ಇನ್ನೈದು ವರ್ಷಗಳಲ್ಲಿ 5 ಕೋಟಿ ಉದ್ಯೋಗ ಸೃಷ್ಟಿ: ನಿತಿನ್ ಗಡ್ಕರಿ

ನವದೆಹಲಿ: ಕೋವಿಡ್​-19 ಹೊಡೆತಕ್ಕೆ ಎಲ್ಲೆಡೆ ಜನರು ಕೆಲಸ ಕಳೆದುಕೊಂಡು ಕಂಗಾಲಾಗಿದ್ದು, ಸಾರ್ವಜನಿಕರು ದೊಡ್ಡ ಪ್ರಮಾಣದಲ್ಲೇ ನಿರುದ್ಯೋಗಿಗಳಾಗಿದ್ದಾರೆ. ಇಂಥದ್ದೊಂದು ಆತಂಕದ ಪರಿಸ್ಥಿತಿ ನಡುವೆಯೇ ಕೇಂದ್ರ ಸರ್ಕಾರ ಆಶಾದಾಯಕ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಮತ್ತು ಎಂಎಸ್​ಎಂಇ ಸಚಿವ ನಿತಿನ್​ ಗಡ್ಕರಿ ಹೊಸ ಉದ್ಯೋಗಗಳ ಸೃಷ್ಟಿಯ ಕುರಿತ ವಿಷಯವನ್ನು ಪ್ರಸ್ತಾಪಿಸಿದ್ದು, ಇದೀಗ ದೇಶದ ಯುವಜನತೆಯ ಕಣ್ಣುಗಳನ್ನು ಅರಳಿಸಿದೆ. ಆಗ್ರೋವಿಷನ್​ ಫೌಂಡೇಷನ್ ಆಯೋಜಿಸಿದ್ದ ಅಗ್ರಿ-ಫುಡ್​ ಪ್ರೊಸೆಸಿಂಗ್ ಸಮ್ಮಿಟ್ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಬಳಿಕ ಗಡ್ಕರಿ ಈ ವಿಷಯ … Continue reading ಇನ್ನೈದು ವರ್ಷಗಳಲ್ಲಿ 5 ಕೋಟಿ ಉದ್ಯೋಗ ಸೃಷ್ಟಿ: ನಿತಿನ್ ಗಡ್ಕರಿ