More

    VIDEO | ಓವರ್‌ಗೆ 6 ಸಿಕ್ಸರ್ ಸಿಡಿಸಿದ ಥಿಸರ ಪೆರೇರಾ, ಶ್ರೀಲಂಕಾದ ಮೊದಲ ಸಾಧಕ

    ಕೊಲಂಬೊ: ಆಲ್ರೌಂಡರ್ ಥಿಸರ ಪೆರೇರಾ ವೃತ್ತಿಪರ ಕ್ರಿಕೆಟ್‌ನಲ್ಲಿ ಓವರ್‌ನ ಎಲ್ಲ 6 ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ ಶ್ರೀಲಂಕಾದ ಮೊದಲ ಕ್ರಿಕೆಟಿಗ ಎನಿಸಿದ್ದಾರೆ. ಶ್ರೀಲಂಕಾದ ದೇಶೀಯ ಕ್ರಿಕೆಟ್ ಟೂರ್ನಿ ಮೇಜರ್ ಕ್ಲಬ್ ಲಿಮಿಟೆಡ್ ಓವರ್ ಟೂರ್ನಿಯ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

    ಬ್ಲೂಮ್‌ಫೀಲ್ಡ್ ಕ್ರಿಕೆಟ್ ಆ್ಯಂಡ್ ಅಥ್ಲೆಟಿಕ್ಸ್ ಕ್ಲಬ್ ವಿರುದ್ಧದ ಲಿಸ್ಟ್ ಎ ಏಕದಿನದ ಪಂದ್ಯದಲ್ಲಿ ಶ್ರೀಲಂಕಾ ಆರ್ಮಿ ತಂಡವನ್ನು ಮುನ್ನಡೆಸುತ್ತಿದ್ದ ಪೆರೇರಾ 13 ಎಸೆತಗಳಲ್ಲೇ 8 ಸಿಕ್ಸರ್ ಒಳಗೊಂಡ 52 ರನ್ ಸಿಡಿಸಿದರು. ಅರೆಕಾಲಿಕ ಆಫ್​ ಸ್ಪಿನ್ನರ್ ದಿಲ್ಹನ್ ಕೂರೇ ಓವರ್‌ನ ಎಲ್ಲ 6 ಎಸೆತಗಳಲ್ಲಿ ಪೆರೇರಾ ಸಿಕ್ಸರ್ ಬಾರಿಸಿದರು.

    ಇದನ್ನೂ ಓದಿ: ಭಾರತ ಲೆಜೆಂಡ್ಸ್ ತಂಡಕ್ಕೆ ಕರೊನಾ ಹೊಡೆತ, ನಾಲ್ಕಕ್ಕೇರಿದ ಪಾಸಿಟಿವ್ ಕೇಸ್!

    ಪೆರೇರಾ ಒಟ್ಟಾರೆಯಾಗಿ ವೃತ್ತಿಪರ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ 9ನೇ ಕ್ರಿಕೆಟಿಗರೆನಿಸಿದರು. ಈ ಹಿಂದಿನ ಸಾಧಕರೆಂದರೆ ಗ್ಯಾರಿಫೀಲ್ಡ್ ಸೋಬರ್ರ್ಸ್ (1968)‌, ರವಿಶಾಸ್ತ್ರಿ (1985), ಹರ್ಶಲ್ ಗಿಬ್ಸ್ (2007), ಯುವರಾಜ್ ಸಿಂಗ್ (2007), ರೋಸಿ ವೈಟ್‌ಲಿ (2017), ಹಜ್ರತುಲ್ಲಾ ಜಜೈ (2018), ಲಿಯೋ ಕಾರ್ಟರ್ (2020) ಮತ್ತು ಕೈರಾನ್ ಪೊಲ್ಲಾರ್ಡ್ (2021).

    ಈ ಸಲ ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿಗೆ ಹೊಸ ಬ್ಯಾಟಿಂಗ್ ಕ್ರಮಾಂಕ!

    ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೊಸ ನಾಯಕನಾಗಲು ಯಾರ‌್ಯಾರು ಪೈಪೋಟಿಯಲ್ಲಿದ್ದಾರೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts