿಗೆ ಅತ್ಯುನ್ನತ ಗುಣಮಟ್ಟದ ಮಿದುಳಿನ ಚಿತ್ರಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಈ ವಿವರವಾದ ಚಿತ್ರಗಳು ರೋಗಿಯ ಸ್ಥಿತಿಯ ಬಗ್ಗೆ ನಿರ್ಣಾಯಕ ಚಿಕಿತ್ಸಾ ತೀರ್ಮಾನ ತೆಗೆದುಕೊಳ್ಳಲು ನೆರವಾಗಲಿದೆ. ಕರ್ನಾಟಕದ ಖಾಸಗಿ ವಲಯದಲ್ಲಿ ಬ್ರೈನ್ ಮತ್ತು ಸ್ಪೈನ್‌ಗೆ ಸಂಬಂಧಿಸಿದ್ದಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇರುವುದು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆ ಮಾತ್ರ. ಬ್ರೈನ್ ಮತ್ತು ಸ್ಪೈನ್‌ಗೆ ಸಂಬಂಧಿಸಿದ ಸರ್ಜರಿಗಳು ತುರ್ತು ಹಾಗೂ ಅತೀ ಸೂಕ್ಷ್ಮ ವಾಗಿ ನಡೆಯುವುದರಿಂದ ರೋಗಿಯ ಚಿಕಿತ್ಸೆಗೆ ತುಂಬಾ ಒತ್ತಡ ಇರುತ್ತದೆ. ಈಭಾಗದ ಎಷ್ಟೋ ಜನರ ಜೀವ ಉಳಿಸಿದ ಕೀರ್ತಿ ಫಸ್ಟ್ ನ್ಯೂರೋ ಆಸ್ಪತ್ರೆಗೆ ಸಲ್ಲುತ್ತದೆ. ಬ್ರೈನ್ ಮತ್ತು ಸ್ಪೈನ್‌ಗೆ ಸಂಬಂಧಿಸಿದ ಅತೀ ಸೂಕ್ಷ್ಮ ಚಿಕಿತ್ಸೆಗೆ ಫಸ್ಟ್ ನ್ಯೂರೋ ಆಸ್ಪತ್ರೆಯು ವೇಗವಾಗಿ ಜನರಿಗೆ ಸಿಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ ಎಂದರು.

    ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಆರೋಗ್ಯ ಸೇವಾ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುತ್ತಿರುವ ಫಸ್ಟ್ ನ್ಯೂರೋ ಆಸ್ಪತ್ರೆಯ ಸೇವಾಕೈಂಕರ್ಯಗಳು ವೇಗವಾಗಿ ಜನರಿಗೆ ತಲುಪುತ್ತಿದೆ. ರಾಜ್ಯದ 10ಕ್ಕೂ ಅಧಿಕ ಜಿಲ್ಲೆಗಳ ಹಳ್ಳಿಗೆ ಫಸ್ಟ್ ನ್ಯೂರೋ ಆಸ್ಪತ್ರೆಯ ತಂಡ ಭೇಟಿ ನೀಡಿ ಬ್ರೈನ್ ಮತ್ತು ಸ್ಪೈನ್‌ಗೆ ಸಂಬಂಧಿಸಿದ ಚಿಕಿತ್ಸೆ ಬಗ್ಗೆ ಮಾಹಿತಿ ನೀಡುವುದು ಉತ್ತಮ ಕಾರ್ಯ. ಬಯೋಮೆಟ್ರಿಕ್ಸ್ ಟೆಕ್ನಾಲಜಿ ಎಂಆರ್‌ಐ, ಅಡ್ವಾನ್ಸ್ಡ್ ನ್ಯೂರೋ ರೇಡಿಯಾಲಜಿ ಸೆಂಟರ್ ಸೌಲಭ್ಯ ಹೊಂದಿರುವ ದೇಶದ ಎರಡನೇ ಆಸ್ಪತ್ರೆ ಎಂಬ ಖ್ಯಾತಿಗೆ ಮಂಗಳೂರಿನ ಫಸ್ಟ್ ನ್ಯೂರೋ ಪಾತ್ರವಾಗಿದೆ ಎಂದರು.

    ಫಸ್ಟ್ ನ್ಯೂರೋ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ರಾಜೇಶ್ ಶೆಟ್ಟಿ, ನಿರ್ದೇಶಕರಾದ ರೋಶ್ನಿ ರಾಜೇಶ್ ಶೆಟ್ಟಿ, ರಾಮಚಂದ್ರ ಶೆಟ್ಟಿ, ಆಡಳಿತಾಧಿಕಾರಿ ರಂಜಿತ್ ಶೆಟ್ಟಿ, ಕಾರ್ಪೊರೇಟರ್ ಚಂದ್ರಾವತಿ, ವಿನಯರಾಜ್, ಶಶಿಧರ್ ಹೆಗ್ದೆ, ಮಾಜಿ ಸಚಿವ ಬಿ. ರಮಾನಾಥ ರೈ, ಪ್ರಮುಖರಾದ ಯುಟಿ ಇಪ್ತಿಕಾರ್ ಅಲಿ, ಮಮತಾಗಟ್ಟಿ ಸೇರಿದಂತೆ ಹಲವರು ಇದ್ದರು.

    ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಚಿಕಿತ್ಸೆ

    ನರವಿಜ್ಞಾನಗಳಿಗೆ ಮೀಸಲಾದ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮಿದುಳು ಮತ್ತು ಬೆನ್ನುಮೂಳೆಯ ಸಂಬಂಧಿತ ಸಮಸ್ಯೆಗಳಿಗೆ ವಿಶೇಷವಾಗಿ ಚಿಕಿತ್ಸೆ ನೀಡುವ ವೃತ್ತಿಪರ ತಂಡವು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಮತ್ತು ಗುಣಮಟ್ಟದ ಸೇವೆ ನೀಡುತ್ತಿದೆ. ರೋಗಿಗಳಿಗೆ ಅತ್ಯುತ್ತಮ ಸೇವೆ ನೀಡಬೇಕು ಎಂಬ ಉದ್ದೇಶದಿಂದ ಅತ್ಯಾಧುನಿಕ ಸೌಲಭ್ಯ ಅಳವಡಿಸಿಕೊಂಡು, ಆ ಮೂಲಕ ರೋಗ ನಿರ್ಣಯ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಕೀರ್ಣ ನರವೈಜ್ಞಾನಿಕ ರೋಗನಿರ್ಣಯ ಮತ್ತು ಅವುಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯವನ್ನು ಆಸ್ಪತ್ರೆ ಹೊಂದಿದೆ. ವಿಕಿರಣಶಾಸ್ತ್ರ ಮತ್ತು ನರವಿಜ್ಞಾನದ ಪರಿಣತಿಯನ್ನು ಸಂಯೋಜನೆಯೊಂದಿಗೆ, ಸುಧಾರಿತ ಇಮೇಜಿಂಗ್ ತಂತ್ರಜ್ಞಾನ, ನರವೈಜ್ಞಾನಿಕ ಅಸ್ವಸ್ಥತೆಗಳಿಗೆ ನಿಖರ, ಉದ್ದೇಶಿತ ಚಿಕಿತ್ಸೆ ನೀಡುವ ಇಂಟರ್‌ವೆನ್ಷನಲ್ ನ್ಯೂರೋ ರೆಡಿಯಾಲಜಿ ಘಟಕ ಹೊಂದಿದೆ. ಅತ್ಯಾಧುನಿಕ ಎಂಆರ್‌ಐ ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts