ಆ ಆರು ಸಚಿವರಿಗೆ ಶಾಸಕರ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆಯೇ ಇಲ್ಲ ಎಂದಿದ್ದಕ್ಕೆ ವಿಧಾನಸಭೆಯಲ್ಲಿ ಗದ್ದಲ

blank

ಬೆಂಗಳೂರು: ಮಾಧ್ಯಮಗಳಲ್ಲಿ ಮಾನಹಾನಿ ಸುದ್ದಿ ಪ್ರಸಾರ ಮಾಡದಿರುವಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವ 6 ಸಚಿವರಿಗೆ ಶಾಸಕರು ಕೇಳುವ ಪ್ರಶ್ನೆಗೆ ಉತ್ತರಿಸುವ ನೈತಿಕತೆ ಇಲ್ಲ ಎಂಬ ಕಾಂಗ್ರೆಸ್ ನಿರ್ಧಾರ ವಿಧಾನಸಭೆ ಕಲಾಪದಲ್ಲಿ ಮತ್ತೆ ಗದ್ದಲಕ್ಕೆ ಕಾರಣವಾಯಿತು. ಈ ವಿಚಾರವಾಗಿ ಕಾಂಗ್ರೆಸ್‌ನ ಪಿ.ಟಿ. ಪರಮೇಶ್ವರ ನಾಯ್ಕ್​ ಅವರನ್ನು ಸ್ಪೀಕರ್ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.

ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್‌ನ ಪಿ.ಟಿ. ಪರಮೇಶ್ವರ್ ನಾಯ್ಕ್​ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ನಾರಾಯಣಗೌಡ ಅವರಿಗೆ ಪ್ರಶ್ನೆ ಕೇಳಬೇಕಿತ್ತು. ಆದರೆ, ಸಚಿವರಿಗೆ ಉತ್ತರಿಸುವ ನೈತಿಕತೆ ಇಲ್ಲ. ಹೀಗಾಗಿ ಅವರಿಗೆ ಪ್ರಶ್ನೆ ಕೇಳುವುದಿಲ್ಲ ಎಂದು ಪರಮೇಶ್ವರ ನಾಯ್ಕ್​ ಹೇಳಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರಶ್ನೆ ಕೇಳುವುದಿಲ್ಲವೆಂದರೆ ಬೇಡ. ಆದರೆ, ಸಚಿವರ ನೈತಿಕತೆ ಬಗ್ಗೆ ಪ್ರಶ್ನಿಸಲು ಇವರಿಗೆ ಯಾವ ಅಧಿಕಾರವಿದೆ. ಹಾಗಾದರೆ, ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಜನ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿಲ್ಲ. ಅವರಿಗೆಲ್ಲ ನೈತಿಕತೆ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: 10 ಲಕ್ಷ ಜನರಿಗೆ ಒಟ್ಟು 1,500 ಕೋಟಿ ರೂ. ಮೋಸ; ಬೆಂಗಳೂರಿನ ಕಂಪನಿಯ 24 ಜನರನ್ನು ಬಂಧಿಸಿದ ಸೈಬರಾಬಾದ್ ಪೊಲೀಸರು

ಈ ನಡುವೆ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರ ನಡುವೆ ವಾಗ್ವಾದ ನಡೆಯಿತು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಎಲ್ಲರನ್ನೂ ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಆದರೂ, ಪರಮೇಶ್ವರ್ ನಾಯ್ಕ್​ ಬಿಜೆಪಿ ಸಚಿವರು ಮತ್ತು ಶಾಸಕರ ವಿರುದ್ಧ ಮಾತನಾಡುತ್ತಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಸ್ಪೀಕರ್ ಆದ ನಂತರ ಇದೇ ಮೊದಲ ಬಾರಿಗೆ ತಮ್ಮ ಸ್ಥಾನದಿಂದ ಎದ್ದು ನಿಂತು ಪರಮೇಶ್ವರ್​ಗೆ ಎಚ್ಚರಿಕೆ ನೀಡಿದರು. ಸದನದಲ್ಲಿ ಈ ರೀತಿಯ ವರ್ತನೆ ಸರಿಯಲ್ಲ. ಸಭಾಧ್ಯಕ್ಷರ ಪೀಠಕ್ಕೆ ಗೌರವ ಕೊಡುವುದನ್ನು ಮೊದಲು ಕಲಿಯಿರಿ ಎಂದು ಹೇಳಿದರು.

ಆಗ ಸುಮ್ಮನಾದ ಪಿ.ಟಿ. ಪರಮೇಶ್ವರ್‌ ನಾಯ್ಕ್​, ನಾನು ಪ್ರಶ್ನೆ ಕೇಳುವುದಿಲ್ಲ ಎಂದು ಹೇಳಿ ಕುಳಿತಿದ್ದೆ. ಆದರೆ, ಗೃಹ ಸಚಿವರು ಅದಕ್ಕೆ ಸ್ಪಷ್ಟನೆ ನೀಡುವ ಅಗತ್ಯ ಇರಲಿಲ್ಲ ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು. ಆಗ ಮತ್ತೆ ಬಸವರಾಜ ಬೊಮ್ಮಾಯಿ ಮಾತನಾಡಲು ಎದ್ದು ನಿಂತಾಗ, ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ, ಸಭಾಧ್ಯಕ್ಷರ ನೀತಿ ಪಾಠ ವಿರೋಧ ಪಕ್ಷದವರಿಗೆ ಮಾತ್ರವೇ? ಅಥವಾ ಆಡಳಿತ ಪಕ್ಷದವರಿಗೂ ಮಾಡುತ್ತೀರಾ? ಎಂದು ಪ್ರಶ್ನಿಸಿದರು. ಆಗ ಸ್ಪೀಕರ್, ಎಲ್ಲ ಶಾಸಕರೂ ನನಗೆ ಸಮಾನರೇ, ಅವರಿಗೂ ಅದನ್ನೇ ಹೇಳುವುದು ಎಂದು ಹೇಳಿ ಗದ್ದಲ ಕೊನೆಯಾಗಿಸಿದರು.

ಇದನ್ನೂ ಓದಿ: ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಯುವತಿ ಸಾವು; ಜೀವ ಕಳೆದುಕೊಳ್ಳುವಂತೆ ಮಾಡಿತು ಸಣ್ಣದೊಂದು ಆಕಸ್ಮಿಕ

ಪಕ್ಷದ ನಿರ್ಧಾರ ಧಿಕ್ಕರಿಸಿದ ತನ್ವೀರ್ ಸೇಠ್: ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಸಚಿವರಿಗೆ ಪ್ರಶ್ನೆ ಕೇಳುವುದು ಬೇಡ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರವಾಗಿದ್ದರೂ, ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರು ನಾರಾಯಣ ಗೌಡ ಅವರಿಗೆ ಚುಕ್ಕೆ ಗುರುತಿನ ಪ್ರಶ್ನೆ ಕೇಳಿ, ಉತ್ತರ ಪಡೆದರು. ಆ ಮೂಲಕ ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ನಡೆದುಕೊಂಡರು.

ಕರೊನಾ ಲಸಿಕೆ ಪಡೆದ ಎರಡು ಗಂಟೆಯಲ್ಲಿ ವೃದ್ಧೆ ಸಾವು!

‘ಹಾಗೆಲ್ಲ ಮಾತಾಡ್ಬೇಡಿ, ಯಾರಾದ್ರೂ ಸಿ.ಡಿ. ಮಾಡಿ ಬಿಟ್ಟಾರು’; ಜಿಲ್ಲಾಧಿಕಾರಿಗಳ ಜತೆ ಹಳ್ಳಿಯಲ್ಲಿ ಮಲಗುತ್ತೇವೆ ಎಂದವರಿಗೆ ಕಿವಿಮಾತು

Share This Article

ಈ ಸಮಸ್ಯೆಗಳಿರುವ ಜನರು, ಅಪ್ಪಿತಪ್ಪಿಯೂ ಸಹ ಬಿಸಿನೀರನ್ನು ಕುಡಿಯಬಾರದು! hot water

hot water: ಸಾಮಾನ್ಯವಾಗಿ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಕುಡಿಯಲು ಇಷ್ಟಪಡುತ್ತಾರೆ.  ವಯಸ್ಕರು…

ದಂಪತಿ ನಡುವೆ ಜಗಳ, ಹಣದ ಸಮಸ್ಯೆಗಳನ್ನು ತಪ್ಪಿಸಲು, ಮನೆಯ ಈ ಮೂಲೆಯಲ್ಲಿ ನವಿಲು ಗರಿಯನ್ನು ಇರಿಸಿ ಸಾಕು… Vastu Tips

Vastu Tips : ಪೌರಾಣಿಕ ಗ್ರಂಥಗಳ ಪ್ರಕಾರ, ಹಿಂದೂ ಧರ್ಮದಲ್ಲಿ ನವಿಲು ಗರಿಗಳಿಗೆ ವಿಶೇಷ ಸ್ಥಾನವಿದೆ. …

ಮಧ್ಯಾಹ್ನದ ಊಟದಲ್ಲಿ ಈ 2 ಪದಾರ್ಥಗಳನ್ನು ತಿಂದರೆ ನಿಮ್ಮನ್ನು ಮಧ್ಯಾಹ್ನ ಕಾಡುವ ನಿದ್ರೆ ಮಾಯ!

sleep: ಮಧ್ಯಾಹ್ನ ಊಟ ಮಾಡಿದ ನಂತರ ನಿದ್ರೆ ಬರುವುದು  ಸಹಜ.  ಈ ರೀತಿಯ ನಿದ್ರೆ ಬರುವುದರಿಂದ,…