More

    ಬಸವಣ್ಣ ವಿಶ್ವ ಸಾಂಸತಿಕ ನಾಯಕ

    ಕೊಪ್ಪಳ: ಬಸವಣ್ಣ ರಾಜ್ಯದ ಸಾಂಸತಿಕ ನಾಯಕ ಎಂದು ಘೋಷಿಸಲಾಗಿದೆ. ಅವರು ದೇಶ, ವಿಶ್ವದ ಸಾಂಸತಿಕ ನಾಯಕನಾಗುವ ಕಾಲ ದೂರವಿಲ್ಲ ಎಂದು ಭದ್ರಾವತಿಯ ಗಂಗಾಂಬಿಕೆ ಬಸವರಾಜ ಅಭಿಪ್ರಾಯಪಟ್ಟರು.

    ನಗದ ಗವಿಮಠ ಆವರಣದಲ್ಲಿ ಬಸವ ಜಯಂತಿ ಅಂಗವಾಗಿ ಬಸವ ಸಮಿತಿಯಿಂದ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಬಸವ ಮಾರ್ಗ ಸಕಾಲಿಕ. ಲಂಡನ್​ ವಿವಿಯಲ್ಲಿ 18ನೇ ಶತಮಾನದಲ್ಲಿ ಮಹಿಳಾ ಶಿಕ್ಷಣಕ್ಕೆ ಆದ್ಯತೆ ದೊರೆಯಿತು. ಆದರೆ, ಬಸವಣ್ಣ 12ನೇ ಶತಮಾನದಲ್ಲಿ ಮಹಿಳಾ ಶಿಕ್ಷಣ ಪ್ರತಿಪಾದಿಸಿದರು. ಜಗತ್ತಿನ ಎಲ್ಲ ಸಾಹಿತ್ಯಗಳಿಗಿಂದ ವಚನ ಸಾಹಿತ್ಯ ಶ್ರೇಷ್ಠ. ಲಿಂಗದಿಂದಲೇ ಜೀವನವೇ ಬದಲಾಯತು. ಬಸವಣ್ಣನ ದೆಸೆಯಿಂದ ಪಣ್ಯಾಂಗನೆಯರೆಲ್ಲ ಪುಣ್ಯಾಂಗನೆಯರಾದರು. ಕಾಯಕ, ಧರ್ಮ, ವಚನ ಚಳವಳಿ ಸೃಷ್ಟಿಯಾಯಿತು. ವಚನ ಸಾಹಿತ್ಯದ ಅರಿವು ಮಕ್ಕಳಿಗೆ ನೀಡಿ. ನಿತ್ಯ ಮನೆಯಲ್ಲಿ ವಚನಗಳ ಪಠಣವಾಗಬೇಕು ಎಂದರು.

    ಸಿದ್ದ ಕಬೀರ ಸ್ವಾಮಿ ಮಾತನಾಡಿ, ಬಸವಣ್ಣನ ದಾರಿ ಮನುಷ್ಯತ್ವದ ದಾರಿ. ಫ.ಗು.ಹಳಕಟ್ಟಿಯವರು ತಮ್ಮ ಆಸ್ತಿ ಮಾರಿ ವಚನಗಳನ್ನು ಮುದ್ರಿಸಿದರು. ಕಷ್ಟ ಪಟ್ಟು ಸಂಗ್ರಹಿಸಿದ ವಚನಗಳು ಕನ್ನಡದ ಆಸ್ತಿಯಾಗಿವೆ. ಮನ ಪರಿವರ್ತನೆಯಾಗುವವರೆಗೆ ಬಸವಣ್ಣ ನಮಗೆ ನಿಲುಕುವುದಿಲ್ಲ. ಎಲ್ಲ ಶರಣರು ಬಸವಣ್ಣನನ್ನು ಗುರುವಾಗಿ ಕಂಡರೆ, ಬಸವಣ್ಣ ಶರಣರನ್ನು ಗುರುವಾಗಿ ಕಂಡರು. ಅರಸರು, ರಾಣಿಯರ ಹಾದಿಯಾಗಿ ಎಲ್ಲರೂ ಕಾಯಕ ಜೀವಿಗಳಾಗಿ ಬದಲಾಗುವಂತೆ ಮಾಡಿದ್ದ ಬಸವಣ್ಣನವರ ಕ್ರಾಂತಿಕಾರಿ ನಡೆ ಎಂದರು.

    ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಬಸವ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಕೊಪ್ಪಳ ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಹೋಟೆಲ್​ ಕೆಲಸಗಾರ ರಾಮಣ್ಣ ಸೀಗಿನಳ್ಳಿ, ಪೌರ ಕಾರ್ಮಿಕಳಾದ ಗಾಳೆಮ್ಮ ಕಿಡದಾಳ ಅವರಿಗೆ ಬಸವ ಕಾರುಣ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶರಣರ ವಿವಿರವುಳ್ಳ ಕೈಪಿಡಿ ಬಿಡುಗಡೆಗೊಳಿಸಲಾಯಿತು.

    ವಿ.ಆರ್​.ಪಾಟೀಲ್​, ವಿನೋದ ಡೊಳ್ಳಿನ, ಮಹೇಶ ಬಳ್ಳಾರಿ, ರಾಜೇಶ ಸಸಿಮಠ, ವೀರೇಶ ಕೊಪ್ಪಳ, ಶಿವಕುಮಾರ ಕುಕನೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts