More

    ಪಕ್ಷಕ್ಕೆ ವಂಚಿಸಿದವರಿಗೆ ಮತದಾರರ ಎದುರು ಹೋಗಲು ಮುಖ ಇರುವುದಿಲ್ಲ

    ಜೈಪುರ: ತಮ್ಮ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಸಚಿನ್​ ಪೈಲಟ್​ ವಿರುದ್ಧ ಪರೋಕ್ಷ ವಾಗ್ದಾಳಿ ಮುಂದುವರಿಸಿರುವ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​, ಪಕ್ಷದ ಬೆನ್ನಿಗೆ ಇರಿದವರಿಗೆ ಮತದಾರರ ಎದುರು ಹೋಗಲು ಮುಖ ಇರುವುದಿಲ್ಲ ಎಂದು ಎಚ್ಚರಿಸಿದ್ದಾರೆ.

    ಖಾಸಗಿ ಹೋಟೆಲ್​ನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್​ನ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು ತಮ್ಮ ಸರ್ಕಾರವನ್ನು ಉರುಳಿಸಲು ತುಂಬಾ ಹಿಂದಿನಿಂದಲೂ ಹುನ್ನಾರಗಳನ್ನು ಮಾಡಲಾಗುತ್ತಿತ್ತು ಎಂದು ಪುನರುಚ್ಚರಿಸಿdru. ತಮ್ಮ ಸರ್ಕಾರ ಐದು ವರ್ಷಗಳ ಪೂರ್ಣಾವಧಿ ಆಡಳಿತ ಪೂರೈಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ರಾಜ್ಯ ಸರ್ಕಾರ ರಾಜಸ್ಥಾನದಾದ್ಯಂತ ಹಬ್ಬಿರುವ ಕರೊನಾ ವೈರಾಣು ಸೋಂಕು ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದೆ. ಆದರೆ, ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಒಬ್ಬ ಮುಖಂಡರು ಕೆಲವು ಶಾಸಕರು ಹಾಗೂ ಬಿಜೆಪಿಯ ಜತೆಗೂಡಿ ಸರ್ಕಾರವನ್ನು ಕಿತ್ತೊಗೆಯಲು ಹುನ್ನಾರ ನಡೆಸಿದರು ಎಂದು ಸಚಿನ್​ ಪೈಲಟ್​ ಹೆಸರು ತೆಗೆದುಕೊಳ್ಳದೆ ವಾಗ್ದಾಳಿ ನಡೆಸಿದರು. ಅವರ ಈ ಕೃತ್ಯ ಅಸಹನೀಯ ಹಾಗೂ ಖಂಡನೀಯ. ಪಕ್ಷದ ಬೆನ್ನಿಗೆ ಇರಿದವರಿಗೆ ಮತದಾರರ ಮುಂದೆ ಹೋಗಲು ಮುಖವೇ ಇರುವುದಿಲ್ಲ ಎಂದು ಹೇಳಿದರು.

    ಇದನ್ನೂ ಓದಿ: ಪತಿಯ ಆಸರೆ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಮಹಿಳೆಗೆ ಸೂರು ಒದಗಿಸಿದ ಸೋನು ಸೂದ್​

    ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ಕಾಂಗ್ರೆಸ್​ನ ಜನಪ್ರತಿನಿಧಿಗಳು ಅದಕ್ಕೆ ಆಸ್ಪದ ಕೊಡದಿರಲು ಹೋರಾಟ ನಡೆಸುತ್ತಿದ್ದಾರೆ. ಸತ್ಯಕ್ಕೆ ಜಯ ದೊರೆಯುವವರೆಗೂ ಈ ಹೋರಾಟ ಮುಂದುವರಿಯಲಿದೆ. ನಮ್ಮ ಸರ್ಕಾರ ಬಲಿಷ್ಠವಾಗಿದ್ದು, ಸ್ಥಿರವಾಗಿದೆ. ಐದು ವರ್ಷಗಳವರೆಗೆ ಜನಸೇವೆಯನ್ನು ಮುಂದುವರಿಸಲಿದೆ ಎಂದು ತಿಳಿಸಿದರು.

    ಶಾಸಕಾಂಗ ಪಕ್ಷದ ಸಭೆಯಲ್ಲಿ ಉಸ್ಥಿತರಿದ್ದ ಶಾಸಕರೆಲ್ಲರೂ ಗೆಹ್ಲೋಟ್​ ಅವರ ನಾಯಕತ್ವಕ್ಕೆ ಒಕ್ಕೂರಲ ಬೆಂಬಲ ಸೂಚಿಸಿದರು. ಅಲ್ಲದೆ, ಸತ್ಯದ ಹೋರಾಟದಲ್ಲಿ ಅವರೊಂದಿಗೆ ಇರುವುದಾಗಿ ಭರವಸೆ ನಿಡಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜಸ್ಥಾನದ ಉಸ್ತುವಾರಿ ಅವಿನಾಶ್​ ಪಾಂಡೆ, ಕೆ.ಸಿ. ವೇಣುಗೋಪಾಲ್​, ಅಜಯ್​ ಮಾಕೆನ್​, ರಣದೀಪ್​ ಸಿಂಗ್​ ಸುರ್ಜೇವಾಲಾ ಮತ್ತಿತರರು ಉಪಸ್ಥಿತರಿದ್ದರು.

    ನನ್ನಷ್ಟು ದೊಡ್ಡ ದೇಶಭಕ್ತ ಇನ್ಯಾರೂ ಇಲ್ಲ…ನೋಡಿ ಮಾಸ್ಕ್​ ಧರಿಸಿದ್ದೇನೆ: ಯುಎಸ್​ ಅಧ್ಯಕ್ಷ ಟ್ರಂಪ್​ ಟ್ವೀಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts