More

    ಇನ್ನೈದು ವರ್ಷಗಳಲ್ಲಿ 5 ಕೋಟಿ ಉದ್ಯೋಗ ಸೃಷ್ಟಿ: ನಿತಿನ್ ಗಡ್ಕರಿ

    ನವದೆಹಲಿ: ಕೋವಿಡ್​-19 ಹೊಡೆತಕ್ಕೆ ಎಲ್ಲೆಡೆ ಜನರು ಕೆಲಸ ಕಳೆದುಕೊಂಡು ಕಂಗಾಲಾಗಿದ್ದು, ಸಾರ್ವಜನಿಕರು ದೊಡ್ಡ ಪ್ರಮಾಣದಲ್ಲೇ ನಿರುದ್ಯೋಗಿಗಳಾಗಿದ್ದಾರೆ. ಇಂಥದ್ದೊಂದು ಆತಂಕದ ಪರಿಸ್ಥಿತಿ ನಡುವೆಯೇ ಕೇಂದ್ರ ಸರ್ಕಾರ ಆಶಾದಾಯಕ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ.

    ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಮತ್ತು ಎಂಎಸ್​ಎಂಇ ಸಚಿವ ನಿತಿನ್​ ಗಡ್ಕರಿ ಹೊಸ ಉದ್ಯೋಗಗಳ ಸೃಷ್ಟಿಯ ಕುರಿತ ವಿಷಯವನ್ನು ಪ್ರಸ್ತಾಪಿಸಿದ್ದು, ಇದೀಗ ದೇಶದ ಯುವಜನತೆಯ ಕಣ್ಣುಗಳನ್ನು ಅರಳಿಸಿದೆ. ಆಗ್ರೋವಿಷನ್​ ಫೌಂಡೇಷನ್ ಆಯೋಜಿಸಿದ್ದ ಅಗ್ರಿ-ಫುಡ್​ ಪ್ರೊಸೆಸಿಂಗ್ ಸಮ್ಮಿಟ್ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಬಳಿಕ ಗಡ್ಕರಿ ಈ ವಿಷಯ ತಿಳಿಸಿದರು.

    ಗ್ರಾಮೀಣ ಉದ್ಯೋಗಗಳ ವಹಿವಾಟು ಸದ್ಯ 80 ಸಾವಿರ ಕೋಟಿ ರೂ. ಇದ್ದು, ಅದನ್ನು ಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ರೂ.ಗೆ ಏರಿಸುವ ಗುರಿ ಇರಿಸಿಕೊಳ್ಳಲಾಗಿದೆ. ಈ ಮೂಲಕ ಐದು ಕೋಟಿ ಉದ್ಯೋಗಗಳನ್ನೂ ಸೃಷ್ಟಿಸಲಾಗುವುದು. ಗ್ರಾಮೀಣ ಹಾಗೂ ಕೃಷಿ ಕ್ಷೇತ್ರದಲ್ಲಿನ ಬೆಳವಣಿಗೆ ಮೂಲಕ ಈ ಗುರಿಯನ್ನು ಸಾಧಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. (ಏಜೆನ್ಸೀಸ್​)

    ಪ್ರಣಬ್​ ಮುಖರ್ಜಿ ಮಕ್ಕಳ ನಡುವೆ ಕಿತ್ತಾಟ; ಕಾರಣ ಏನು ಗೊತ್ತಾ?

    ಶಬರಿಮಲೆಯಲ್ಲಿಲ್ಲ ಈ ಸಲ ಪಂಪಾ ಸ್ನಾನ; ಹಾಗಾದರೆ ಮತ್ತೇನು ವ್ಯವಸ್ಥೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts