More

    ಮತ್ತೆ ಶುರು ತೋತಾಪುರಿ; ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣ

    ಬೆಂಗಳೂರು: ಜಗ್ಗೇಶ್ ಅಭಿನಯದ ‘ತೋತಾಪುರಿ’ ಚಿತ್ರಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಎರಡು ಭಾಗಗಳಲ್ಲಿ ತಯಾರಾಗುತ್ತಿರುವ ಈ ಚಿತ್ರದ ಮೊದಲ ಭಾಗದ ಚಿತ್ರೀಕರಣ ಲಾಕ್​ಡೌನ್​ಗೂ ಮುಂಚೆಯೇ ಮುಗಿದಿತ್ತು. ಇನ್ನೇನು ಎರಡನೆಯದು ಶುರುವಾಗಬೇಕು ಎನ್ನುವಷ್ಟರಲ್ಲಿ ಲಾಕ್​ಡೌನ್ ಬಂತು. ಅದು ಮುಗಿಯುತ್ತಿದ್ದಂತೆಯೇ ವಿಜಯಪ್ರಸಾದ್​ರ ‘ಪೆಟ್ರೋಮ್ಯಾಕ್ಸ್’ ಮೊದಲು ಹೊತ್ತಿಕೊಂಡಿತು.

    ಈ ನಡುವೆ ‘ತೋತಾಪುರಿ’ ಕಥೆ ಏನಾಯಿತು ಎಂದು ಜಗ್ಗೇಶ್ ಅವರನ್ನು ಪ್ರಶ್ನಿಸಿದಾಗ, ‘ಇದುವರೆಗೂ 140 ದಿನಗಳ ಕಾಲ ಚಿತ್ರೀಕರಣವಾಗಿದೆ. ಇನ್ನೂ 45 ದಿನಗಳ ಚಿತ್ರೀಕರಣ ಬಾಕಿ. ಈಗಾಗಲೇ ಬಜೆಟ್ 16 ಕೋಟಿ ಆಗಿದೆ. ಚಿತ್ರ ಯಾವಾಗ ಶುರುವಾಗುತ್ತದೋ, ಯಾವಾಗ ಮುಗಿಯುತ್ತದೋ ಗೊತ್ತಿಲ್ಲ …’ ಎಂದು ಹೇಳಿದ್ದರು. ‘ತೋತಾಪುರಿ’ ಚಿತ್ರಕ್ಕೆ ಮತ್ತೆ ಚಾಲನೆ ಸಿಕ್ಕಿದ್ದು, ಸೋಮವಾರದಿಂದ ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣ ಪ್ರಾರಂಭವಾಗಿದೆ.

    ಈ ಕುರಿತು ಮಾತನಾಡುವ ನಿರ್ಮಾಪಕ ಸುರೇಶ್, ‘ಚಿತ್ರೀಕರಣ ಪ್ರಾರಂಭವಾಗಿದೆ. 30 ದಿನಗಳ ಒಂದೇ ಹಂತದ ಚಿತ್ರೀಕರಣ ಮಾಡುವ ಯೋಚನೆ ಇದೆ. ಸದ್ಯ ಜಗ್ಗೇಶ್, ಅದಿತಿ ಪ್ರಭುದೇವ ಮುಂತಾದವರು ಅಭಿನಯಿಸುತ್ತಿರುವ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಮುಂದಿನ ಒಂದು ತಿಂಗಳ ಸತತ ಚಿತ್ರೀಕರಣ ನಡೆಯಲಿದೆ’ ಎನ್ನುತ್ತಾರೆ. ಇನ್ನು, ಬಿಡುಗಡೆ ಯಾವಾಗ? ಈ ಬಗ್ಗೆ ಇನ್ನೂ ತೀರ್ವನವಾಗಿಲ್ಲವಂತೆ. ‘ಸದ್ಯಕ್ಕೆ ಚಿತ್ರತಂಡದ ಗಮನ ಚಿತ್ರೀಕರಣ ಬೇಗ ಮುಗಿಸುವತ್ತ ಇದೆ. ಮೊದಲು ಸಂಪೂರ್ಣ ಚಿತ್ರೀಕರಣ ಮುಗಿಸಿ, ಆ ನಂತರ ಚಿತ್ರ ಬಿಡುಗಡೆಯ ಬಗ್ಗೆ ಪ್ಲಾನ್ ಮಾಡುತ್ತೇವೆ’ ಎನ್ನುತ್ತಾರೆ ಸುರೇಶ್.

    ಕನ್ನಡದಲ್ಲಿಯೂ ಬರಲಿದೆ ತಮಿಳಿನ ‘ಮಾನಾಡು’ ಚಿತ್ರ; ಟೀಸರ್ ಬಿಡುಗಡೆ ಮಾಡ್ತಾರೆ ಕಿಚ್ಚ

    ರಾಕ್​ಸ್ಟಾರ್​ ಆಗಲಿರುವ ‘ರೆಮೋ’ …ಸದ್ಯದಲ್ಲೇ ಹಾಡಿನ ಚಿತ್ರೀಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts