More

    ಲೈಟರ್ ಗನ್ ತೋರಿಸಿ ಹಣ ದೋಚಿದ್ದ ಇಬ್ಬರು ಪೊಲೀಸ್ ಬಲೆಗೆ

    ಬೆಂಗಳೂರು: ವಾಣಿಜ್ಯ ಮಳಿಗೆಗಳಲ್ಲಿ ಹಣ ಸಂಗ್ರಹಿಸುವ ಗುತ್ತಿಗೆ ಪಡೆದಿದ್ದ ಏಜೆನ್ಸಿ ನೌಕರನಿಗೆ ಲೈಟರ್ ಗನ್ ತೋರಿಸಿ ಬೆದರಿಸಿ ಹಾಕಿ ಸುಲಿಗೆ ಮಾಡಿದ್ದ ಇಬ್ಬರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಮುದ್ದನಪಾಳ್ಯದ ರವಿ ಮತ್ತು ರಾಜು ಬಂಧಿತರು. 60 ಸಾವಿರ ರೂ., 2 ಬೈಕ್ ವಶಕ್ಕೆ ಪಡೆಯಲಾಗಿದೆ. ಕೆಂಗೇರಿ ಉಪನಗರದ ಬಂಡೇಮಠ ಹತ್ತಿರದ ಸೂಪರ್ ಮಾರ್ಕೆಟ್‌ನಲ್ಲಿ ಹಣ ಸಂಗ್ರಹಕ್ಕೆ ಬಂದಿದ್ದ ಮಲ್ಲಿಕಾರ್ಜುನ್‌ಗೆ ಬೆದರಿಸಿ ಆರೋಪಿಗಳು ಹಣ ದೋಚಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ವಸಂತ್ ನೇತೃತ್ವದ ತಂಡ ಸಿಸಿ ಕ್ಯಾಮರಾಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಮನಗರ ತಾಲೂಕಿನ ಬಿಡದಿ ಸಮೀಪದ ಗುಡ್ಡದಹಳ್ಳಿ ಗ್ರಾಮದ ರವಿ ಮತ್ತು ರಾಜು ಸೋದರ ಸಂಬಂಧಿಗಳಾಗಿದ್ದು, ಹಲವು ದಿನಗಳಿಂದ ಕೆಂಗೇರಿ ಹತ್ತಿರದ ಮುದ್ದನಪಾಳ್ಯದಲ್ಲಿ ನೆಲೆಸಿದ್ದರು. 2014ರಲ್ಲಿ ಹಲ್ಲೆ ಪ್ರಕರಣದಲ್ಲಿ ಇಬ್ಬರು ಜೈಲು ಸೇರಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ಈ ಮೊದಲು ಕಾರು ಮಾರಾಟ ಮಳಿಗೆಯಲ್ಲಿ ರವಿ ಕೆಲಸ ಮಾಡುತ್ತಿದ್ದ. ಮಳಿಗೆಗೆ ಹಣ ಸಂಗ್ರಹಕ್ಕೆ ಖಾಸಗಿ ಏಜೆನ್ಸಿ ನೌಕರ ಮಲ್ಲಿಕಾರ್ಜುನ್ ಬರುತ್ತಿದ್ದರು. ಆಗ ಮಲ್ಲಿಕಾರ್ಜುನ್ ಪರಿಚಯವಿತ್ತು. ಸದಾ ಕಾಲ ಮಲ್ಲಿಕಾರ್ಜುನ್ ಬಳಿ ಐದಾರು ಲಕ್ಷ ನಗದು ಇರುತ್ತದೆ. ಏನಾದರೂ ಮಾಡಿ ಲೂಟಿ ಮಾಡಬೇಕೆಂದು ಸಂಬಂಧಿ ರಾಜು ಜತೆ ಸೇರಿ ರವಿ ಚರ್ಚೆ ನಡೆಸಿದ್ದ. ಅದಕ್ಕಾಗಿ 1 ತಿಂಗಳು ಮಲ್ಲಿಕಾರ್ಜುನ್‌ನನ್ನು ಬೆನ್ನು ಹತ್ತಿ ಚಲವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದ ಆರೋಪಿಗಳು, ಡಿ.2ರಂದು ಸಂಚು ಕಾರ್ಯರೂಪಕ್ಕಿಳಿಸಲು ನಿರ್ಧರಿಸಿದ್ದರು.

    ಕೆಂಗೇರಿ ಉಪನಗರದ ಬಂಡೇಮಠ ಸಮೀಪದ ಬೆಹತಾರ್ ಸೂಪರ್ ಮಾರ್ಕೆಟ್‌ಗೆ ಮಲ್ಲಿಕಾರ್ಜುನ್ ಹಣ ಸಂಗ್ರಹಕ್ಕೆ ಬಂದಾಗ ನುಗ್ಗಿದ ಆರೋಪಿಗಳು, ಲೈಟರ್ ಗನ್ ತೋರಿಸಿ ಬೆದರಿಸಿ 80 ಸಾವಿರ ರೂ. ದೋಚಿದ್ದರು. ಕೃತ್ಯ ಎಸಗಿದ ಬಳಿಕ ಮಲೆ ಮಹದೇಶ್ವರ ದೇವಾಲಯಕ್ಕೆ ತೆರಳಿದ್ದರು. ಇತ್ತ ನೌಕರ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು 51 ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಯಿತು. ಕಟ್ಟಡ ಪ್ರವೇಶಿಸುವಾಗ ಆರೋಪಿಗಳ ಮುಖ ಚಹರೆ ಪತ್ತೆಯಾಯಿತು. ಇದನ್ನು ಆಧರಿಸಿ ಕಾರ್ಯಾಚರಣೆ ನಡೆಸಿ ಮೆಜೆಸ್ಟಿಕ್​ನಲ್ಲಿನ ಹೋಟೆಲ್‌ವೊಂದರಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಸುಲಿಗೆ ಮಾಡುವ ಉದ್ದೇಶಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಲೈಟರ್ ಗನ್ ಖರೀದಿಸಿದ್ದರು. ಇದು ನಿಜವಾದ ಗನ್ ಎಂದುಕೊಂಡು ಮಲ್ಲಿಕಾರ್ಜುನ್ ಹಣ ಕೊಟ್ಟು ಶರಣಾಗಿದ್ದರು.

    ದೇವಸ್ಥಾನಕ್ಕೆ ಕದಿಯಲು ಹೋದವ ಅಲ್ಲೇ ಮಲಗಿದ! ಪೊಲೀಸರು ಬಂದು ಎಬ್ಬಿಸಿದರೆ, ‘ಚಳಿ, ಮಲಗಲು ಬಿಡಿ’ ಎಂದ!

     

    ಇನ್ನೈದು ವರ್ಷಗಳಲ್ಲಿ 5 ಕೋಟಿ ಉದ್ಯೋಗ ಸೃಷ್ಟಿ: ನಿತಿನ್ ಗಡ್ಕರಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts