More

    110 ಅಡಿ ಎತ್ತರದ ಕಂಬದಲ್ಲಿ 30 ಅಡಿ ಉದ್ದದ ತ್ರಿವರ್ಣ ಧ್ವಜಾರೋಹಣ

    ಉಳ್ಳಾಲ: ತೊಕ್ಕೊಟ್ಟಿನಲ್ಲಿ 110 ಅಡಿ ಎತ್ತರದ ಕಂಬದಲ್ಲಿ 30 ಅಡಿ ಉದ್ದದ ತ್ರಿವರ್ಣ ಧ್ವಜವನ್ನು ಯು.ಟಿ.ಖಾದರ್ ಧ್ವಜಾರೋಹಣಗೈಯುವ ಮೂಲಕ ಸೋಮವಾರ ಉದ್ಘಾಟಿಸಿದರು.

    ನಾವು ಇದ್ದರೂ ಇಲ್ಲದಿದ್ದರೂ 110 ಅಡಿ ಎತ್ತರದ ರಾಷ್ಟ್ರಧ್ವಜ ಉಳ್ಳಾಲದ ಸ್ವಾಭಿಮಾನದ ಸಂಕೇತವಾಗಿ ಇರಲಿದೆ. ದ್ವೇಷ ಎನ್ನುವ ಪದವನ್ನು ಹೃದಯದಿಂದ ಕಿತ್ತೆಸೆಯಬೇಕು. ಯಾರೊಬ್ಬರೂ ಸಮಾಜಕ್ಕೆ ಮಾರಕವಾಗಬಾರದು. 75ನೇ ಸ್ವಾತಂತ್ರ್ಯೋತ್ಸವದವರೆಗೆ ನಾವು ಬದುಕಿದ್ದು ಭಾಗ್ಯ, ಮುಂದಿನ ಜನಾಂಗ ದೇಶಕ್ಕೆ ಕೊಡುಗೆ ನೀಡಲು ಪಣ ತೊಡಬೇಕು ಎಂದರು.

    ನಿವೃತ್ತ ಯೋಧರು, ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. 11 ಪ್ರೌಢಶಾಲೆ ಮತ್ತು 5 ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಉಳ್ಳಾಲದಿಂದ ಧ್ವಜಸ್ತಂಭದವರೆಗೆ ಪಾದಯಾತ್ರೆ ನಡೆಯಿತು.

    ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ತಹಸೀಲ್ದಾರ್ ಗುರುಪ್ರಸಾದ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ನಾಗರಾಜ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸತೀಶ್ ಕುಂಪಲ, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಮಂಡಲ ಅಧ್ಯಕ್ಷ ಚಂದ್ರಹಾಸ ಪಂಡಿತ್‌ಹೌಸ್, ನಗರಸಭಾ ಅಧ್ಯಕ್ಷೆ ಚಿತ್ರಕಲಾ, ಉಪಾಧ್ಯಕ್ಷ ಅಯೂಬ್ ಮಂಚಿಲ, ಉಳ್ಳಾಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಭಟ್ನಗರ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್‌ಮೋನು ಮಲಾರ್, ನಗರಸಭಾ ಸದಸ್ಯರು, ಅಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಶಿರ್ಲಾಲ್ ಹಾಗೂ ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts