More

    ಮಾನಸಿಕ ಒತ್ತಡ ನಿಯಂತ್ರಣಕ್ಕೆ ಈ ಯೋಗಾಸನ ಮಾಡಿ

    ಮನಸ್ಸಿನ ಒತ್ತಡ ಕಡಿಮೆ ಮಾಡಲು ಸಹಕಾರಿಯಾದ ಆಸನವೆಂದರೆ ‘ಅಧೋಮುಖ ಶ್ವಾನಾಸನ’. ಇದಕ್ಕೆ ಇಂಗ್ಲೀಷಿನಲ್ಲಿ Dog Pose ಎಂದು ಕರೆಯುತ್ತಾರೆ. ಅಧೋಮುಖ ಎಂದರೆ ತಲೆಯನ್ನು ಕೆಳಗೆ ಮಾಡಿ ಮಾಡುವ ಭಂಗಿ ಇದಾಗಿದೆ. ಈ ಆಸನ ಮಾಡಿದಾಗ ಶಿರಸ್ಸಿಗೆ ರಕ್ತಸಂಚಲನೆ ಹೆಚ್ಚಿ, ನರಮಂಡಲ ಸಚೇತನಗೊಳ್ಳುತ್ತದೆ.

    ಪ್ರಯೋಜನಗಳು: ಮೆದುಳಿನ ಜೀವಕೋಶಗಳಿಗೆ ಹೆಚ್ಚಿನ ಆಮ್ಲಜನಕ ದೊರಕಿ ಮೆದುಳಿನ ನ್ಯೂರಾನ್ಸ್​ ಚುರುಕುಗೊಳ್ಳುತ್ತವೆ. ಎದೆಯ ಮೇಲೆ ಒತ್ತಡವಿಲ್ಲದ್ದರಿಂದ ಶುದ್ಧ ರಕ್ತವು ಮೆದುಳಿಗೆ ಧಾರಾಳವಾಗಿ ಹರಿಯುತ್ತದೆ. ಅಸ್ತಮಾ ನಿಯಂತ್ರಣಕ್ಕೆ ಸಹಕಾರಿ. ಮನಸ್ಸಿನ ಆಯಾಸ ನಿಯಂತ್ರಣ, ಮೈಗ್ರೇನ್​, ಅಲರ್ಜಿ, ಸೆಯಾಟಿಕ, ಸೈನೊಸೈಟಿಸ್​ ನಿಯಂತ್ರಣಕ್ಕೆ ಈ ಆಸನ ಸಹಕಾರಿ. ಕಾಲುಗಳ ಹಿಮ್ಮಡಿಯ ಪೆಡಸುತನ ನಿವಾರಣೆಗೆ ಸಹಕಾರಿ. ತೊಡೆ ಮತ್ತು ಕಾಲುಗಳಿಗೆ ಉತ್ತಮ ವ್ಯಾಯಾಮ ನೀಡುತ್ತದೆ. ಕಿಬ್ಬೊಟ್ಟೆಯ ಸ್ನಾಯುಗಳು, ಕೈರಟ್ಟೆ ಮತ್ತು ಕಾಲುಗಳು ಬಲಗೊಳ್ಳುತ್ತವೆ. ಆಜ್ಞಾ ಚಕ್ರ ಮತ್ತು ಸಹಸ್ರಾರ ಚಕ್ರಗಳ ಸುಸ್ಥಿತಿ ಉಂಟಾಗುತ್ತದೆ.

    ಇದನ್ನೂ ಓದಿ: ಕೋಚ್ ಕಾಶಿನಾಥ್​ ನಾಯ್ಕ್​ ಮನೆಗೆ ತೆರಳಿ ಗುರುವಂದನೆ ಸಲ್ಲಿಸಿದ ನೀರಜ್​ ಚೋಪ್ರಾ

    ಅಭ್ಯಾಸ ಕ್ರಮ: ಜಮಖಾನದ ಮೇಲೆ ಮಕರಾಸನದಲ್ಲಿ ಮಲಗುವುದು. ಕಾಲುಗಳನ್ನು ಜೋಡಿಸಿ, ಭುಜದ ಕೆಳಗೆ ಎರಡೂ ಕೈಗಳನ್ನು ಇಟ್ಟು ಹಣೆಯನ್ನು ನೆಲಕ್ಕೆ ತಾಗಿಸುವುದು. ಈಗ ಉಸಿರನ್ನು ತೆಗೆದುಕೊಳ್ಳುತ್ತಾ ತಲೆಯನ್ನು, ಎದೆಯ ಭಾಗವನ್ನು ಮೇಲಕ್ಕೆ ಎತ್ತುವುದು. ನಂತರ ಉಸಿರನ್ನು ಬಿಡುತ್ತಾ ನಿಧಾನವಾಗಿ ತಲೆಯನ್ನು ಕಾಲುಗಳ ದಿಕ್ಕಿಗೆ ಸರಿಸಿ, ತಲೆಯ ನಡುನೆತ್ತಿಯನ್ನು ನೆಲಕ್ಕೆ ತಾಕಿಸಲು ಪ್ರಯತ್ನಿಸಿ. ಕಾಲುಗಳ ಹಿಮ್ಮಡಿಯನ್ನು ನೆಲಕ್ಕೆ ಒತ್ತಿರಬೇಕು. ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಕಣ್ಣುಮುಚ್ಚಿ ಆಳ ಉಸಿರಾಟ ನಡೆಸಬೇಕು. ದೇಹ ಕೆಳಮುಖವಾದ ಇಂಗ್ಲೀಷಿನ ವಿ ಆಕಾರದಲ್ಲಿ ಕಾಣುವಂತಿರಬೇಕು. ನಂತರ ಉಸಿರನ್ನು ಬಿಡುತ್ತಾ ನಿಧಾನವಾಗಿ ಮಕರಾಸನಕ್ಕೆ ಬಂದು ವಿಶ್ರಮಿಸಬೇಕು.

    ಕಣ್ಣಿನ ರೆಟಿನಾ ಸಮಸ್ಯೆ, ಹೆಚ್ಚಿನ ರಕ್ತದೊತ್ತಡ, ಭುಜಗಳ ಕೀಲುನೋವು, ಡಯೇರಿಯಾ ಸಮಸ್ಯೆ ಇರುವವರು ಅಧೋಮುಖ ಶ್ವಾನಾಸನ ಮಾಡಬಾರದು.

    ಕಾಲಿನ ಮಾಂಸಖಂಡಗಳನ್ನು ಪಳಗಿಸುವ ವೀರಭದ್ರಾಸನ

    ಸರ್ಕಾರಿ ನೌಕರಿಗಾಗಿ ನಕಲಿ ಅಂಕಪಟ್ಟಿ ಸಲ್ಲಿಕೆ! ಮೂರು ವರ್ಷದ ನಂತರ ಕೃತ್ಯ ಬೆಳಕಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts